ಸೆ.29 ರಂದು ಕರ್ನಾಟಕ ಬಂದ್ ಗೆ ಕದಂಬ ಸೈನ್ಯ ಕನ್ನಡ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಸರ್ಕಾರವು ಬಂದ್ ಅನ್ನು ಹತ್ತಿಕ್ಕಲು ಸಿದ್ದತೆ ನಡೆಸಿರುವುದನ್ನು ಕದಂಬ ಸೈನ್ಯ ತ್ರೀವವಾಗಿ ಖಂಡಿಸಿದೆ.
ಕಾವೇರಿ ಹೋರಾಟ ಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಸರ್ಕಾರ ತಮಿಳುನಾಡಿನ ಪರ ನಿಂತಿರುವುದು ಸಮಸ್ತ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ, ಕನಾ೯ಟಕ ಬಂದ್ ಗೆ ಸಂಪೂರ್ಣವಾಗಿ ಸಹಕರಿಸಿ ಬಂದ್ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದೆ.
ಕಾವೇರಿ, ಕೃಷ್ಣ ಮಹಾದಾಯಿ ನನ್ನದು ಎಂಬ ಭಾವನಾತ್ಮಕ ಸಂಬಂಧ ಬೆಳೆಯಬೇಕು ಎಂದು ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜ್, ರಾಜ್ಯ ಕಾರ್ಯದರ್ಶಿ ಎನ್ ಸಿ ಕಾಂಬಳೆ ವಿಜಯಪುರ, ರಾಜ್ಯ ಸಂಚಾಲಕ ಎಸ್ ಶಿವಕುಮಾರ್, ರಾಜ್ಯ ಸಹ ಕಾರ್ಯದರ್ಶಿ ಶಿವಕುಮಾರ್ ಮೈಸೂರು, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಜೋಸೆಫ್ ರಾಮು, ರಾಮನಗರ ತಾಲೂಕು ಅಧ್ಯಕ್ಷ ಶಿವಕುಮಾರ ಪಟ್ಲಿ ಮತ್ತಿತರು ಬೆಂಬಲ ಸೂಚಿಸಿದ್ದಾರೆ.




