ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್
ಆಟಗಾರರು ಕ್ರೀಡಾ ಮನೋಭಾವದಿಂದ ತೀರ್ಪನ್ನು ಸ್ವೀಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಹೇಳಿದರು.
ನಗರದ ಕ್ರೀಡಾಂಗಣದಲ್ಲಿ ಸಂಡೆ ಸ್ಟ್ರೈಕರ್ಸ್ ಆಯೋಜಿಸಿರುವ ಪವರ್ ಸ್ಟಾರ್ ಡಾ.ಪುನೀತ್‌ರಾಜ್‌ಕುಮಾರ್ ಸ್ಮರಣಾರ್ಥ ೩ ದಿನಗಳ ಅಪ್ಪು ಪ್ರೀಮಿಯರ್ ಲೀಗ್(ಎಪಿಎಲ್) ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವ ಆಟಗಾರರಿಗೆ ಸ್ಪರ್ಧಾ ಮನೋಭಾವ ಬಹಳ ಮುಖ್ಯ. ಪ್ರತಿಯೊಬ್ಬ ಆಟಗಾರರು ತೀರ್ಪು ಏನೇ ಬರಲಿ ಸಮಚಿತ್ತದಿಂದ ಸ್ವೀಕರಿಸಬೇಕು ಎಂದರು.
ಅಪ್ಪು ಅವರಿಗೆ ಉತ್ತಮ ಹೆಸರು ಬರುವಂತೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿ.ಎಲ್ಲರೂ ಪಾಲ್ಗೊಂಡು ಉತ್ತಮವಾಗಿ ನಡೆಸಿಕೊಡಿ ಎಂದು ನುಡಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಡಾ.ಇಂದ್ರೇಶ್ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಉತ್ತಮವಾದುದು.
ಕ್ರೀಡಾ ಸ್ಪೂರ್ತಿಯಲ್ಲಿ ಎಲ್ಲರೂ ಪಾಲ್ಗೊಂಡಿದ್ದಿರಿ.ಯಶಸ್ವಿಯಾಗಿ ಸಾಗಲಿ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಮಂಜು, ಬಿಜೆಪಿ ಮುಖಂಡ ಹೊಸಹಳ್ಳಿ ನಾಗೇಶ್, ಜೆಡಿಎಸ್ ಮುಖಂಡ ಮಹಾಲಿಂಗೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್ ಮನ್ಮುಲ್ ಕೇಂದ್ರ ಮಾರುಕಟ್ಟೆ ವ್ಯವಸ್ಥಾಪಕ ಸಾಗರ್, ಹರೀಶ್ ಮತ್ತಿತರರಿದ್ದರು.