Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಒಪ್ಪಿದವರು ಬಸವಣ್ಣನನ್ನು ಒಪ್ಪಿಕೊಂಡಂತೆ ; ನರೇಂದ್ರಸ್ವಾಮಿ

ಸಂವಿಧಾನವನ್ನು ಯಾರು ಒಪ್ಪಿಕೊಳ್ಳುತ್ತಾರೆ ಬಸವಣ್ಣ ಒಪ್ಪಿಕೊಂಡಂತೆ, ಬಸವಣ್ಣನನ್ನು ಯಾರು ಒಪ್ಪಿಕೊಳ್ಳುತ್ತಾರೆ ಸಂವಿದಾನ ಒಪ್ಪಿಕೊಂಡಯಂತೆ ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿದ ವೀರಶೈವ ಸಂಘಟನೆ ವತಿಯಿಂದ ನಡೆದ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ತ್ರೀ ಸಾಮಾನ್ಯರಿಗೆ ಸಮಾನತೆ ಸಾರಿದ ಯಾರಾದರೂ ಇದ್ದರೆ ಅವರು ವಿಶ್ವನಾಯಕ ಬಸವಣ್ಣ. ದೇವರು ಎಲ್ಲೂ ಇಲ್ಲ ನಿಮ್ಮಲ್ಲೆ ಇದ್ದಾನೆ ಎಂಬ ಸಂದೇಶ ಸಾರಿದವರು ಬಸವಣ್ಣರವರು ಎಂದರು.

ಇದೇ ವೇಳೆ ಮುಡುಕನಪುರದ ಹಲವಾರು ಮಠದ ಷಡಕ್ಷರ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಬಸವಣ್ಣರವರ ಧೋರಣೆಯನ್ನು ಶ್ರದ್ದಾಪೂರ್ಣವಾಗಿ ಮೈಗೂಡಿಕೊಂಡರೆ ಮಾತ್ರ ಬಸವಣ್ಣ ಧ್ಯೇಯ ಹಾಗೂ ಆದರ್ಶ ಜೀವಂತವಾಗಿರುತ್ತದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲೋಕೇಶ್, ತಾ.ಪಂ ಇಒ ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಡಿವೈಎಸ್ ಪಿ ಕೃಷ್ಣಪ್ಪ, ಕುಂದೂರುಮೂರ್ತಿ, ಮನ್ ಮುಲ್ ನಿರ್ದೇಶಕ ವಿಶ್ವಾಸ, ಅಂಬರೀಶ್, ಪುರಸಭೆ ಸದಸ್ಯ ನೂರೂಲ್ಲಾ, ಸಂತೋಷ, ಆನಂದಕುಮಾರ್,ಹೆಚ್.ಸಿ ಮಹೇಶ್,ಗಂಗಾಧರ್ ಸೇರಿದಂತೆ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ