Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಗೆ ಕೊಲೆ ಬೆದರಿಕೆ

ಲೋಕಾಯುಕ್ತರಿಗೆ ಮಂಡ್ಯ ಮಿಮ್ಸ್ ನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ನೀಡಿರುವ ದೂರನ್ನು ಹಿಂಪಡೆಯದಿದ್ದರೆ ನಿನ್ನ ಹೆಣ ಬೀಳುವುದು ಗ್ಯಾರಂಟಿ ಎಂದು ಕೊಲೆ ಬೆದರಿಕೆಯನ್ನು ಸೆವೆನ್ ವಿಜಿ, ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಿರಣ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮತ್ತು ಆರ್.ಆರ್. ಮ್ಯಾನ್ ಪವರ್ ಕಂಪನಿಯ ಮಾಲೀಕರು ಸೇರಿದಂತೆ ಜೊತೆಯಲ್ಲಿ 10 ಜನ ರೌಡಿಗಳನ್ನು ಕರೆದುಕೊಂಡು ಬಂದು ಅಮರಾವತಿ ಹೋಟೆಲ್ ಗೆ ಊಟಕ್ಕೆ ಹೋದಾಗ ಬೆದರಿಕೆ ಹಾಕಿದ್ದರೆಂದು ಸಾಮಾಜಿಕ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ದಾಖಲಿಸಿ, ಮಂಡ್ಯದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಎಂ.ಬಿ.ನಾಗಣ್ಣಗೌಡ ಮತ್ತು ಅವರ ಸ್ನೇಹಿತ ಶಿವಲಿಂಗು ರಾತ್ರಿ ನಗರದ ಹೊರವಲಯದಲ್ಲಿರುವ ಹೋಟೆಲ್ ಅಮರಾವತಿಗೆ ತೆರಳಿದಾಗ ಈ ಘಟನೆ ನಡೆದಿದೆ. ನಕಲಿ ದಾಖಲೆಗಳನ್ನು ಸೃಷ್ಠಿಸಿ, ಸರ್ಕಾರದಿಂದ ಲಪಾಟಿಸಿರುವ ಹಣದ ಅವ್ಯವಹಾರದ ಬಗ್ಗೆ ದೂರನ್ನು ವಾಪಸ್ಸು ಪಡೆಯುವಂತೆ ಹಾಗೂ ಕಾರ್ಮಿಕರಿಗೆ ನೇರಪಾವತಿ ಮಾಡದಂತೆ ಕಂಟ್ರಾಕ್ಟರ್ ಮೂಲಕ ಪಾವತಿ ಮಾಡುವಂತೆ ನನಗೆ ಬೆದರಿಕೆ ಹಾಕಿದರೆಂದು ಅವರ ದೂರಿನಲ್ಲಿ ತಿಳಿಸಿದ್ದಾರೆ.

ಕಿರಣ ಎಂಬುವವನು ನಿನನ್ನು ನಾನು ಮೊನ್ನೆ ರಾತ್ರಿಯೇ ಕಾರನ್ನೇ ಫಾಲೋ ಮಾಡಿದ್ದು, ಅವತ್ತೆ ಕೊಲೆ ಮಾಡುತ್ತಿದ್ದೆವು ಎಂದು ಬೆದರಿಕೆ ಹಾಕಿದನು. ಸೆವೆನ್ ವಿಜಿ ಎನ್ನುವವನು ನಾನು ಹಲವು ಮರ್ಡರ್ ಕೇಸುಗಳಲ್ಲಿ ಇದ್ದು, ಇದು ಮತ್ತೊಂದು ಮರ್ಡರ್ ಕೇಸು ಅಷ್ಟೆ. ಹಾಗಾಗಿ ಲೋಕಾಯುಕ್ತರಿಗೆ ನೀಡಿರುವ 2606/2022 ಮತ್ತು 7512/2022 ಕೇಸುಗಳನ್ನು ವಾಪಸ್ಸು ಪಡೆಯುವಂತೆ ಬೆದರಿಸಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನನ್ನು ಅಕ್ರಮವಾಗಿ ಕೊಡಿಹಾಕಿಕೊಂಡು ಆವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕೊಲೆ ಬೆದರಿಕೆ ಹಾಕಿದರು. ಈ ಕೃತ್ಯದ ಹಿಂದೆ ಮಂಡ್ಯ ಮಿಮ್ಸ್ ನಿರ್ದೇಶಕ ಡಾ.ಹರೀಶ್, ಆಡಳಿತಾಧಿಕಾರಿ ವೆಂಕಟಲಕ್ಷ್ಮಿಯವರ ಕುಮ್ಮಕ್ಕಿದೆ, ನನ್ನನ್ನು ಬೆದರಿಸಲು ಅವರು ಎಷ್ಟು ಬೇಕಾದರೂ ಹಣ ಕೊಡುತ್ತಾರೆಂದು ಬೆದರಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕೊನೆಗೆ ರಾತ್ರಿ 11-45ರಲ್ಲಿ ನಿಮ್ಮನ್ನು ಜೀವಂತವಾಗಿ ಬಿಟ್ಟು ಕಳುಹಿಸುತ್ತಿದ್ದು, ನಾಳೆ ಬೆಳಿಗ್ಗೆ ದೂರು ವಾಪಸ್ಸು ಪಡೆಯಬೇಕೆಂದು ಧಮಕಿ ಹಾಕಿರುತ್ತಾರೆ.

ನಾನು ಈ ಘಟನೆಯಿಂದ ಮಾನಸಿಕವಾಗಿ ಜರ್ಜರಿತರಾಗಿದ್ದು ಆರ್ & ಆರ್ ಏಜೆನ್ಸಿ ಮಾಲೀಕರ ವಿರುದ್ದ, ಕಿರಣ, ಸೆವೆನ್ ವಿಜಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕು, ಇಲ್ಲದ್ದಿದ್ದರೆ ರಾಜ್ಯಾದ್ಯಂತ ನಮ್ಮ ಎಲ್ಲಾ ಕಾರ್ಮಿಕರು ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಪ್ರತಿಭಟನೆಯಲ್ಲಿ ತಿಳಿಸಿದ್ದಾರೆ.

ಪ್ಕತಿಭಟನೆಯಲ್ಲಿ   ಕರುನಾಡು ಸೇನೆಯ ಚಂದ್ರು, ಪೌರ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ನಾಗರಾಜು ಸೇರಿದಂತೆ ವಿವಿಧ ಜಿಲ್ಲೆಯ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ