Friday, September 20, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳು, ಶಿಕ್ಷಣ, ರಂಗಭೂಮಿ ತಿರಸ್ಕಾರಕ್ಕೆ ಒಳಪಟ್ಟಿವೆ: ಕೋಟಿಗಾನಹಳ್ಳಿ ರಾಮಯ್ಯ

ಮಕ್ಕಳು, ಶಿಕ್ಷಣ, ರಂಗಭೂಮಿ ಇವು ಸೂಕ್ಷ್ಮವಾದ ಆಯಾಮಗಳಾಗಿದ್ದು, ಅತ್ಯಂತ ತಿರಸ್ಕಾರಕ್ಕೆ ಒಳಪಟ್ಟಿರುವ ಏರಿಯಾಗಳು ಹೌದು ಎಂದು ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗ ಆವರಣದಲ್ಲಿ ಸಂಸ್ಕೃತಿ ಸಂಗಮ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆರಂಭವಾದ ನಾಟಕಗಳ ಪ್ರದರ್ಶನದ ಸಮಾರಂಭದಲ್ಲಿ ಅವರು ಮಾತನಾಡಿ, ಸಂಸ್ಕೃತಿ ಸಂಗಮವೇ ಒಂದು ತಾತ್ಕಾಲಿಕ ಭಾವ ಹುಟ್ಟಿಸುತ್ತದೆ, ಇದರ ರೂಪುರೇಷಗಳನ್ನು ಹೊತ್ತಿಕೊಂಡಿರುವವರನ್ನು ನಾನು ಮರೆಯುವುದಿಲ್ಲ. ಇಲ್ಲಿ ಖಾಲಿ ಕುರ್ಚಿಗಳಿದ್ದರೂ ಪರವಾಗಿಲ್ಲ, ಮನುಷ್ಯರು ಬರಲಿ ಅಥವಾ ಬರದೇ ಇರಲಿ, ಬಹಳ ಚೆನ್ನಾಗಿಯೇ ನಾಟಕ ನಿರ್ಮಾಣವಾಗಿದೆ. ಇಲ್ಲಿರುವ ಪರಿಸರಕ್ಕೆ ನಾಟಕ ಪರಿಚಯಿಸಲಿ ಎಂದರು.

ಪ್ರಾಂಶುಪಾಲರಾದ ಕೆ.ಎಂ. ಹೇಮಲತಾ ಮಾತನಾಡಿ, ಪ್ರಥಮ ಬಾರಿಗೆ ನಾಟಕ ಪ್ರದರ್ಶಿತವಾಗಿರುವುದು ಹೆಮ್ಮೆಯ ವಿಷಯ. ನಮ್ಮ ಕಾಲೇಜಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ನಾಟಕ ಪ್ರದರ್ಶನ ಒಂದು ರೀತಿಯ ವಿಶೇಷವಾಗಿದೆ ಎಂದರು.

ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ‘ಪುಟುಕ್ ಜರಜರಾ ಡುಬುಕ್ ಮ್ಯಾ’ ನಾಟಕ ಪ್ರದರ್ಶಿಸಿದರು. ಕೊಪ್ಪಳ ಎನ್.ಎಸ್.ಡಿ. ಷರೀಫ್ ನಿರ್ದೇಶನದ ‘ಸೋಮನಹಳ್ಳಿ ಬ್ರಿಡ್ಜ್ ರಂಗ’ ಪ್ರದರ್ಶನವನ್ನು ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ರಂಗಕರ್ಮಿ ಜನಾರ್ಧನ ಜನ್ನಿ, ಸಾಹಿತಿ ಹುಲ್ಕೆರೆ ಮಹದೇವು, ಸಾಹಿತಿ ನಾಗಮಂಗಲ ಕೃಷ್ಣಮೂರ್ತಿ, ಚಿಂತಕ ಜಗದೀಶ್ ಕೊಪ್ಪ ಉಪಸ್ಥಿತರಿದ್ದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಡ್ಯ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸಂಸ್ಕೃತಿ ಸಂಭ್ರಮ-ನೆಲ ಸಂಸ್ಕೃತಿ ನಾಟಕೋತ್ಸವದಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳಿಂದ ನಾಟಕಗಳ ಪ್ರದರ್ಶನ ಜರುಗಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!