ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನೂತನ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿ.ಪಿ.ಪ್ರಕಾಶ್ ರಣಕಹಳೆ ಪತ್ರಿಕೆಯ ಸಂಪಾದಕರಾಗಿದ್ದು ಇವರ ಪತ್ನಿ ಶಶಿಕಲಾ ಕಳೆದ ನಗರಸಭೆ ಕೌನ್ಸಿಲ್ ಸದಸ್ಯರಾಗಿದ್ದರು.
ಮಂಡ್ಯದ ಗುತ್ತಲು ಕಾಲೋನಿಯ ಇದೀಸ್ ಖಾನ್, ಮಂಡ್ಯನಗರದ ವಿ.ವಿ.ನಗರ ಕಲ್ಲಹಳ್ಳಿಯ ಕಾರ್ತಿಕ್ ಕೆ.ಜೆ., ಮಂಡ್ಯ ತಾಲ್ಲೂಕು ಸಾತನೂರು ಬೀರೇಶ್ವರ ಬಡಾವಣೆಯ ಎನ್ ಎಸ್ ಮಹೇಶ್ ಹಾಗೂ ಮಂಡ್ಯ ಅಶೋಕನಗರದ ಕಮಲಮ್ಮ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ.





