Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ವಕೀಲನ ಮೇಲೆ ಮಾರಾಣಾಂತಿಕ ಹಲ್ಲೆ : ವಕೀಲರ ಸಂಘದ ಅಧ್ಯಕ್ಷ ಸೇರಿ ಐವರ ಮೇಲೆ ಎಫ್ಐಆರ್

ಅಪಘಾತದಲ್ಲಿ ಮೃತಪಟ್ಟ ಇಬ್ಬರು ಮಹಿಳೆಯರ ಕುಟುಂಬಕ್ಕೆ ಪರಿಹಾರ ಕೊಡಿಸುವ ಸಂಬಂಧದ ಕೇಸು ಪಡೆಯುವ ವಿಚಾರದಲ್ಲಿ ವಕೀಲರೊಬ್ಬರ ಮೇಲೆ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಸೇರಿದಂತೆ ಐವರು ಹಲ್ಲೆ ನಡೆಸಿರುವ ಬಗ್ಗೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಕೀಲ ಕೆ.ಬೋರೇಗೌಡ ಎಂಬುವವರು ತೀವ್ರಗಾಗಿ ಗಾಯಗೊಂಡಿದ್ದು, ಇವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೆ.ಆರ್.ಪೇಟೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ಖಚಾಂಚಿ ಪ್ರಸನ್ನಕುಮಾರ್, ಕಾರ್ಯದರ್ಶಿ ಮಂಜೇಗೌಡ, ವಕೀಲರಾದ ಅನ್ವೇಶ್ ಹಾಗೂ ಜಗದೀಶ್ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ.

ಏನಿದು ಘಟನೆ ?

ಕೆ.ಆರ್.ಪೇಟೆ ತಾಲ್ಲೂಕಿನ ಗವಿರಂಗನಾಥಸ್ವಾಮಿ ದೇವಾಲಯದ ಬಳಿ ನಿನ್ನೆ (ನ.3) ಬುಧವಾರ ಬೀಗರ ಔತಣ ಕೂಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಿನಿ ಲಾರಿಯು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಚಕ್ರಕ್ಕೆ ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಆನಂತರ ಸಾರಂಗಿ ಗ್ರಾಮದ ಸುಮತಿ ಎಂಬುವರು ವಕೀಲ ನಾಗೇಗೌಡರಿಗೆ ಕರೆ ಮಾಡಿ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಈ ಸಂಬಂಧ ಕೇಸು ನಡೆಸಿಕೊಡಿ ಎಂದು ಕೇಳಿದ್ದರು. ಆನಂತರ ವಕೀಲ ನಾಗೇಗೌಡ ಅವರು ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜು, ಯಜಮಾನ ವಿಶ್ವನಾಥ್ ಎಂಬುವರಿಗೆ ಕರೆ ಮಾಡಿದಾಗ ಅವರು, ಶವಗಳನ್ನು ಸರ್ಕಾರಿ ಆಸ್ಪತ್ರೆ ಬಳಿಗೆ ತರುತ್ತಿದ್ದೇವೆ, ನೀವು ಅಲ್ಲಿಗೆ ಬನ್ನಿ ಎಂದು ತಿಳಿಸಿದ್ದರು. ಆನಂತರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ವಕೀಲ ಬೋರೇಗೌಡರಿಗೆ ಕರೆ ಮಾಡಿ, ‘ನಾನು ಸರ್ಕಾರಿ ವಕೀಲನಾಗಿದ್ದು ನೀನು ಈ ಕೇಸಿನಲ್ಲಿ ತಲೆ ಹಾಕಬೇಡ, ತಲೆ ಹಾಕಿದರೆ ನಿನ್ನ ಕಚೇರಿಗೆ ಬಂದು ಚಾಕುವಿನಿಂದ ಚುಚ್ಚಿ ಕೊಲೆ ಮಾಡುತ್ತೇನೆಂದು’ ಬೆದರಿಕೆ ಹಾಕಿದ್ದರೆನ್ನಲಾಗಿದೆ.

ಆದಾದ ನಂತರ ಸಂಜೆ 5.30 ರ ವೇಲೆ ತನ್ನ ಕಛೇರಿಗೆ ಧಾವಿಸಿದ ಕೆ.ಆರ್.ಪೇಟೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ಖಚಾಂಚಿ ಪ್ರಸನ್ನಕುಮಾರ್, ಕಾರ್ಯದರ್ಶಿ ಮಂಜೇಗೌಡ, ವಕೀಲರಾದ ಅನ್ವೇಶ್ ಹಾಗೂ ಜಗದೀಶ್ ಎಂಬುವರು, ಕಚೇರಿಯ ಶೆಲ್ಟರ್ ಎಳೆದು ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಬಲಗೈಗೆ ಚುಚ್ಚಿ ರಕ್ತಗಾಯ ಉಂಟು ಮಾಡಿದ್ದಾರೆ ಎಂದು ವಕೀಲ ಬೋರೇಗೌಡ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಲ್ಲೆ ನಡೆಸುವ ಸಂದರ್ಭದಲ್ಲಿ ತಮ್ಮ ಕಚೇರಿಯನ್ನು ಧ್ವಂಸ ಮಾಡಲಾಗಿದ್ದು, ಇದರಿಂದ 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಿದ್ಧಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ