Friday, November 20, 2026

ಪ್ರಾಯೋಗಿಕ ಆವೃತ್ತಿ

ಸಮಾಜದ ಒಳಿತಿಗಾಗಿ ತ್ಯಾಗ ಮಾಡುವವರು ನಿಜ ಸಾಧಕರು ; ಅಲೈ ಮಾದೇಗೌಡ

ಕೋಟ್ಯಂತರ ರೂಪಾಯಿ ಹಣವುಳ್ಳವರು ಸಾಧಕರಲ್ಲ, ಸಮಾಜದ ಒಳಿತಿಗಾಗಿ ತಮ್ಮನ್ನು ತೊಡಗಿಸಿಕೊಂಡು ತ್ಯಾಗ ಮಾಡುವವರು ನಿಜವಾದ ಸಾಧಕರು ಎಂದು ಮಂಡ್ಯ ಜಿಲ್ಲಾ ರಾಜ್ಯಪಾಲ ಅಲೈ ಮಾದೇಗೌಡ ಅಭಿಪ್ರಾಯಪಟ್ಟರು.

ಅಸೋಯೇಷನ್‌ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್, ನೆಲದನಿ ಅಲಯನ್ಸ್ ಮತ್ತು ಕೌಶಲ್ಯ ಅಲಯನ್ಸ್ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯನಗರದ ಹರ್ಡಿಕರ್ ಭವನದಲ್ಲಿ ಭಾನುವಾರ ಸಂಜೆ ನಡೆದ 75 ಬಾರಿ ರಕ್ತದಾನ ಮಾಡಿರುವ ಎಂ.ಸಿ.ಲಂಕೇಶ್ ಮಂಗಲ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ಪ್ರಶಸ್ತಿ ಪಡೆದಿರುವ ಅಧಿಕಾರಿ ಎಸ್.ಎಸ್. ಕೋಮಲ್‌ಕುಮಾರ್ ಅವರಿಗೆ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಸೋಯೇಷನ್‌ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಒಂದು ಅಂತರಾಷ್ಟ್ರೀಯ ಸೇವಾ ಸಂಸ್ಥೆ, 28  ಇದರಡಿ ಮಂಡ್ಯ ಜಿಲ್ಲೆಯಲ್ಲಿ 32 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 34 ಸಾವಿರ ಸದಸ್ಯರನ್ನು ಒಳಗೊಂಡಿದೆ. ತಮ್ಮ ಉದ್ದೇಶ ಸೇವೆ ಮಾಡುವುದು, ಸೇವೆ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವುದಾಗಿದೆ ಎಂದರು.

ಮಂಗಲ ಲಂಕೇಶ್ ಅವರು 75 ಬಾರಿ ರಕ್ತದಾನ ಮಾಡಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ಹಳೇ ರಕ್ತವನ್ನ ಖಾಲಿ ಮಾಡಿ ಹೊಸ ರಕ್ತವನ್ನು ಮೈಗೂಡಿಸಿಕೊಂಡರೆ, ಕಾಯಿಲೆಗಳು ಕಡಿಮೆಯಾಗಿ ಆರೋಗ್ಯವು ಉತ್ತಮವಾಗುತ್ತದೆ ಎಂಬುದು ನನ್ನ ಭಾವನೆ. ರಕ್ತಕ್ಕೆ ಸಮಾನವಾದ ವಸ್ತು ಯಾವುದು ಇಲ್ಲ, ಹಾಗಾಗಿ ರಕ್ತದಾನ ಮಾಡಬೇಕೆಂದು ಸಲಹೆ ನೀಡಿದರು.

ಅದೇ ರೀತಿ ಕೋಮಲ್‌ಕುಮಾ‌ರ್ ಅವರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಯಾಗಿ ವಯೋವೃದ್ದರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.

ಮಿಮ್ಸ್ ಮಂಡ್ಯ ರಕ್ತನಿಧಿ ಕೇಂದ್ರದ ಮೊಹಮ್ಮದ್ ರಫಿ ಅಭಿನಂದಿಸುವರು. ಮುಖ್ಯ ಅತಿಥಿಗಳಾಗಿ ನೆಲದನಿ ಅಲಯನ್ಸ್ ಅಧ್ಯಕ್ಷರಾದ ಅಲೈ ಮಹಾಲಕ್ಷ್ಮಿ ಕೋಮಲ್‌ಕುಮಾ‌ರ್, ಅಲೈ ಕೆ.ಆ‌ರ್. ಶಶಿಧರ್ ಈಚಗೆರೆ, ಅಲೈ ಕೆ.ಎಸ್. ಚಂದ್ರಶೇಖರ್, ಅಲೈ ವಿ.ಎಸ್. ನಾಗರಾಜು, ಅಲೈ ಆರ್. ಮಹೇಶ್ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ