ಮಂಡ್ಯ ತಾಲ್ಲೂಕಿನ ಕೆರಗೋಡಿನ ಪಡುವಲಬಾಗಿಲು ಆಂಜನೇಯ ದೇಗುಲದ ಬಳಿ ಪ್ರತಿಷ್ಟಾಪಿಸಿರುವ ಗಣೇಶಮೂರ್ತಿ ವಿಸರ್ಜನೆ ಕಾರ್ಯಕ್ರಮದ ಪ್ರಯುಕ್ತ ಮಂಡ್ಯನಗರ ಕಾಳಿಕಾಂಭ ದೇವಾಲಯದಿಂದ ಅದ್ದೂರಿ ಮೆರವಣಿಗೆಯೊಂದಿಗೆ ನೂರಾರು ಯುವಕರು ಕೆರಗೋಡಿನವರೆಗೆ ಅದ್ಧೂರಿ ಬೈಕ್ ರ್ಯಾಲಿ ನಡೆಸಿದರು.
ಭಾನುವಾರ ಸಂಜೆ ಮಂಡ್ಯ ನಗರದ ಕಾಳಿಕಾಂಭ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಆನಂತರ ಅವರನ್ನು ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು.

ನಾಯಕರು ಹಳದಿ ಕೆಂಪು ಬಣ್ಣದ ಕನ್ನಡದ ಕನ್ನಡದ ಸಾಲು ತೊಟ್ಟು ಗಮನ ಸೆಳೆದರು. ಮಂಡ್ಯದ ಪೇಟೆ ಬೀದಿ ಮೂಲಕ ತೆರಳಿದ ಬೈಕ್ ಜಾಥಾದಲ್ಲಿ ರಸ್ತೆಯುದ್ದಕ್ಕೂ ತಮಟೆ ಸದ್ದು ಹಾಗೂ ಡಿಜೆ ಸೌಂಡ್ ಮೆರವಣಿಗೆ ಗಮನ ಸೆಳೆಯಿತು. ಬೈಕ್ ಜಾಥಾದಲ್ಲಿ ತೆರಳಿದ ನೂರಾರು ಯುವಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಬೈಕ್ ರ್ಯಾಲಿ ವೇಳೆ ಚಿಕ್ಕಮಂಡ್ಯ, ಸಾತನೂರು ಬಳಿ ಬೃಹತ್ ಬೆಲ್ಲದ ಹಾರ, ಸೇಬಿನ ಹಾರ ಹಾಕಿ ಸಚಿವರು, ಶಾಸಕರನ್ನು ಬರ ಮಾಡಿಕೊಳ್ಳಲಾಯಿತು.
ಸಚಿವ ಎನ್.ಚಲುವರಾಯಸ್ವಾಮಿ ಶಾಸಕ ಗಣಿಗ ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ.ಕೆ.ರಾಧಾಕೃಷ್ಣ, ತಾ.ಪಂ.ಮಾಜಿ ಅಧ್ಯಕ್ಷ ಟಿ.ತ್ಯಾಗರಾಜು, ಹೆಚ್.ಎನ್.ಯೋಗೇಶ್ ಅಪ್ಪಾಜಿಗೌಡ, ಚಿದಂಬರ್, ಕಾಂಗ್ರೆಸ್ ಜಿಲ್ಲಾಧ್ಯಕ್ಚ ಸಿಡಿ ಗಂಗಾಧರ್, ಮುಡಾ ಅಧ್ಯಕ್ಷ ನಹೀಮ್, ವಿಜಯಕುಮಾರ್ ಮತ್ತಿತರರು ಸಾಥ್ ನೀಡಿದರು.




