Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಂಪೇಗೌಡ ರಥಕ್ಕೆ ಪೂರ್ಣಕುಂಭ ಸ್ವಾಗತ

ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಆವರಣದಲ್ಲಿನ ಗೋಪುರ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮಣ್ಣು ಸಂಗ್ರಹ
ಅಭಿಯಾನದ ರಥ ಪಾಂಡವಪುರ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸ್ತ್ರೀಶಕ್ತಿ ಸಹಾಯ
ಸಂಘದ ಮಹಿಳೆಯರು, ತಾಲೂಕು ಕಚೇರಿ ಮತ್ತು ಪುರಸಭೆಯ ಅಧಿಕಾರಿಗಳು ಶುಕ್ರವಾರ ಕಳಸ
ಪೂರ್ಣಕುಂಭ ಸ್ವಾಗತ ಕೋರಿದರು.

ಕಳೆದ ಎರಡು ದಿನಗಳಿಂದ ಪಾಂಡವಪುರ ತಾಲೂಕಿನ ಚಿನಕುರಳಿ, ನಾರಾಯಣಪುರ, ಬಳಘಟ್ಟ, ಮೇಲುಕೋಟೆ, ಜಕ್ಕನಹಳ್ಳಿ,
ಮಾಣಿಕ್ಯನಹಳ್ಳಿ, ಹಳೆಬೀಡು, ಸುಂಕಾತೊಣ್ಣೂರು, ಲಕ್ಷ್ಮೀಸಾಗರ, ಟಿ.ಎಸ್.ಛತ್ರ, ಹಿರೇಮರಳಿ, ಪಾಂಡವಪುರ
ಪಟ್ಟಣ, ಕೆನ್ನಾಳು, ಕೆ.ಬೆಟ್ಟಹಳ್ಳಿ, ಹೊನಗಾನಹಳ್ಳಿ, ಗುಮ್ಮನಹಳ್ಳಿ, ಡಿಂಕಾ, ಬನ್ನಂಗಾಡಿ, ಅರಳಕುಪ್ಪೆ, ಹರವು,
ಅರಳಕುಪ್ಪೆ ಹಾಗೂ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿದ ಕೆಂಪೇಗೌಡ ರಥಕ್ಕೆ
ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಹಾರೋಹಳ್ಳಿಯ ಮಂಟೇಸ್ವಾಮಿ ಮತ್ತು ಮಸಣದಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ
ಕಾರ್ಯಕರ್ತರು ಹಾಗೂ ಸಹಾಯಕರು ರಥದೊಂದಿಗೆ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ
ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಮುಖ್ಯಾಧಿಕಾರಿ ವೀಣಾ, ಸದಸ್ಯರಾದ ಎಲ್.ಅಶೋಕ್,
ಶ್ರೀನಿವಾಸನಾಯಕ, ಶಿವಕುಮಾರ್, ಇಂಜಿನಿಯರ್ ಚೌಡಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಕಾಳಯ್ಯ, ಪಳನಿಸ್ವಾಮಿ,
ಮಣಿಪ್ರಸಾದ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!