ವರದಿ : ಪ್ರಭು ವಿ ಎಸ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಘೋಷಣೆ ಮಾಡಿರುವ ಯುವ ಚೈತನ್ಯ ಯೋಜನೆಯನ್ನು ಜಾರಿಗೊಳಿಸಲು ಕ್ಷೇತ್ರದ ಯುವ ಜನತೆ ಬೆಂಬಲಿಸಬೇಕೆಂದು ಶಾಸಕ ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.
ಮದ್ದೂರು ಪಟ್ಟಣದ ಬಿಂದಾಸ್ ಪಾರ್ಟಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಯುವಕರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆದರೆ ಯುವ ಜನಾಂಗಕ್ಕೆ ಅನುಕೂಲವಾಗುವ ಯುವ ಚೈತನ್ಯ ಯೋಜನೆಯನ್ನು ಜಾರಿಗೊಳಿಸಲು ಅನುಕೂಲ ಕಲ್ಪಿಸಲಿದ್ದಾರೆ ಎಂದು ಭರವಸೆ ನೀಡಿದರು.

ಯುವ ಜನತೆ ಕೇವಲ ಕುಟುಂಬದ ಆಸ್ತಿ ಅಲ್ಲ. ಅವರು ದೇಶದ ಆಸ್ತಿಯಾಗಿದ್ದು, ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ಬೆಳೆಸುವ ಮಹತ್ಕಾರ್ಯಕ್ಕೆ ಜೆಡಿಎಸ್ ಪಕ್ಷ ಮುಂದಾಗಿದ್ದು, ಯುವ ಜನತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಬೇಕೆಂದು ಶಾಸಕ ತಮ್ಮಣ್ಣ ಮನವಿ ಮಾಡಿದರು.
ಗ್ರಾಮೀಣ ಪ್ರದೇಶದ ಯುವ ಜನತೆಗೆ ಉನ್ನತ ಶಿಕ್ಷಣ ಕೊಡಿಸುವ ಜೊತೆಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಜೆಡಿಎಸ್ ಪಕ್ಷ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದು ಅಧಿಕಾರಕ್ಕೆ ಬಂದರೆ ಯುವ ಜನತೆ, ರೈತರು ಸೇರಿದಂತೆ ಹಾಗೂ ಸರ್ವರಿಗೂ ಅನುಕೂಲವಾಗುವ ಯೋಜನೆಗಳನ್ನು ಕುಮಾರಸ್ವಾಮಿ ಅವರು ರೂಪಿಸಲಿದ್ದಾರೆ ಎಂದು ಭರವಸೆ ನೀಡಿದರು.
ಯುವ ಜನತೆ ಸಭ್ಯತೆ ಮತ್ತು ಸಂಸ್ಕಾರವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳವ ಮೂಲಕ ತಮ್ಮ ಕುಟುಂಬಗಳಿಗೆ ಜವಾಬ್ದಾರಿ ಹೋರುವ ಮೂಲಕ ದೇಶಕ್ಕೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.
ಜೆಡಿಎಸ್ ಪಕ್ಷಕ್ಕೆ ಯುವಕರ ಸೇರ್ಪಡೆ
ಪ್ರಶಾಂತ್ (ಕುಳ್ಳಿ), ವರುಣ್, ಜ್ಯೋತಿ, ಕುಮಾರ್ ಬೆಸಗರಹಳ್ಳಿ, ಗಂಗಾ, ಸಾಗರ್, ಗೊರವನಹಳ್ಳಿ ಪ್ರತಾಪ್, ಕಾರ್ತಿಕ್, ಕೀರ್ತಿ, ದೀಕ್ಷಿತ್, ಕುಶಾಲ್, ಜಯಂತ್, ರೇಣು, ನಿಖಿಲ್, ಮಾದು, ನಂದೀಶ್, ಮನು, ಸೇರಿದಂತೆ ನೂರಾರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದ ವೇಳೆ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಮಾಜಿ ಅಧ್ಯಕ್ಷ ಎಸ್ ಮಹೇಶ್ ಸದಸ್ಯರಾದ ವನಿತಾ, ಮುಖಂಡರಾದ ಮಾದನಾಯಕನ ಹಳ್ಳಿ ರಾಜಣ್ಣ .ಪದ್ಮಾ ಹರೀಶ್. ನಗರಕೆರೆ ಸಂದೀಪ್. ದೀಪಕ್. ಚೇತನ್ ಯುವಕ ಮಿತ್ರರು ಹಾಜರಿದ್ದರು.




