Thursday, November 19, 2026

ಪ್ರಾಯೋಗಿಕ ಆವೃತ್ತಿ

ಬುದ್ಧ ಬಸವಣ್ಣನನ್ನು ತ್ಯಜಿಸಿದವರಿಂದಲೇ ಸಂವಿಧಾನದ ಮೇಲೆ ದಾಳಿ : ಕೃಷ್ಣ ಭೈರೇಗೌಡ

ಸಮಾನತೆಯನ್ನು ಪ್ರತಿಪಾದಿಸಿದ ಬುದ್ಧ ಬಸವಣ್ಣನವರನ್ನು ತ್ಯಜಿಸಿದವರಿಂದಲೇ ಇಂದು ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ದಾಳಿ ನಡೆಯುತ್ತಿದೆ. ಇದು ನಾವು ಎಚ್ಚರಾಗಬೇಕಾದ ಕಾಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಜಯಪುರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಂಬೇಡ್ಕರ್ ಹಬ್ಬ ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹುಟ್ಟಿನಿಂದ ಇವರು ಮೇಲೆ ಕೆಳಗೆ. ಈತ ಅಸ್ಪೃಶ್ಯ ಇವರನ್ನು ಮುಟ್ಟಬಾರದು ಊರಿಂದ ಹೊರಗಿಡಬೇಕು ಎಂಬ ಮನುವಾದ ಬಹಳ ಹಿಂದಿನಿಂದಲೂ ಇದೆ ಈ ಮನುವಾದದ ವಿರುದ್ಧ ಮೊದಲು ಧ್ವನಿ ಎತ್ತಿದವರು ಬುದ್ಧ ಅದನ್ನು ಮುಂದುವರೆಸಿದವರು ಬಸವಣ್ಣ ಅದನ್ನು ಸಂವಿಧಾನದ ಆಶಯವನ್ನಾಗಿಸಿದವರು ಅಂಬೇಡ್ಕರ್. ಅದನ್ನೇ ಪ್ರತಿಪಾದಿಸಿದವರು ಕುವೆಂಪು ಈ ತದ್ದಿರುದ್ಧವಾದಗಳ ನಡುವೆ ಅಂದಿನಿಂದಲೂ ಪ್ರತಿಸ್ಪರ್ಧೆ ಇದೆ. ಮಾನವತಾವಾದವನ್ನು ಪ್ರತಿಪಾದಿಸಿದ ಈ ಎಲ್ಲಾ ಮಹನೀಯರನ್ನು ತ್ಯಜಿಸಿದವರಿಂದಲೇ ಇಂದು ಸಂವಿಧಾನದ ಮೇಲೂ ದಾಳಿ ನಡೆಯುತ್ತಿದೆ ಹೀಗಾಗಿ ನಾವೆಲ್ಲರೂ ಎಲ್ಲಾ ಕಾಲದಲ್ಲೂ ಜಾಗೃತರಾಗಿರಬೇಕು’ ಎಂದು ತಿಳಿಸಿದರು.

ಬುದ್ಧ ಬಸವ ಅಂಬೇಡ್ಕರ್ ಪುಲೆ ಇವರ ಎಲ್ಲರ ಆಶಯವೂ ಒಂದೇ ಆಗಿತ್ತು. ಸಂಪ್ರದಾಯವಾದಿಗಳ ವಿರುದ್ಧ ಬುದ್ಧ ಧ್ವನಿ ಎತ್ತಿದ್ದ ಎಲ್ಲರೂ ಒಂದೇ ಎಂಬ ಸಮಾನತೆಯನ್ನು ಸಾರಿದ್ದ ಬುದ್ಧನ ಆದಿಯಾಗಿ ಬಸವಣ್ಣ ಪುಲೆ, ಅಂಬೇಡ್ಕರ್ ರಿಂದ ವಿಶ್ವಮಾನವ ಕುವೆಂಪುವರೆಗೆ ಎಲ್ಲರೂ ಪಾಲಿಸಿದ್ದು, ಪ್ರತಿಪಾದಿಸಿದ್ದು ಈ ಮಾನವತಾ ವಾದವನ್ನೇ ಬುದ್ಧನ ಈ ವೈಚಾರಿಕತೆಯನ್ನು ಬಸವಣ್ಣ-ಕನಕದಾಸರು ಜನ ಸಾಮಾನ್ಯರಿಗೆ ತತ್ವದ ಭಾಷೆಯಲ್ಲಿ ಹೇಳಿದರೆ ಅದಕ್ಕೆ ಆಧುನಿಕ ಭಾಷೆಯನ್ನು ಸೇರಿಸಿ ಸಂವಿಧಾನವನ್ನಾಗಿಸಿದವರು ಅಂಬೇಡ್ಕರ್ ಎಂದರು.

“ಇರುವುದು ಒಂದೇ ಕುಲ ಮಾನವ ಕುಲ ಇಲ್ಲಿ ಹುಟ್ಟಿನಿಂದ ಯಾರೂ ಮೇಲಲ್ಲ ಕೀಗಳ ಅಲ್ಲ ಎಂಬ ಸಮಾನತೆಯ ಆಶಯವೇ ನಮ್ಮ ಸಂವಿಧಾನದ ಮೂಲ ತತ್ವ ಇದಕ್ಕೆ ಸ್ಫೂರ್ತಿ ಬಸವಣ್ಣನೂ ಹೌದು ಬುದ್ಧನೂ ಹೌದು. ಭಾಷೆ 20ನೇ ಶತಮಾನದ್ದಿರಬಹುದು. ಆದರೆ, ಅದರ ಸ್ಪೂರ್ತಿ ಈ ಮಣ್ಣಿನಲ್ಲಿ ಅಡಗಿದೆ ಅವರು ಬಿತ್ತಿದ ಕಾಳು ಇಂದು ಮರವಾಗಿ ಬೆಳೆದು ಸಂವಿಧಾನದ ರೂಪದಲ್ಲಿ ನಮಗೆ ಸಿಕ್ಕಿದೆ ಬಸವ ಸಾಹಿತ್ಯ ದಾಸ ಸಾಹಿತ್ಯದಿಂದ ಕುವೆಂಪು ವರೆಗೆ ಎಲ್ಲರೂ ಇದನ್ನೇ ಪ್ರತಿಪಾದಿಸಿದ್ದು ಇವರೆಲ್ಲರೂ ಮಾನವತಾವಾದಿಗಳು ನಾವು ಅನುಸರಿಸಬೇಕಾದ ನಿಜವಾದ ನಾಯಕರು’ ಎಂದು ತಿಳಿಸಿದರು.

ವಚನ ಸಾಹಿತ್ಯದ ಮೇಲಿನ ದಾಳಿಯ ಬಗ್ಗೆ ಎಚ್ಚರವಿರಲಿ!

‘ಬಸವಣ್ಣನವರ ತತ್ವವೇ ನಮ್ಮ ನಾಡಿನ ಗುಣ ಜಾತಿ- ಕುಲ ಬಿಟ್ಟು ಮನುಷ್ಯರಾಗಿ ಬದುಕಿ ಎಂಬುದೇ ಅವರ ಸಿದ್ಧಾಂತ ಒಡೆದು ಗುವ ನೀಟಿಯನ್ನು ತಿರಸ್ಕಾರ ಮಾಡಿ ಎಲ್ಲರೂ ನಮ್ಮವರು ಎಂಬುದೇ ನಮ್ಮ ಸಂಸ್ಕೃತಿ ಸಂಪ್ರದಾಯ ಇದೇ ಕಾರಣಕ್ಕೆ ನಮ್ಮ ಸರ್ಕಾರ ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಏಕೆಂದರೆ ಬಸವಣ್ಣನಿಗಿಂತ ನಮ್ಮ ನಾಡಿನ ಗುಣವನ್ನು ಯಾರೂ ಪ್ರತಿಬಿಂಬಿಸಲು ಸಾಧ್ಯವಿಲ್ಲ’ ಎಂದರು.

“ವಚನಗಳಿಗೆ ಶರಣು ಎಂದವರಿಂದಲೇ ಇಂದು ವಚನ ಸಾಹಿತ್ಯದ ಮೇಲೆ ದಾಳಿ ಶುರುವಾಗಿದೆ. ಬುದ್ಧನನ್ನು ಅವಹೇಳನ ಮಾಡಿದವರು, ಬಸವನನ್ನು ತಿರಸ್ಕರಿಸಿದವರು. ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸಬೇಕು ಎಂದು ಮಾತನಾಡುತ್ತಿರುವವರು ಇಂದು ವಚನ ಸಾಹಿತ್ಯದ ಮೇಲೂ ದಾಳಿ ನಡೆಸುತ್ತಿದ್ದಾರೆ ಈ ಬಗ್ಗೆಯೂ ನಾವು ಎಚ್ಚರಾಗಿರಬೇಕು’ ಎಂದು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ