Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನಾಳೆ ಕೋಮಲ್ ಕುಮಾರ್ – ಮಂಗಲ ಲಂಕೇಶ್ ಗೆ ಅಭಿನಂದನೆ

ಅಸೋಯೇಷನ್‌ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್, ನೆಲದನಿ ಅಲಯನ್ಸ್ ಮತ್ತು ಕೌಶಲ್ಯ ಅಲಯನ್ಸ್ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ. ಲಂಕೇಶ್ ಮಂಗಲ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಎಸ್.ಎಸ್. ಕೋಮಲ್‌ಕುಮಾರ್ ಅವರಿಗೆ ಅಭಿನಂದನಾ ಸಮಾರಂಭವು ಅ.10ರಂದು ಸಂಜೆ 6 ಗಂಟೆ ಮಂಡ್ಯನಗರದ ಹರ್ಡಿಕರ್ ಭವನದಲ್ಲಿ ನಡೆಯಲಿದೆ.

ಮಂಗಲ ಲಂಕೇಶ್ ರಕ್ತದಾನ ಮಾಡುತ್ತಿರುವ ಚಿತ್ರ

75 ಬಾರಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಲಂಕೇಶ್ ಹಾಗೂ 2024-25ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನಕ್ಕೆ ಭಾಜನರಾಗಿರುವ ಅಧಿಕಾರಿ ಕೋಮಲ್ ಕುಮಾರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು LMP ಸೌತ್ ಮಲ್ಟಿಸಲ್ ಕೌನ್ಸಿಲ್ ಉಪಾಧ್ಯಕ್ಷ ಅಲೈ ಕೆ.ಟಿ. ಹನುಮಂತು ವಹಿಸುವರು.

ಕಾರ್ಯಕ್ರಮನ್ನು ಜಿಲ್ಲಾ ರಾಜ್ಯಪಾಲ ಅಲೈ ಮಾದೇಗೌಡ ಉದ್ಘಾಟನೆ ಮಾಡುವರು. ಮಿಮ್ಸ್ ಮಂಡ್ಯ ರಕ್ತನಿಧಿ ಕೇಂದ್ರದ  ಮೊಹಮ್ಮದ್ ರಫಿ ಅಭಿನಂದಿಸುವರು.

ಮುಖ್ಯ ಅತಿಥಿಗಳಾಗಿ ನೆಲದನಿ ಅಲಯನ್ಸ್ ಅಧ್ಯಕ್ಷರಾದ ಅಲೈ ಮಹಾಲಕ್ಷ್ಮಿ ಕೋಮಲ್‌ಕುಮಾ‌ರ್, ಅಲೈ ಕೆ.ಆ‌ರ್. ಶಶಿಧರ್ ಈಚಗೆರೆ, ಅಲೈ ಕೆ.ಎಸ್. ಚಂದ್ರಶೇಖರ್, ಅಲೈ ವಿ.ಎಸ್. ನಾಗರಾಜು, ಅಲೈ ಆರ್. ಮಹೇಶ್ ಭಾಗವಹಿಸುವರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ