Friday, September 20, 2024

ಪ್ರಾಯೋಗಿಕ ಆವೃತ್ತಿ

ನಿರುದ್ಯೋಗ ದೇಶದ ಜಲ್ವಂತ ಸಮಸ್ಯೆ: ಕೇಂದ್ರ ಸರ್ಕಾರದ ವಿರುದ್ದ ಖರ್ಗೆ ವಾಗ್ದಾಳಿ

ನಿರುದ್ಯೋಗ ಎನ್ನುವುದು ದೇಶದ ಜಲ್ವಂತ ಸಮಸ್ಯೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು, ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಮಲ್ಲಿಕಾರ್ಜುನ ಖರ್ಗೆ, ವರ್ಷದಲ್ಲಿ 2 ಕೋಟಿ ಉದ್ಯೋಗದ ಸೃಷ್ಟಿ ಎಲ್ಲಿದೆ? ಉದ್ಯೋಗ ನೇಮಕಾತಿ ಪರೀಕ್ಷೆಗಳು ಮತ್ತು ಉದ್ಯೋಗವನ್ನು ಖಾತ್ರಿಪಡಿಸುವ ನಡುವಿನ ಪ್ರಕ್ರಿಯೆ ಏಕೆ ಸಂಕೀರ್ಣವಾಗಿದೆ? ನಿರುದ್ಯೋಗವು ದೇಶದ ಅತ್ಯಂತ ಜ್ವಲಂತ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಜು.2022 ಮತ್ತು ಜೂ.2023ರ ನಡುವಿನ PLFS(periodic labour force survey) ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಮಲ್ಲಿಕಾರ್ಜುನ ಖರ್ಗೆ 15-29 ವರ್ಷ ವಯಸ್ಸಿನ ಯುವ ಜನರಲ್ಲಿ ನಿರುದ್ಯೋಗ ದರವು 10 ಪ್ರತಿಶತ ಇದೆ. PLFS ಅಂಕಿ ಅಂಶದ ಪ್ರಕಾರ ಜುಲೈ 2022ರಿಂದ ಜೂನ್ 2023ರ ಅವಧಿಯಲ್ಲಿ ದೇಶದ ಗ್ರಾಮೀಣ ಜನರ ನಿರುದ್ಯೋಗವು ಶೇಕಡಾ 8.3ರಷ್ಟಿತ್ತು. ಇದೇ ವೇಳೆ ನಗರ ಪ್ರದೇಶದಲ್ಲಿನ ನಿರುದ್ಯೋಗ ದರವು 13.8ಶೇ.ರಷ್ಟು ಹೆಚ್ಚಿದೆ ಎಂದು ಹೇಳಿದ್ದಾರೆ.

ಎಂಎಸ್‌ಎಂಇ ವಲಯವನ್ನು ಏಕೆ ನಾಶಪಡಿಸಲಾಯಿತು, ಕೋಟಿಗಟ್ಟಲೆ ಯುವಕರ ಉದ್ಯೋಗಗಳನ್ನು ಏಕೆ ಕಿತ್ತುಕೊಳ್ಳಲಾಯಿತು ಮತ್ತು ಅವರ ಭವಿಷ್ಯವನ್ನು ಏಕೆ ಹಾಳು ಮಾಡಲಾಯಿತು? ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಸಂಸತ್ತಿನಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಸಾಂವಿಧಾನಿಕ ಪೀಠದಲ್ಲಿ ಕುಳಿತುಕೊಂಡು ತನ್ನ ಜಾತಿ ಬಗ್ಗೆ ಉಲ್ಲೇಖಿಸಿ ಕೊಟ್ಟ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರವಾದಂತಹ ವಿರೋಧವನ್ನು ವ್ಯಕ್ತಪಡಿಸಿದ್ದರು. ಇತರ ಸದಸ್ಯರಿಗೆ ರಕ್ಷಣೆ ನೀಡುವುದು ಸಭಾಪತಿಗಳ ಕೆಲಸವಾಗಿದೆ. ಆದರೆ ಅವರು ಸ್ವಯಂ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಹಲವು ಬಾರಿ ರಾಜ್ಯಸಭೆಯಲ್ಲಿ ಮಾತನಾಡಲು ನನಗೆ ಅವಕಾಶ ನೀಡಿಲ್ಲ. ನಾನು ದಲಿತನಾಗಿರುವುದು ಇದಕ್ಕೆ ಕಾರಣ ಎಂದು ನಾನು ಹೇಳಬೇಕೇ? ಅವರು ಸಂಸತ್ತಿನೊಳಗೆ ಜಾತಿಯ ಕುರಿತು ಮಾತನಾಡಿ ಅದರ ಹೆಸರಿನಲ್ಲಿ ಹೊರಗಿರುವ ಜನರನ್ನು ಪ್ರಚೋದಿಸಬಾರದು ಎಂದು ಖರ್ಗೆ ಹೇಳಿದ್ದಾರೆ.

ಇದಲ್ಲದೆ ಸಂಸತ್ತಿನಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ್ದರಿಂದ 141 ಸಂಸದರನ್ನು ಅಮಾನತು ಮಾಡಲಾಗಿದೆ. ಆದರೆ ಆರೋಪಿಗೆ ಪಾಸ್‌ ನೀಡಿದ್ದ ತಮ್ಮದೇ ಪಕ್ಷದ ಸಂಸದರ ಬಗ್ಗೆ ಬಿಜೆಪಿಯವರು ಪ್ರಶ್ನಿಸುತ್ತಿಲ್ಲ. ಕೃತ್ಯಕ್ಕೆ ತಿಂಗಳುಗಳಿಂದ ಯೋಜನೆ ರೂಪಿಸುತ್ತಿದ್ದ ಆರೋಪಿಗಳ ಬಗ್ಗೆ ಅಧಿಕಾರಿಗಳು ಯಾಕೆ ಗಮನಹರಿಸಿಲ್ಲ? ಇದು ಗುಪ್ತಚರ ಇಲಾಖೆಯ ಬಹು ದೊಡ್ಡ ವೈಫಲ್ಯ. ಭದ್ರತಾ ಲೋಪಕ್ಕೆ ಹಿರಿಯ ಅಧಿಕಾರಿಗಳನ್ನು ಹೊಣೆಯನ್ನಾಗಿ ಯಾಕೆ ಮಾಡಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!