Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ : ಒಂದು ವಾರದೊಳಗೆ 271 ಪೋಡಿ ದುರಸ್ತಿ – ಕೃಷ್ಣ ಭೈರೇಗೌಡ

ಮಂಡ್ಯ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ವದ ಕೆಲಸ ಪ್ರಾರಂಭಿಸಿದ್ದು, ಒಂದೇ ವಾರದಲ್ಲಿ 414 ಪ್ರಕರಣಗಳನ್ನು ಅಳತೆ ಮಾಡಿ‌ 271 ಪೋಡಿ ದುರಸ್ತಿ ಮಾಡಿ ಹೊಸ ಪಹಣಿ ಮತ್ತು ಪೋಡಿ ದಾಖಲೆ ವಿತರಣೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ಅವರು ಇಂದು ನಾಗಮಂಗಲ ತಾಲ್ಲೂಕಿನಲ್ಲಿ ದರಖಾಸ್ತು ಪೋಡಿ ದುರಸ್ಥಿ, ಸರಳೀಕೃತ ಕಾರ್ಯಾಚಾರಣೆಗೆ ಚಾಲನೆ ಹಾಗೂ ಹೊಸ ಪಹಣಿ ಮತ್ತು ಪೋಡಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಮೊದಲು ಒಂದು ವರ್ಷಕ್ಕೆ ಹಲವಾರು ಕಾರಣಗಳಿಂದ ಕೇವಲ 100 ಪೋಡಿ ದುರಸ್ತಿ ಮಾಡಲಾಗುತ್ತಿತ್ತು. ಈ ಕೆಲಸವನ್ನು ಸರಳೀಕರಣಗೊಳಿಸಿ ಎಲ್ಲಾ ದಾಖಲೆಗಳಗನ್ನು ಆನ್ ಲೈನ್ ಮೂಲಕ ಸಂಗ್ರಹಿಸಿಡುವ ಕೆಲಸ ಮಾಡಲಾಗುತ್ತಿದೆ. ಕಂದಾಯ ಇಲಾಖೆಗೆ ಚುರುಕುಗೊಳಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ಕಂದಾಯ ಇಲಾಖೆ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ಕೆಲಸ ಮಾಡಿಕೊಡುತ್ತಿದ್ದಾರೆ ಎಂದರು‌.

ರಾಜ್ಯದಲ್ಲಿ ಪೋಡಿ ದುರಸ್ಥಿ ಸರಳೀಕೃತ ಕಾರ್ಯದ ಅಭಿಯಾನಕ್ಕೆ ಚಾಲನೆ ನೀಡಿ, ಸರ್ವೇ ಮಾಡುವ ವಿಚಾರದಲ್ಲಿ 1 ವರ್ಷದಿಂದ ಸರ್ವೇ ಹಾಗೂ ರೇವಿನ್ಯು ಇಲಾಖೆಯವರು ಚರ್ಚಿಸಿ 5 ಹಂತದಲ್ಲಿ ಮಾಡಲಾಗುತ್ತಿದ್ದ ಕೆಲಸವನ್ನು ಈಗ ಕೇವಲ 2 ಹಂತಕ್ಕೆ ಇಳಿಸಿ ಆನ್ಲೈನ್ ನಲ್ಲಿ ಸರಳೀಕೃತಗೊಳಿಸಲಾಗಿದೆ ಎಂದರು.

ಉಪವಿಭಾಗಾಧಿಕಾರಿ ನ್ಯಾಯಾಲಯ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ಇದ್ದಂತಹ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಹಳೆಯ ಪ್ರಕರಣ ಗಳನ್ನು ಕಡಿಮೆಗೊಳಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಪೌತಿ ಆಂದೋಲನಕ್ಕೆ ಸಂಬಂಧಪಟ್ಟಂತೆ ಅನೇಕ ಕೆಲಸಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ಕಂದಾಯ ಇಲಾಖೆಯಿಂದ 46 ವರ್ಷಗಳಿಂದ ಬಾಕಿ ಇದ್ದ ದರಖಾಸ್ತು ಪೋಡಿಯನ್ನು ಇಂದು ನಮ್ಮ ಸರ್ಕಾರ ದುರಸ್ಥಿ ಮಾಡಿಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಸರಿ ಸುಮಾರು 30,000 ರೈತ ಕುಟುಂಬಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು/ಸರ್ಕಾರಿ ಭೂಮಿ ಇಂದಿಗೂ ದುರಸ್ಥಿಯಾಗದೆ ಬಾಕಿ ಇದೆ..
ಮಂಡ್ಯ ಜಿಲ್ಲೆಯಲ್ಲಿ ದರಕಾಸ್ತು ಪೋಡಿ ದುರಸ್ತಿ ಅಭಿಯಾನಕ್ಕೆ 3,281ಪ್ರಕರಣಗಳ ಗುರಿ ನಿಗದಿ ಮಾಡಲಾಗಿದೆ. ಅದರಲ್ಲಿ 414 ಪ್ರಕರಣಗಳ ಸರ್ವೇ ಆಗಿದ್ದು, ಇದರಲ್ಲಿ 271 ಜನರಿಗೆ ಪಹಣಿಯನ್ನು ನಾವು ಇಂದು ಮಾಡಿಕೊಡುತ್ತಿದ್ದೇವೆ. ಮುಂದಿನ 6 ತಿಂಗಳಲ್ಲಿ ಉಳಿದ ಸರ್ವೇಗಳನ್ನು ಪೂರ್ಣಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
.*ಜನರ ಮನೆ ಬಾಗಿಲಿಗೆ ಯೋಜನೆಗಳು*
ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಮೇಲೆ ಅನೇಕ ಬದಲಾವಣೆಯನ್ನು ತರುವ ಮೂಲಕ ಕಂದಾಯ ಇಲಾಖೆಯಲ್ಲಿ ಸುಧಾರಣೆ ತರಲಾಗಿದೆ. ಜನ ಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುವ ಮೂಲಕ ಸ್ಪಂದಿಸಿದ್ದೇವೆ. ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ಮಾಡಿಕೊಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮನೆ ಮನೆ ತೆರಳಿ ಖಾತೆ ಮಾಡಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಹಲವಾರು ದಿನಗಳಿಂದ ಬಾಕಿ ಇದ್ದಂತಹ ಒಟ್ಟು 15,000 ಪ್ರಕರಣಗಳಲ್ಲಿ 13,000 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಕೇವಲ 1 ವಾರದಲ್ಲಿಯೇ 416 ಪ್ರಕರಣಗಳ ಸರ್ವೇ ಮಾಡಲಾಗಿದೆ. ಜೊತೆಗೆ ಪೌತಿ ಖಾತೆಗಳನ್ನು ಸರಿಯಾದ ರೀತಿಯಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. 1960- 70 ರಲ್ಲಿ ಮಂಜೂರಾಗಿರುವ ಕಂದಾಯ ಇಲಾಖೆಯ ದರಖಾಸ್ತು ಪೋಡಿ ದುರಸ್ಥಿ ಸರಳೀಕೃತ ಕಾರ್ಯದ ಹೊಸ ಪಹಣೆ ಮತ್ತು ಪೋಡಿ ದಾಖಲೆಗೆ ಸಂಬಂಧಪಟ್ಟಂತೆ ಶಾಶ್ವತ ದಾಖಲೆಗಳನ್ನು ನೀಡಲಾಗುತ್ತಿದೆ ಎಂದರು.

ನಮ್ಮ ಸರ್ಕಾರವು ಜನರ ಮನೆಯ ಬಾಗಿಲಿಗೆ ಅನೇಕ ಯೋಜನೆಗಳನ್ನು ನೀಡುವ ಮೂಲಕ ಅನುಕೂಲ ಮಾಡುತ್ತಿದೆ. ಸರ್ಕಾರದ ಪಂಚಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಅನ್ನ ಭಾಗ್ಯ ಯೋಜನೆಗಳಿಂದ ಸಾರ್ವಜನಿಕರು ಸದುಪಯೋಗ ಪಡೆಯುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ಡೀಸಲ್ ಎಂಜಿನ್, ಪಿವಿಸಿ ಪೈಪ್, ರಾಗಿ ಫ್ಲೋರ್‌ಮಿಲ್‌ ಸೇರಿದಂತೆ 380 ಫಲಾನುಭವಿಗಳಿಗೆ 1ಕೋಟಿ ರೂ ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ,ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರು ಮಂಜುನಾಥ್ ಜೆ.ಮೈಸೂರು ವಿಭಾಗ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು ಈ. ಪ್ರಕಾಶ್, ಜಿಲ್ಲಾಧಿಕಾರಿ ಡಾ ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಶ್ರೀನಿವಾಸ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ