Friday, September 20, 2024

ಪ್ರಾಯೋಗಿಕ ಆವೃತ್ತಿ

ದಸರಾ ವೇಳೆಗೆ ಕಾವೇರಿ ಆರತಿ ಪ್ರಾರಂಭಿಸಲು ಚಿಂತನೆ: ಚಲುವರಾಯಸ್ವಾಮಿ

ದಸರಾ ಆರಂಭಕ್ಕೂ ಮುನ್ನವೇ ಕಾವೇರಿ ಆರತಿಗೆ ಚಿಂತನೆ ನಡೆದಿದೆ ಎಂದು ಕೃಷಿ ಹಾಗೂ ಕಾವೇರಿ ಆರತಿ ಅಧ್ಯಯನ ಸಮತಿ ಅಧ್ಯಕ್ಷ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಗಂಗಾ ಆರತಿಯ ಬಗ್ಗೆ ಅಧ್ಯಯನ ಪ್ರವಾಸದಲ್ಲಿರುವ ಅವರು ಹರಿದ್ವಾರದಲ್ಲಿ ಮಾತನಾಡಿ, ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿನಲ್ಲಿಯೂ ಹರಿಯುತ್ತೆ. ಕಾವೇರಿ ನಮ್ಮ ಜೀವನದಿಯಾಗಿದೆ ಎಂದರು.

ಕೆಆರ್‌ಎಸ್ ಗೆ ಬಾಗಿನ ಅರ್ಪಿಸುವಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾವೇರಿಗೆ ಆರತಿ ಸಲ್ಲಿಸಬೇಕು ಎಂದು ತಿಳಿಸಿದ್ದರು. ಅದರಂತೆ ಅಧ್ಯಯನ ಪ್ರವಾಸ ಕೈಗೊಂಡಿದ್ದೇವೆ, ಈ ದಸರಾ ವೇಳೆ ಕಾವೇರಿ ಆರತಿ ಪ್ರಾರಂಭಿಸುತ್ತೇವೆ ಎಂದರು.

ಎಂಟು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಮಂಡ್ಯ ಡಿ.ಸಿ ಡಾ.ಕುಮಾರ ಸೇರಿದಂತೆ ನಮ್ಮ ನಿಯೋಗ ಇಂದು ಹರಿದ್ವಾರಕ್ಕೆ ಬಂದಿದ್ದೇವೆ. ಹರಿದ್ವಾರದ ಗಂಗಾರತಿ ಪುರಾತನವಾದುದು. ನಾಳೆ ವಾರಣಾಸಿಯಲ್ಲಿ ಗಂಗಾರತಿ ನೋಡಲಿದ್ದೇವೆ. ಎಲ್ಲರೂ ಸೇರಿ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಆದಷ್ಟು ಬೇಗ ಕಾವೇರಿ ಆರತಿ ಮಾಡುವ ಸ್ಥಳ ಗುರುತು ಮಾಡುತ್ತೇವೆ, ಪ್ರಾರಂಭವಾಗುವುದು 4 ದಿನ ತಡವಾಗಬಹುದು. ಆದ್ರೆ ಕಾವೇರಿ ಆರತಿಯನ್ನ ನಿಲ್ಲಿಸಲ್ಲ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!