Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೆ. ಆರ್. ಪೇಟೆ : ಜಾತಿ ಗಣತಿ ಸಮೀಕ್ಷೆಯಲ್ಲಿ ಕುರುಬ ಎಂದು ನಮೂದಿಸಲು ಸುರೇಶ್ ಮನವಿ

ರಾಜ್ಯ ಸರ್ಕಾರವು ನಡೆಸುತ್ತಿರುವ ಮಹತ್ವಾಕಾಂಕ್ಷೆಯ ಜಾತಿ ಗಣತಿ ಸಮೀಕ್ಷೆಯಲ್ಲಿ ಹಾಸನ, ಮಂಡ್ಯ, ಹಾಗೂ ಚಾಮರಾಜನಗರ ಸೇರಿದಂತೆ ಮೈಸೂರು ವಿಭಾಗದ ಜಿಲ್ಲೆಗಳ ಹಾಲುಮತ ಕುರುಬ ಸಮಾಜದ ಬಂಧುಗಳು ಜಾತಿ ಹಾಗೂ ಉಪಜಾತಿಯನ್ನು ನೋಂದಣಿ ಮಾಡುವಾಗ ನಮೂನೆಯ ಕಾಲಂ 9-10 ಹಾಗೂ 11ರಲ್ಲಿ ಕಡ್ಡಾಯವಾಗಿ ಕುರುಬ ಎಂದೇ ನಮೂದಿಸಬೇಕು ಎಂದು ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಹೇಳಿದರು.

ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಜನ ಜಾಗೃತಿ ಸಭೆಯನ್ನು ನಡೆಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರವು ನಡೆಸುತ್ತಿರುವ ಜಾತಿಗಣತಿಯ ಸಮೀಕ್ಷೆಯಲ್ಲಿ ಗಣತಿದಾರರು ನಿಮ್ಮ ಮನೆಯ ಬಾಗಿಲಿಗೆ ಬಂದಾಗ ಜಾತಿ ಹಾಗೂ ಉಪ ಜಾತಿಯ ಕಾಲಂಗಳಲ್ಲಿ ಕಡ್ಡಾಯವಾಗಿ ಕುರುಬ ಎಂದಷ್ಟೇ ನಮೂದಿಸುವ ಮೂಲಕ ಕುರುಬ ಸಮಾಜದ ಸಂಖ್ಯೆಯು ನಿಖರವಾಗಿ ಗೊತ್ತಾಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಸುರೇಶ್ ಆಯಾ ಭಾಗಗಳಲ್ಲಿ ಕುರುಬ ಸಮಾಜವನ್ನು ಹಾಲುಮತ ಕುರುಬ ಎಂದು ಕರೆದರೂ ನಾವೆಲ್ಲರೂ ಕುರುಬ ಸಮಾಜಕ್ಕೆ ಸೇರಿರುವವರಾಗಿರುವುದರಿಂದ ಜಾತಿಗಣತಿಯ ಸಮೀಕ್ಷೆಯಲ್ಲಿ ನಮೂನೆಯನ್ನು ಭರ್ತಿ ಮಾಡುವಾಗ ನಂಬರ್ 09, 10 ಹಾಗೂ 11ರಲ್ಲಿ ಕೇವಲ ಕುರುಬ ಎಂದಷ್ಟೇ ನೋಂದಾಯಿಸುವ ಮೂಲಕ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಕುರುಬರ ಶಕ್ತಿಯನ್ನು ಅನಾವರಣ ಮಾಡಬೇಕು ಎಂದು ಸುರೇಶ್ ಕೈಮುಗಿದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ , ಮರಟಿ ಕೊಪ್ಪಲು ಶಶಿಧರ್, ನಿರ್ದೇಶಕರಾದ ಲಕ್ಷ್ಮಿಪುರ ಪ್ರಸನ್ನ, ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ ನಾಗೇಂದ್ರ ಕುಮಾರ್, ಕೃಷ್ಣರಾಜಪೇಟೆ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಕೆ ಪುರುಷೋತ್ತಮ, ಕಾರ್ಯದರ್ಶಿ ಕಾಡುಮೆಣಸ ಚಂದ್ರು, ಕುರುಬ ಸಮಾಜದ ಮುಖಂಡರಾದ ಚಂದ್ರೇಗೌಡ, ಆಲಂಬಾಡಿಕಾವಲು ನಾಗಣ್ಣ, ದಿವಾಕರ್ ಸೇರಿದಂತೆ ಕುರುಬ ಸಮಾಜದ ನೂರಾರು ಮುಖಂಡರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ