Thursday, November 19, 2026

ಪ್ರಾಯೋಗಿಕ ಆವೃತ್ತಿ

ಸೌಜನ್ಯ ಪ್ರಕರಣ ಮರುತನಿಖೆಗೆ ಆಗ್ರಹ| ಬೆಳ್ಳೂರು ಕ್ರಾಸ್ ತಲುಪಿದ KRS ಪಾದಯಾತ್ರೆ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS)ವು ಬೆಳ್ತಂಗಡಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ 10ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ತಲುಪಿದೆ.

ಸೋಮವಾರ ಬೆಳಿಗ್ಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ’ಯಿಂದ ಹೊರಟು, ಮಧ್ಯಾಹ್ನ 11.30 ಕ್ಕೆ ಪಾದಯಾತ್ರೆಯ ತಂಡ ನಾಗಮಂಗಲ ಬೆಳ್ಳೂರು ಕ್ರಾಸ್ ತಲುಪಿತು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ರವಿಕೃಷ್ಣಾರೆಡ್ಡಿ, ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್ ಹೆಚ್, ರಾಜ್ಯ ಯುವ ಘಟಕದ ರಾಜ್ಯ ಅಧ್ಯಕ್ಷ ರಘು ಜಾಣಗೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅರುಣ ಕುಮಾರ ಹೆಚ್ ಮಲ್ಲೇಗೌಡ, ಮಂಡ್ಯ ಜಿಲ್ಲಾ ಅಧ್ಯಕ್ಷ ರಮೇಶ್ ಗೌಡ ಜಿ.ಎಮ್, ರಾಜ್ಯ ಉಪಾಧ್ಯಕ್ಷ ಮಲ್ಲೇಶ, ಪ್ರಧಾನ ಕಾರ್ಯದರ್ಶಿ ಚಂದ್ರು‌ ಕೀಲಾರ, ಉಳಿದಂತೆ ರಾಜ್ಯ‌ ಮತ್ತು ಜಿಲ್ಲಾ ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು, ಈ‌ ಪಾದಯಾತ್ರೆ ಸಾಯಂಕಾಲದ ಹೊತ್ತಿಗೆ ತುಮಕೂರು ಜಿಲ್ಲೆಗೆ ಪ್ರವೇಶಿಸಿ, ಸಂಜೆಗೆ ಐತಿಹಾಸಿಕ ಯಡಿಯೂರು ತಲುಪುವ ನೀರಿಕ್ಷೆ ಇದೆ.

ಆಗಸ್ಟ್ 26ರಂದು ಬೆಳ್ತಂಗಡಿಯಿಂದ ಆರಂಭವಾದ ಪಾದಯಾತ್ರೆ ಧರ್ಮಸ್ಥಳ’ದ ಮಾರ್ಗವಾಗಿ ಸಾಗಿ ಬಂದಿದೆ, ಯಾತ್ರೆ ಸದಸ್ಯರು, ಸೌಜನ್ಯ ನಿವಾಸಕ್ಕೆ ಕೊಟ್ಟು, ಅಲ್ಲಿಯೇ ಒಂದು ದಿನ ವಸತಿ ಮಾಡಿದ್ದರು.  ಈ ಪಾದಯಾತ್ರೆಯು 14 ದಿನಗಳ ಕಾಲ ಒಟ್ಟು 330 ಕಿಲೋ ಮೀಟರ್ ಕ್ರಮಿಸಿ, ಸೆಪ್ಟೆಂಬರ್ 8ಕ್ಕೆ ಬೆಂಗಳೂರು ತಲುಪಲಿದೆ. ಸೆ.9ಕ್ಕೆ ವಿಧಾನಸೌಧ ತಲುಪಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ