Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ : ಕಳ್ಳತನ ಮಾಡಲು ಬಂದು ಕೊಲೆ ಮಾಡಿ ಸಿಕ್ಕಿಬಿದ್ದ

ಕಳವು ಮಾಡಲು ಬಂದು ಮನೆ ಮಾಲೀಕನ ಹತ್ಯೆ ಮಾಡಿದ ಖತರ್‌ನಾಕ್ ಕಳ್ಳ ಸಿಕ್ಕಿಬಿದ್ದಿದಾನೆ. ಈ ಘಟನೆ ಮಂಡ್ಯಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಜರುಗಿದೆ.

ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಒಂಟಿ ಮನೆ ಮಾಲೀಕ ರಮೇಶ್ (55) ಎಂಬಾತ ಹತ್ಯೆಗೊಳಗಾದವನು. ಅವರ ಪತ್ನಿ ಯಶೋಧ ಅದೃಷ್ಟವಶಾತ್ ಪಾರಾಗಿದ್ದಾರೆ. ಮನೆಯಲ್ಲಿ ಸಿಕ್ಕಿ ಬಿದ್ದ ಕಳ್ಳನಿಗೆ ಸಾರ್ವಜನಿಕರು ಥಳಿಸಿ ದಿಗ್ಧಂದನ ಹಾಕಿದ್ದಾರೆ.

ಕ್ಯಾತನಹಳ್ಳಿ ರಮೇಶ ಎಂಬುವವರ ಒಂಟಿ ಮನೆಗೆ ನುಗ್ಗಿ ಕಳವು ಮಾಡಲು ಶನಿವಾರ ಸಂಜೆ ನುಗ್ಗಿದ ಕಳ್ಳನೋರ್ವ ಮರ ಕೊಯ್ಯುವ ಮಿಷಿನ್‌ನಿಂದ ಮನೆ ಬಾಗಿಲು ಕಟ್ ಮಾಡಿ ಒಳನುಗ್ಗಿದ್ದಾನೆ. ಎದುರಿಗೆ ಬಂದ ಮನೆ ಮಾಲೀಕನ ಪತ್ನಿ ಯಶೋಧರಿಗೆ ಹೊಡೆದಿದ್ದು ಅವರು ಕೆಳಗೆ ಬಿದ್ದತಕ್ಷಣ ಸಾವನ್ನಪ್ಪಿದ್ದಾರೆ ಅಂತ ತಿಳಿದು ಒಳಹೊಕ್ಕಿದ್ದಾನೆ‌. ಮಂಚದ ಮೇಲೆ ಮಲಗಿದ್ದ ಪಾರ್ಶ್ವವಾಯು ಪೀಡಿತ ರಮೇಶ್ ಅವರ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಆಗ ತಕ್ಷಣ ಎಚ್ಚೆತ್ತ ಯಶೋಧ ಹೊರಕ್ಕೆ ಬಂದು ಹೊರಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ.
ಈ ವೇಳೆ ಯಶೋಧ ಜೋರಾಗಿ ಕೂಗಿಕೊಂಡಾಗ ಅಲ್ಲಿಗೆ ಬಂದ ಸಾರ್ವಜನಿಕರು ಮನೆಯೊಗಳಗೇ ಸಿಕ್ಕಿ ಬಿದ್ದಿದ್ದ ಕಳ್ಳನಿಗೆ ಮನೆಯಿಂದ ಹೋಗದಂತೆ ದಿಬ್ಬಂಧನ ಹಾಕಿ ಚೆನ್ನಾಗಿ
ಥಳಿಸಿದ್ದಾರೆ. ಸ್ಥಳಕ್ಕೆ ಪಾಂಡವಪುರ ಪೊಲೀಸರು ಧಾವಿಸಿದ್ದಾರೆ.

ಬಳಿಕ ಘಟನಾ ಸ್ಥಳಕ್ಕೆ ಶ್ರೀರಂಗಪಟ್ಟಣ ಡಿವೈಎಸ್ಪಿ ಮುರಳಿ, ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಜಮಾವಣೆಗೊಂಡಿದ್ದ ಭಾರಿ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ