Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಸವಣ್ಣನ ಜಯಂತಿಯಂದು ರೇಣುಕಾ ಭಾವಚಿತ್ರ ಸಲ್ಲದು : ಮಂಜುನಾಥ್

ವಿಶ್ವಗುರು ಬಸವಣ್ಣನವರ ಜಯಂತಿ ಮತ್ತು ಕಾಲ್ಪನಿಕ ವ್ಯಕ್ತಿ ರೇಣುಕಾ ಜಯಂತಿಯನ್ನು ಒಂದೇ ದಿನ ಮಾಡುವಂತೆ ವೀರಶೈವ ಸಂಸ್ಥೆಯ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರ ನಡೆ ತುಂಬಾ ಹೀನಾಯವಾದದ್ದು ಎಂದು ಮಂಡ್ಯ ಜಿಲ್ಲಾ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ ಬೆಟ್ಟಹಳ್ಳಿ ಎಂಎಸ್ ಮಂಜುನಾಥ್ ಖಂಡಿಸಿದ್ದಾರೆ.

ಬಸವಣ್ಣನವರು 12ನೇ ಶತಮಾನದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದ ಸಮಾನತೆಯ ಹರಿಕಾರ. ದೀನ ದಲಿತರ ಶೋಷಿತರ ಬದುಕಿಗೆ ಜ್ಞಾನಜ್ಯೋತಿಯಾದ ಇಷ್ಟಲಿಂಗ ಪರಿಕಲ್ಪನೆಯನ್ನು ಕಂಡು ಹಿಡಿದು ಲಿಂಗಾಯತ ಧರ್ಮದ ಸಂಸ್ಥಾಪಕರಾದ ಬಸವಣ್ಣನವರು ಜಯಂತಿಯ ಜೊತೆಯಲ್ಲಿ ಬಹುದೇವರ ಆಚರಣೆ, ಮೂಡನಂಬಿಕೆ, ಕಂದಾಚಾರದ ಹೋಮ ಶಾಸ್ತ್ರ ಹೇಳುವ ಬಸವಣ್ಣನವರನ್ನು ಧರ್ಮಗುರು ಎಂದು ಹೇಳದ
ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯರ ಪರಂಪರೆಯವರ ಜೊತೆ ಯಾವುದೇ ಕಾರಣಕ್ಕೂ ಬಸವಣ್ಣನವರ ಜಯಂತಿ ಅವರ ಜೊತೆಯಲ್ಲಿ ಕಾಲ್ಪನಿಕ ವ್ಯಕ್ತಿ ಫೋಟೋ ಇಡಕೂಡದು ಎಂದರು.

ಮೊದಲಿಂದಲೂ ಬಸವಣ್ಣನವರ ವಿಚಾರಗಳನ್ನ ಅವರ ಹೆಸರನ್ನು ಮರೆಮಾಚುವ ಕೆಲಸ ಮನುವಾದಿಗಳಿಂದ ನಡೆಯುತ್ತಿದೆ. ಬಸವ ಜಯಂತಿ ದಿನ ಎರಡು ಕೊಂಬು ನಾಲಕ್ಕು ಕಾಲಿನ ಎತ್ತು ತಂದು ಬಸವ ಜಯಂತಿ ಆಚರಿಸುವಂತೆ ಷಡ್ಯಂತ್ರ ಕುತಂತ್ರ ಮಾಡುತ್ತಿದ್ದರು. ಈಗ ಬಸವಣ್ಣನವರ ವಿಚಾರ ವಿಶ್ವದಲ್ಲೇ ಅರಳಿದೆ. ಕರ್ನಾಟಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯವಾಗಿ ಭಾವಚಿತ್ರವನ್ನು ಇಡುವಂತೆ ಆದೇಶಿಸಿದೆ. ಬಸವಣ್ಣ ಜಯಂತಿಯನ್ನು ಸರ್ಕಾರದ ರಜೆ ಜೊತೆ ಎಲ್ಲಾ ಕಚೇರಿಗಳನ್ನು ಎಲ್ಲಾ ಅಧಿಕಾರಿಗಳು ಒಳಗೊಂಡಂತೆ ಅರ್ಥಪೂರ್ಣವಾಗಿ ಆಚರಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದನ್ನ ಸಹಿಸದ ಪಟಭದ್ರ ಹಿತ ಶಕ್ತಿಗಳು ಬಸವಣ್ಣ ಬಸವಾದಿ ಶರಣರ ತತ್ವ ಆದರ್ಶಗಳಿಗೆ ತಳುಕು ಹಾಕುವ ದಿಕ್ಕು ತಪ್ಪಿಸುವ ಅವಿವೇಕದ ಕೆಲಸವನ್ನು ಮಾಡದಿರಲಿ ಎಂದು ತಿಳಿಸಿದರು.

ಶಂಕರ್ ಬಿದರಿಯವರು ಬಸವಣ್ಣನವರ ತತ್ವ ಆದರ್ಶಗಳಿಗೆ ಒತ್ತು ಕೊಡುತ್ತಿದ್ದವರು. ಅಲ್ಪ ಅಧಿಕಾರದ ಆಸೆಗಾಗಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ, ತಮ್ಮ ಸ್ವಾಭಿಮಾನವನ್ನ ಗಿರವಿ ಇಡುವ ಕೆಲಸವನ್ನು ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದ ಬಹುದೊಡ್ಡ ಬಸವಣ್ಣ ಅನುಯಾಯಿಗಳು ಲಿಂಗಾಯತ ಸಮಾಜ ನಿಮ್ಮನ್ನು ಕ್ಷಮಿಸುವುದಿಲ್ಲ‌. ಈ ನಿರ್ಧಾರದಿಂದ ಹೊರಕ್ಕೆ ಬರಲಿ ತತ್ವ ಆದರ್ಶಗಳಿಗೆ ಭಿನ್ನವಾಗಿರುವವರ ಜೊತೆ ಜೊತೆಯಲ್ಲಿ ಆಚರಣೆ ಬೇಡ ಎಂದು ಅವರು ಒತ್ತಾಯಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ