Wednesday, November 18, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ

ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗ್ಯೆದು, ಪತ್ನಿಯನ್ನು ಕೊಲ್ಲಲು ಯತ್ನಿಸಿರುವ ಘಟನೆ ನಡೆದಿದೆ.

ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗಾಣಗಾಪುರ ಗ್ರಾಮದ ಶ್ರೀಕಾಂತ್ ಎಂಬಾತನೇ ತನ್ನ ಮಕ್ಕಳಾದ ಅದಿತ್ಯ (4) ಅಮೂಲ್ಯ (2) ಅವರನ್ನು ಕೊಲೆ ಮಾಡಿದ್ದಲ್ಲದೇ ಪತ್ನಿ ಲಕ್ಷ್ಮಿಗೂ ಚೂರಿಯಿಂದ ಇರಿದು, ಕಲ್ಲಿನಿಂದ‌ ಜಜ್ಜಿದ್ದಾನೆ.

ಮರಳಗಾಲ ಗ್ರಾಮದ ವಿರೂಪಾಕ್ಷ ಎಂಬುವರ ತೋಟದಲ್ಲಿ ಅಂಬಿಕಾ -ಮೋಹನ್ ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು, ಅಂಬಿಕಾ ಮೊದಲ ಪತಿಯ ಮಕ್ಕಳಾದ ಲಕ್ಷ್ಮಿ ಮತ್ತು ಅಳಿಯ ಶ್ರೀಕಾಂತ್ ಮಕ್ಕಳ ಜೊತೆ ಮನೆಗೆ ಬಂದಿದ್ದರು. ಬುಧವಾರ ಮಧ್ಯರಾತ್ರಿ  ಶ್ರೀಕಾಂತ್ ತನ್ನ ಇಬ್ಬರೂ ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿದ್ದು, ಪತ್ನಿ ಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಸಿಪಿಐ ಬಿ.ಜಿ. ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ