ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಮೇಲೆ ಅಪರಿಚಿತ ಗುಂಪೊಂದು ಚಪ್ಪಲಿಯಿಂದ ಹಲ್ಲೆ ನಡೆಸಿದೆ. ಮಂಗಳವಾರ ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Manuwadi Lawyer Rakesh Kishore — the man who once hurled a shoe at former CJI B.R. Gavai — was thrashed with slippers inside a Delhi court today. The dramatic retaliation unfolded in full public view, sending shockwaves through the legal fraternity. pic.twitter.com/iPXwvj9UR9
— The Dalit Voice (@ambedkariteIND) December 9, 2025
“>
ಆದರೆ ಈ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲ ನೆಟ್ಟಿಗರು ಮಾಜಿ ಸಿಜೆಐ ಮೇಲೆ ಶೂ ಎಸೆದ ಕಾರಣಕ್ಕೆ ಈಗ ಚಪ್ಪಲಿಯಿಂದ ಹಲ್ಲೆ ನಡೆದಿರಬಹುದು ಎಂದು ಹೇಳಿದರೆ, ಇನ್ನು ಕೆಲವರು ಆಟೋ ಚಾಲಕರೊಬ್ಬರಿಗೆ ಬಾಕಿ 70 ರೂಪಾಯಿ ನೀಡದ ಕಾರಣ ವಾಗ್ವಾದ ನಡೆದು ಚಪ್ಪಲಿಯಿಂದ ಥಳಿಸಲಾಗಿದೆ ಎಂದು ಕೆಲ ನೆಟ್ಟಿಗರು ಬರೆದುಕೊಂಡಿದ್ದಾರೆ.




