Monday, November 23, 2026

ಪ್ರಾಯೋಗಿಕ ಆವೃತ್ತಿ

ಕರಾಟೆ ಬೆಲ್ಟ್ ಪರೀಕ್ಷೆ- ತರಬೇತಿ ಶಿಬಿರ

ಮಂಡ್ಯ ನಗರದ ಬಾಲ ಭವನದಲ್ಲಿ ಗೋಜು-ರಿಯೋ ಕರಾಟೆ ಡೋ ಅಕಾಡೆಮಿ ಹಾಗೂ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ವತಿಯಿಂದ 2022-23ನೇ ಸಾಲಿನ ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ತರಬೇತಿ ಶಿಬಿರವು ಜರುಗಿತು.

ಈ ಶಿಬಿರವು ಶಿಹಾನ್ ಪ್ರಕಾಶ್ ರವರ ಮಾರ್ಗದರ್ಶನದಲ್ಲಿ ನಡೆಯಿತು. ಹಾಗೂ ಕರಾಟೆ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಕರಾಟೆಯ ತಂತ್ರಗಳನ್ನು ಹೇಳಿಕೊಡಲಾಯಿತು.

ಈ ಪರೀಕ್ಷೆಯಲ್ಲಿ ಸುಮಾರು 75 ನುರಿತ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಅವರಿಗೆ ಕಟಾ ಹಾಗೂ ಕುಮುತೆ ವಿಭಾಗಗಳಲ್ಲಿ ವಿಶೇಷ ತರಬೇತಿ ನೀಡಲಾಯಿತು. ವಿದ್ಯಾರ್ಥಿನಿಯರಿಗೆ ವಿಶೇಷವಾದ ಕರಾಟೆ ಆತ್ಮರಕ್ಷಣಾ ಕಲೆಗಳ ಬಗ್ಗೆ ತರಬೇತಿ ನೀಡಲಾಯಿತು.

ಈ ಸಂದರ್ಭದಲ್ಲಿ ಕರಾಟೆ ಶಾಲೆಯ ತರಬೇತುದಾರರಾದ ಶಿಹಾನ್ ಲೋಕೇಶ್ ಮೊದಲಿಯಾರ್, ಶಿವರಂಜನಿ, ಸುಮುಖ್, ಸಚಿನ್ ಕುಮಾರ್, ಪ್ರತಾಪ್, ಶರತ್, ಗೌತಮ್, ಬಸವ ಸಾಗರ್ ಇನ್ನಿತರರಿದ್ದರು.

ಇದೇ ಸಂದರ್ಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬೆಲ್ಟ್ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ