Friday, June 21, 2024

ಪ್ರಾಯೋಗಿಕ ಆವೃತ್ತಿ

ಸಖತ್ ಟ್ರೋಲ್ ಆದ ಪ್ರಧಾನಿ ಮೋದಿಯ ಭಾಷಣ…

ಮೈಸೂರಿನಲ್ಲಿ ಭಾನುವಾರ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೆಡಿಎಸ್ ವರಿಷ್ಟ ದೇವೇಗೌಡರನ್ನು ಹೊಗಳಿದ ಮಾತುಗಳನ್ನು ರಾಜ್ಯದ ಜನರು ಟ್ರೋಲ್ ಮಾಡಿದ್ದಾರೆ.

ಅಂದು ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಚುನಾವಣಾ ಭಾಷಣ ಮಾಡಿದ್ದ ಮೋದಿಯವರು ‘ಜೆಡಿಎಸ್ ತೋ ಹೇ ಹಿ ಪರಿವಾರ್ ಕಿ ಪ್ರೈವೇಟ್ ಲಿಮಿಟೆಡ್ ಕಂಪನಿ…ಉಸ್ ಕೆ ಮಾಲೀಕ್ ಪರಿವಾರ್ ಕಿ ಪ್ರತಿನಿಧಿ ಹೈ ಎಂದು ಹಿಂದಿ ಭಾಷೆಯಲ್ಲಿ ಜೆಡಿಎಸ್ ಪಕ್ಷ ಅಪ್ಪ-ಮಕ್ಕಳ ಪರಿವಾರದ ಪಕ್ಷ ಎಂದು ಟೀಕಿಸಿದ್ದರು.

ಆದರೆ, ಕಳೆದ ಭಾನುವಾರ ಮೈಸೂರಿನಲ್ಲಿ 2024 ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪರಿವಾರ್ ಪಾರ್ಟಿ ಎಂದು ಟೀಕಿಸಿದ್ದ ಅದೇ ಜೆಡಿಎಸ್ ಪಕ್ಷದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಜೊತೆ ವೇದಿಕೆ ಹಂಚಿಕೊಂಡ ಮೋದಿಯವರ ನಡೆಯನ್ನು ಹಲವರು ಟ್ರೋಲ್ ಮಾಡಿದ್ದಾರೆ. ಮೋದಿಯವರು ತಮ್ಮ ಭಾಷಣದಲ್ಲಿ ‘ಆದರಣೀಯ ದೇವೇಗೌಡಜೀ ಕಾ ಪ್ರವೇಶ್ ಸೆ ಆಬಾರ್ ಕರ್ತಾ ಹೂ, ಆಜ್ ಭಾರತ್ ರಾಜನೀತಿ ಪಟಲ್ ಪರ್ ಸಬ್ ಸೆ ಸೀನಿಯರ್ ಮೋಸ್ಟ್ ರಾಜ್ ನೇತಾ ಹೈ, ಔರ್ ಉನ್ ಕೆ ಆಶೀರ್ವಾದ್ ಪ್ರಾಪ್ತ್ ಕರ್ನಾ ಹೇ ತೋ ಬಹುತ್ ಬಡಾ ಸೌಭಾಗ್ಯ್ ಹೇ’ ಎಂದಿದ್ದರು.

ಈ ಬಗ್ಗೆ ಅಂದು ಮೋದಿಯವರು ದೇವೇಗೌಡರ ಬಗ್ಗೆ ಟೀಕಿಸಿದ್ದನ್ನು,ಇಂದು ದೇವೇಗೌಡರನ್ನು ಹೊಗಳಿದ್ದನ್ನು ವೀಡಿಯೋ ಮಾಡಿ ಟ್ರೋಲ್ ಮಾಡಿದ್ದು,ಹಲವರು ಮೋದಿಯವರ ಡಬಲ್ ಸ್ಟಾಂಡರ್ಡ್ ಬಗ್ಗೆ ಟೀಕೆ ಕೂಡ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!