Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| 98 ಅಡಿಗೆ ಕುಸಿದ ಕೆ.ಆರ್.ಎಸ್ ನೀರಿನ ಮಟ್ಟ

ಮಂಡ್ಯ ಜಿಲ್ಲೆಯಾದ್ಯಂತ ಪ್ರತಿಭಟನೆ, ಧರಣಿ ಮುಂದುವರಿಯುತ್ತಿದ್ದರೂ ಮತ್ತೊಂದೆಡೆ ತಮಿಳುನಾಡಿಗೆ ಕೆಆರ್’ಎಸ್ ಜಲಾಶಯದಿಂದ 6295 ಕ್ಯೂಸೆಕ್ ನೀರನ್ನು ಕಾವೇರಿ ನದಿ‌ ಮೂಲಕ ಹರಿ ಬಿಡಲಾಗುತ್ತಿರುವ ಪರಿಣಾಮ ಜಲಾಶಯದ ನೀರಿನ ಮಟ್ಟ 98.86 ಅಡಿಗಿಳಿದಿದೆ.

ಮಂಗಳವಾರ ರಾತ್ರಿ 8 ಗಂಟೆಯಲ್ಲಿ ನಗರದಲ್ಲಿ ಈ ಕುರಿತು ಮಾಹಿತಿ ನೀಡಿರುವ ಕಾ ನೀ ನಿಗಮದ ಅಧಿಕಾರಿಗಳು
ಜಲಾಶಯಕ್ಕೆ 3201 ಕ್ಯೂಸೆಕ್ ಒಳಹರಿವು, ನದಿ ಹಾಗೂ ನಾಲೆಗೆ 6345 ಕ್ಯೂಸೆಕ್ ನೀರು ಹೊರಹರಿವಿದೆ ಎಂದಿದ್ದಾರೆ.

ಕಳೆದ ವರ್ಷ ಇದೆ ದಿನ 124.74 ಅಡಿ ನೀರಿನ ಮಟ್ಟ, 15279 ಕ್ಯೂಸೆಕ್ ಒಳಹರಿವು ಹಾಗೂ 19591 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ