ದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಏಪ್ರಿಲ್ 30 ರಿಂದ ಮೇ 3 ರ ತನಕ ನಡೆಯುತ್ತಿರುವ ರಾಷ್ಟ್ರಮಟ್ಟದ 2ನೇ ಖೇಲೋ ಮಾಸ್ಟರ್ ಗೇಮ್ ಗೆ, ಕರ್ನಾಟಕದಿಂದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಮಂಡ್ಯ ಹಾಗೂ ತುಮಕೂರು ಜಿಲ್ಲೆಯ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ, ಮಾಯಸಂದ್ರ ಎಸ್ ಬಿ ಜಿ ವಿದ್ಯಾಲಯದ ದೈಹಿಕ ಶಿಕ್ಷಕ ಚಿಕ್ಕಮರಳಿ ಉದಯಕುಮಾರ್, ಇದೇ ಶಿಕ್ಷಣ ಸಂಸ್ಥೆಯ ದೈಹಿಕ ಸಹ ಶಿಕ್ಷಕ ಕೆ.ಎಸ್.ಗಿರಿಧರ್, ತುರುವೇಕೆರೆ ಬ್ಯಾಲಹಳ್ಳಿ ಎನ್.ವಿ.ಎಸ್.ಎಸ್ ಜೆ.ಸಿ.ಹೆಚ್.ಎಸ್ ಶಾಲೆಯ ಸಹ ಶಿಕ್ಷಕ ಹೆಚ್.ಶ್ರೀಧರ್, ಟಿ.ವೆಂಕಟೇಶ್, ಎಸ್.ಕೆ.ಬಿ.ಆರ್.ಹೆಚ್.ಎಸ್ ಡಿ ಕಲ್ಕೆರೆ ಶಾಲೆಯ ವೈ.ಎಸ್.ಕಿರಣ್ ಕುಮಾರ್, ತುರುವೇಕೆರೆ ಎಸ್.ಎಸ್.ಆರ್.ಹೆಚ್.ಎಸ್ ಪುರ ಬಿ.ಹೆಚ್. ವಿಶ್ವನಾಥ್ ಹಾಗೂ ಪಾಂಡವಪುರ ತಾಲ್ಲೂಕಿನ ಕುಂತಿಬೆಟ್ಟದ ಶ್ರೀ ಶಂಕರಟನಂದ ಭಾರತಿ ವಿದ್ಯಾಪೀಠದ ಕುವೆಂಪು ಪ್ರೌಢ ಶಾಲೆಯ ಸಹ ಶಿಕ್ಷಕ ಸಿ.ಬಿ.ರಕ್ಷಿತ್ ಅವರು ಆಯ್ಕೆಯಾಗಿ ಖೇಲೋ ಮಾಸ್ಟರ್ ಗೇಮ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಖೇಲೋ ಮಾಸ್ಟರ್ ಗೇಮ್ ಕ್ರೀಡಾಕೂಟಕ್ಕೆ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಸ್ನೇಹಿತರ ಬಳಗ ಶುಭ ಕೋರಿದ್ದಾರೆ.