Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸರ್ವ ಸದಸ್ಯರು ಸಹಕಾರ ಸಂಘ ಸಂಸ್ಥೆಗಳ ಅಭಿವೃದ್ಧಿ : ಉಮೇಶ್ ದಡಮಹಳ್ಳಿ

ಸರ್ವ ಸದಸ್ಯರು ಸಹಕಾರ ನೀಡಿದಾಗ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ನಾಡಶಿಲ್ಫಿ ಕೆಂಪೇಗೌಡ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ದಡಮಹಳ್ಳಿ ತಿಳಿಸಿದರು.

ಮಂಡ್ಯನಗರದ ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಆವರಣದಲ್ಲಿ ಇಂದು ನಡೆದ ನಾಡಶಿಲ್ಪಿ ಕೆಂಪೇಗೌಡ ಸೌಹಾರ್ದ ಸಹಕಾರಿ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹಕಾರವೇ ಜೀವನ, ಜೀವನವೇ ಸಹಕಾರ ಎಂಬ ತತ್ವದಡಿ ಸಹಕಾರ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆ ಅಭಿವೃದ್ಧಿ ಹೊಂದಿದರೆ ಸದಸ್ಯರು ಕೂಡ ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಂಸ್ಥೆಯ ಏಳಿಗೆಗಾಗಿ ಎಲ್ಲಾ ಸದಸ್ಯರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಹಿರಿಯ ಸಹಕಾರಿ ಹೆಚ್ ಆರ್ ಶಿವಮಾದೇಗೌಡ, ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕಿ ಪಲ್ಲವಿ ಮಾತನಾಡಿದರು.

ಹಿರಿಯ ಸಹಕಾರಿಗಳಾದ ಕೆಂಪೇಗೌಡ, ಪಿ ಚಂದ್ರೇಗೌಡ, ನಂಜರಾಜು, ಹುಚ್ಚೇಗೌಡನ ದೊಡ್ಡಿ ಜಯರಾಮು, ಪ್ರಗತಿಪರ ರೈತ ಯತ್ತಂಬಾಡಿ ಕೃಷ್ಣ, ಹುಸ್ಕೂರು ರವಿ, ಪನ್ನೀರ್ ಸ್ವಾಮಿ, ಉಪಾಧ್ಯಕ್ಷ ಎಚ್ ಏನ್ ಲಕ್ಷ್ಮೀಶ್, ಡಿಎಸ್ ನಾಗೇಂದ್ರ, ರಮೇಶ್ ಕೆ, ಮಾದೇವ ಡಿಸಿ, ಕೃಷ್ಣ, ಶಿವಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ ಆರ್ ಆಶಾ, ಒಕ್ಕೂಟದ ಸಿಇಓ ಪ್ರವೀಣ್ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ