ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತಿಯ ಪಿ.ಡಿ.ಓ ಕೃಷ್ಣೇಗೌಡ ಅಸಭ್ಯವಾಗಿ ನಡೆದುಕೊಂಡಿರುವುದಕ್ಕೆ ಕಾರಣ ಕೇಳಿ ನೋಟೀಸ್ ನೀಡಬೇಕು, ಅಲ್ಲದೇ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್)ವು ಮಂಡ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದೆ.
ಮಂಡ್ಯ| ಪಿಡಿಓ ಅಸಭ್ಯ ವರ್ತನೆ; ಶಿಸ್ತು ಕ್ರಮಕ್ಕೆ ಕೆ.ಆರ್.ಎಸ್ ಆಗ್ರಹ
ಕಳೆದ ಮೇ 20 ರಂದು ನಾನು ಹಾಗೂ ಕೆ.ಆರ್.ಎಸ್ ಪಕ್ಷದ ಹಲವು ಪದಾಧಿಕಾರಿಗಳು ಮಂಡ್ಯ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಗೆ ಕೆ.ಆರ್.ಎಸ್ ಪಕ್ಷದ ಫೇಸ್ಬುಕ್ ಪೇಜ್ ಗಳಿಂದ ಲೈವ್ ಮಾಡಿಕೊಂಡು ಭೇಟಿ ನೀಡಿದ್ದು, ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಬಂದ ಕೆಲವೊಂದು ದೂರಗಳ ವಿಚಾರವಾಗಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಅವ್ಯವಸ್ಥೆಯನ್ನ ಸರಿಪಡಿಸಲು ಪಿ. ಡಿ.ಓ. ಕೃಷ್ಣೇಗೌಡ ಅವರನ್ನು ಕೇಳಿದ್ಧಾಗ ಅವರು ಸರಿಯಾದ ಮಾಹಿತಿ ನೀಡದೇ ಅನುಚಿತವಾಗಿ ವರ್ತಿಸಿದ್ಧಾರೆಂದು ಕೆ.ಆರ್.ಎಸ್ ಪಕ್ಷದ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಆಗ್ರಹಿಸಿದ್ದಾರೆ.
ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿಏಕೆ ಗುರುತಿನ ಚೀಟಿ ಧರಿಸಿಲ್ಲ, ಇದು ನಿಮ್ಮಗಳ ಜವಾಬ್ಧಾರಿ ಕರ್ತವ್ಯ ಅಲ್ಲವೇ ಎಂದು ಪ್ರಶ್ನಿಸಿ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮಾಹಿತಿ, ಹಾಜರಾತಿ ಹಾಗು ಚಲನವಲನಗಳ ಪುಸ್ತಕವನ್ನು ತೋರಿಸಿ ಎಂದು ಮನವಿ ಮಾಡಿಕೊಂಡು, ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆಡಳಿತದಲ್ಲಿ ಪಾರದರ್ಶಕತೆಯನ್ನ ಖಾತರಿ ಪಡಿಸಿಕೊಳ್ಳಲು, ಜಿಲ್ಲಾಧಿಕಾರಿಗಳು ಕಳೆದ ವರ್ಷ 2023ರ ಅಕ್ಟೋಬರ್ ತಿಂಗಳಲ್ಲಿ ಹೊರಡಿಸಿರುವ ಸುತ್ತೋಲೆ ಬಗ್ಗೆ ಮಾಹಿತಿ ಇಲ್ಲವೆ ಅಂತ ಕೇಳಿದ ತಕ್ಷಣ, ಪಿ.ಡಿ.ಓ ರವರು ನನಗೆ ಮಾಹಿತಿಯಿಲ್ಲ, ನಮ್ಮ ಇಲಾಖೆ ಅಧಿಕಾರಿಗಳು ನಮಗೆ ತಿಳಿಸಿಲ್ಲ ಎನ್ನುವ ಆರಿಕೆಯ ಉತ್ತರವನ್ನು ಕೊಟ್ಟು ಯಾವ ಸುತ್ತೋಲೆ ನೀವೇ ಕೊಡಿ ಹಾಗೂ ನಿಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ ಅಂತ ಹೇಳಿ, ಅಗತ್ಯ ಮಾಹಿತಿಯನ್ನು ಕೊಡದೆ ಕಚೇರಿಯಿಂದ ಹೊರಟಿದ್ದು ಅವರ ಬೇಜವಾಬ್ದಾರಿತನವನ್ನ ತೋರಿಸುತ್ತದ್ದೆ ಎಂದು ದೂರಿದ್ದಾರೆ.
ಮಂಗಲ ಗ್ರಾಮ ಪಂಚಾಯತಿಯ ಪಿ.ಡಿ.ಓ ಕೃಷ್ಣೇಗೌಡ ಕರ್ತವ್ಯಗಳ ಇತಿಮಿತಿಗಳನ್ನ ಅರಿಯದೆ ಅಸಭ್ಯವಾಗಿ ನಡೆದುಕೊಂಡಿರುವುದಕ್ಕೆ ಕಾರಣ ಕೇಳಿ ನೋಟೀಸ್ ನೀಡಿ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ



