Friday, October 18, 2024

ಪ್ರಾಯೋಗಿಕ ಆವೃತ್ತಿ

ಅರಗಿಸಿಕೊಳ್ಳಲಾಗದಷ್ಟು ರಕ್ತಪಾತ ನನ್ನನ್ನೇಕೆ ಆವರಿಸಿತು…

ಅರಗಿಸಿಕೊಳ್ಳಲಾಗದಷ್ಟು ರಕ್ತಪಾತ ನನ್ನನ್ನೇಕೆ ಆವರಿಸಿತು…

ಈ ರೀತಿ ಯಾರು ಸಾಯಸ್ತಾರೋ ಮಗ… ನೀನು ರಕ್ಷಕ ಅಲ್ಲ… ರಾಕ್ಷಸ…

ಇದು “ಕಿಲ್” ಚಿತ್ರದ ಡಕಾಯಿತ ಫನ್ನಿ, NSG ಕಮಾಂಡೋ ಅಮ್ರಿತ್ ಗೆ ಹೇಳುವ ಡೈಲಾಗು...

ಕಮಾಂಡೋ ಕೊಲ್ಲುವ ಪರಿಯನ್ನು, ಆತನ ಅತಿಯಾದ ಹಿಂಸೆಯನ್ನು ಕಂಡು ಡಕಾಯಿತ ಬೆರಗಾಗುತ್ತಾನೆ. ಆ ಕ್ಷಣ ಒಳಿತು ಕೆಡುಕಿನ ನಡುವೆ ಇರುವ ತೆಳು ಗೆರೆಯನ್ನು ಅಳಿಸಿ ಹೋಗುತ್ತದೆ… ಕಮಾಂಡೋ ಡಕಾಯಿತ ಒಂದೇ ಎನ್ನುವಂತಾಗುತ್ತದೆ. ಅಚ್ಚರಿಯ ವಿಷಯ ಏನೆಂದರೆ ಚಿತ್ರದ ಹಲವೆಡೆ ಪ್ರೇಕ್ಷಕ ಮೈಮರೆತು ಡಕಾಯಿತರಿಗಾಗಿ ಮರುಗುತ್ತಾನೆ. ಮನುಷ್ಯನ ಮೆದುಳಿನ ಜೊತೆಗೆ, ಆಲೋಚನಾ ಕ್ರಮಗಳೊಡನೆ ಹೇಗೆಲ್ಲಾ ಆಟವಾಡಬಹುದು ಅಲ್ವಾ!

ಮನುಷ್ಯನ ಅತ್ಯಂತ ಬೇಸಿಕ್ ಇನ್ಸ್ಟಿಂಕ್ಟ್ ಆದ ನೋವು, ಶೋಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹಿಂಸೆಯ ಜಾಡು ಹಿಡಿದು ಹೊರಟ ಚಿತ್ರ Kill. ಇದೊಂದು ಆಕ್ಷನ್ ಥ್ರಿಲ್ಲರ್ ಎಂದು ಕರೆಯುವುದಕ್ಕಿಂತ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ ಎಂದು ಕರೆಯಬಹುದು.

ರಕ್ತಪಾತ ಅರಗಿಸಿಕೊಳ್ಳಲು ಆಗದವರು ಚಿತ್ರವನ್ನು ನೋಡದಿರುವುದೇ ಒಳಿತು. ಇಡೀ ಚಿತ್ರ ಚಲಿಸುವ ರೈಲಿನ ಮೂರು ಬೋಗಿಯಲ್ಲಿ ನಡೆಯುತ್ತದೆ. ತಾಂತ್ರಿಕವಾಗಿ ಈ ಚಿತ್ರ ಒಂದು ವಿಸ್ಮಯವೇ ಸರಿ. ಹಿಂದಿ ಚಿತ್ರರಂಗಕ್ಕಿದು ಒಂದು ಮೈಲಿಗಲ್ಲು. ಲಿಮಿಟೆಡ್ ಸ್ಪೇಸ್ನಲ್ಲಿ ಚಿತ್ರೀಕರಿಸುವುದು, ಮಿತವಾದ ಬೆಳಕಿನಲ್ಲಿ ಸೀನ್ಸ್ ಕ್ಯಾಪ್ಚರ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಚಿತ್ರದ DOP, ಸಾಹಸ ನಿರ್ದೇಶನ, ಮತ್ತು ಸಣ್ಣ ಸಣ್ಣ ವಿಷಯಗಳ ಕುರಿತು ನಿರ್ದೇಶಕ ನಾಗೇಶ್ ಭಟ್ ವಹಿಸಿರುವ/ತೋರಿರುವ ಡೀಟೇಲಿಂಗ್ ಬೆರಗುಗೊಳಿಸುವಂತದ್ದು.

ಚಿತ್ರದ ನಾಯಕ ಲಕ್ಷ್ಯನಿಗೆ ಇರುವುದು ನಾಲ್ಕೈದು ಡೈಲಾಗು ಮಾತ್ರ ಆದರೂ ಅವರ ಆಕ್ಷನ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಚಿತ್ರರಂಗದಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಸಾರಿ ಸಾರಿ ಹೇಳುತ್ತದೆ, ಖಳನಾಯಕ ರಾಘವ್ ಅವರಿಗೆ ಸಾಕಷ್ಟು ಡೈಲಾಗ್ಸ್ ಇವೆ ಆ ಡೈಲಾಗುಗಳಲ್ಲಿ ಅವರು ನಮಗೆ ಡಾರ್ಕ್ ನೈಟ್ ಚಿತ್ರದ ಹೀತ್ ಲೆಡ್ಜರ್ ಅವರನ್ನು ನೆನಪಿಸಿಬಿಡುತ್ತಾರೆ. ನ್ಯೂಟನ್ ಖ್ಯಾತಿಯ ರಾಜ್ಕುಮಾರ್ ಅವರಿಗೆ ಪೈಪೋಟಿ ನೀಡಬಲ್ಲ ಪ್ರತಿಭೆ ರಾಘವ್ ಅವರದ್ದು. ವಾಚ್ ಔಟ್ ಫಾರ್ ಹಿಮ್. ಆಶೀಶ್ ವಿದ್ಯಾರ್ಥಿಯವರನ್ನು ಪರದೆಯ ಮೇಲೆ ನೋಡಿ ಎಷ್ಟೋ ದಿನಗಳಾಗಿತ್ತು. ಅವರ ಅಭಿನಯದ ಬಗ್ಗೆ ಹೇಳುವ ಅಗತ್ಯವಿಲ್ಲ.

ಯಾವುದೇ stardom ಇಲ್ಲದೆ ಚಿತ್ರವನ್ನು ಗಟ್ಟಿಯಾದ screenplay, ಪೂರ್ವ ತಯಾರಿ ಮತ್ತು ತಾಂತ್ರಿಕ ನೈಪುಣ್ಯತೆ ಹೇಗೆ ಗೆಲ್ಲಿಸುತ್ತದೆ ಅನ್ನೋಕೆ Kill ಅತ್ಯುತ್ತಮ ನಿದರ್ಶನ.

ಚಿತ್ರ ನಿರ್ದಯಿ ಡಕಾಯಿತರನ್ನು ಹುಟ್ಟಿಹಾಕುವ ಸಾಮಾಜಿಕ ವಾತಾವರಣವನ್ನು ಪರಿಗಣಿಸುವುದಿಲ್ಲ ನಿಜ. ರಕ್ತಪಾತವನ್ನು, ಹಿಂಸೆಯನ್ನು, ಚಿತ್ರ- ವಿಚಿತ್ರವಾಗಿ ಮನುಷ್ಯರ ಕೊಲ್ಲುವುದನ್ನು ಚಿತ್ರ ಅತಿಯಾಗಿಯೇ ಬಿಂಬಿಸುತ್ತದೆ ಆದರೆ ನೋಡುಗನಿಗೆ It’s truly visceral ಮತ್ತು unnerving ಅನುಭವವೆಂದಷ್ಟೇ ಹೇಳಬಲ್ಲೆ.

(The film has its share of jingoism and obviously doesn’t take into account the social milieu which breeds notorious dacoits and killers. Go for it just for the sake of DOP and mind bending/numbing violence)

ಹರೀಶ್ ಗಂಗಾಧರ್ 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!