ರಾಜ್ಯದ ಕಲ್ಯಾಣ ಮಂಟಪಗಳ ಮದುವೆ ಕಾರ್ಯಕ್ರಮಗಳಲ್ಲಿ ಮತ್ತು ಅವ್ಯಾಹತವಾಗಿ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಸುತ್ತಿರುವ ಕುರಿತು ಯೋಜನಾ ನಿರ್ದೇಶಕರು,ನಗರಾಭಿವೃದ್ಧಿ ಕೋಶ ಇವರಿಗೆ ಕ್ರಮ ಜರುಗಿಸುವಂತೆ ಕರುನಾಡು ಸೇವಕರು ಸಂಘಟನೆಯ ಮುಖಂಡ ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದ್ದಾರೆ.
ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲಿಗಳು ಪರಿಸರಕ್ಕೆ ಮಾಡುತ್ತಿರುವ ಅನಾಹುತ ಅತ್ಯಂತ ಮಾರಕವಾಗಿದೆ.ಬಳಸಿ ಬೀಸಾಡಿದ ಪ್ಲಾಸ್ಟಿಕ್ ಬಾಟಲಿಗಳು ಭೂಮಿಯಲ್ಲಿ ಕರಗದೆ ನದಿ ಕಾಲುವೆ ಚರಂಡಿ ಸೇರಿ ಅನಾಹುತಕ್ಕೆ ಕಾರಣವಾಗಿದೆ.
ಇವು ಕರಗದೆ ಬಾಟಲಿಗಳ ಮೇಲ್ಮೆಯಷ್ಟೆ ಕರಗಿ ಕುಡಿಯುವ ನೀರು ಅಂತರ್ಜಲಕ್ಕು ಇಳಿದು ಪ್ಲಾಸ್ಟಿಕ್ ಪರಿಣಾಮ ಮನುಷ್ಯನ ರಕ್ತದಲ್ಲು ಪ್ಲಾಸ್ಟಿಕ್ ಕಣಗಳು ಕಾಣಿಸಿಕೊಂಡಿವೆ. ತಯಾರಿಕಾ ಹಂತದಲ್ಲೆ ಇವುಗಳನ್ನು ನಿಯಂತ್ರಿಸುವುದು ಪರಿಣಾಮಕಾರಿ ಕ್ರಮವಾಗಿದೆ.
ಆದಾಗಿಯು ಪೌರಾಡಳಿತ ನಿರ್ದೇಶನಾಲಯ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲಿಗಳ ಅನಾಹುತ ಮನಗಂಡು ಕಲ್ಯಾಣ ಮಂಟಪಗಳ ಮದುವೆ ಇತರೆ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲಿಗೆ ನಿಷೇಧಹೇರಿದೆ.
ಆದರೆ ನಗರ ಸಂಸ್ಥೆಗಳ ನಿರ್ಲಕ್ಷ್ಯದ ಕಾರಣ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಎಗ್ಗಿಲ್ಲದೆ ಸಾಗಿದೆ. ಆದ್ದರಿಂದ ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ಬಾಟಲಿ ಹಾಗೂ ಪ್ಲಾಸ್ಟಿಕ್ ಕವರ್ ಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕೋರಿದ್ದಾರೆ.
ಕಾನೂನು ಉಲ್ಲಂಘಿಸುವ ಕಲ್ಯಾಣಮಂಟಪಗಳ ಮೇಲೆ ಶಿಸ್ತಿನ ಕ್ರಮ ಹಾಗೂ ಈ ಥರದ ಪ್ರಕರಣಗಳನ್ನು ಬೆಳಕಿಗೆ ತರುವವರಿಗೆ ನಗದು ಪ್ರೋತ್ಸಾಹ ಘೋಷಿಸಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು ಯಶಸ್ವಿಯಾಗಿ ತಡೆಯುವಂತೆ ಹಾಗೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳ ಮಾರಾಟದ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾ ನಿರ್ದೇಶಕ ನಾಗರಾಜು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.