Thursday, July 25, 2024

ಪ್ರಾಯೋಗಿಕ ಆವೃತ್ತಿ

‘ರೇಣುಕಾಸ್ವಾಮಿ‌ ಕುಟುಂಬಕ್ಕೆ ನ್ಯಾಯ ಸಿಗಲಿ’ ಎಂದ ನಟ ವಿನೋದ್ ಪ್ರಭಾಕರ್

ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 17 ಮಂದಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಕುರಿತು ಮಾತನಾಡಿರುವ ನಟ ದರ್ಶನ್ ಸ್ನೇಹಿತ ವಿನೋದ್ ಪ್ರಭಾಕರ್, ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ..

ಜೈಲಿನಲ್ಲಿ ನಟ ದರ್ಶನ್‌ ಅವರನ್ನು  ಭೇಟಿ ಮಾಡಿ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಮೊದಲನೆಯದಾಗಿ ರೇಣುಕಾಸ್ವಾಮಿ‌ ಕುಟುಂಬಕ್ಕೆ ನ್ಯಾಯ ಸಿಗಲಿ, ಅವರಿಗೆ ಈ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ನಾನು ದರ್ಶನ್ ಅವರನ್ನು ಮೀಟ್ ಮಾಡಿದ್ದು ಕೊನೆಯದಾಗಿ ಒಂದು ಪಾರ್ಟಿಯಲ್ಲಿ. ಅದಾದ ನಂತರ ನ್ಯೂಸ್ ಚಾನಲ್ ನೋಡಿದಾಗಲೇ ಘಟನೆ ಬಗ್ಗೆ ಗೊತ್ತಾಗಿದ್ದು ಎಂದು ಹೇಳಿದ್ದಾರೆ.

ಮುಂದುವರೆದು, ಜೈಲಿನಲ್ಲಿ ಈಗ ಭೇಟಿಯಾದಾಗ ದರ್ಶನ್ ಅವರ ಬಳಿ‌ ನಾನು‌ ಏನು ಮಾತಾಡಲಿಲ್ಲ. ಕೇವಲ ಒಳ ಹೋದ ತಕ್ಷಣ ಅವರನ್ನು ನೋಡಿ‌ ಬಾಸ್ ಎಂದೆ, ಒಂದೇ ಸೆಕೆಂಡ್ ಶೇಕ್ ಹ್ಯಾಂಡ್ ಮಾಡಿ ಬಂದೆ. ಅವರು ಮೌನವಾಗಿದ್ದರು, ನಾನು ಸಹ ಏನು ಮಾತಾಡಿಲ್ಲ. ಟೈಗರ್ ಅಂದಾಗ ಬಾಸ್​ ಅಂದೆ ಬೇರೇನು ಮಾತಾಡಿಲ್ಲ, ನಾನು ವಾಪಸ್​ ಬಂದೆ ಎಂದು ಹೇಳಿದ್ದಾರೆ.

ಎಲ್ಲಿಯೂ ದರ್ಶನ್‌ ಅವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲವೆಂಬ ಕಾಮೆಂಟ್,​ ಸುದ್ದಿಗಳನ್ನು ನೋಡಿದ್ದೇನೆ. ನಾನು ಪೋಸ್ಟ್ ಹಾಕಿ ಸಮಸ್ಯೆ ಬಗೆ ಹರಿಯುತ್ತದೆ ಅಂದರೆ 1 ಲಕ್ಷ ಪೋಸ್ಟ್ ಬೇಕಾದರು ಹಾಕುತ್ತಿದ್ದೆ. ಆದರೆ ಪ್ರಕರಣ ಗಂಭೀರವಾಗಿದೆ. ಪೊಲೀಸರಿಂದ ತನಿಖೆ ನಡಿಯುತ್ತಿದೆ ಎಂದು ಹೇಳಿದ್ದಾರೆ.,

ರೇಣುಕಾಸ್ವಾಮಿ ಕುಟುಂಬ, ದರ್ಶನ್ ಕುಟುಂಬಕ್ಕೆ ಎಷ್ಟು ದುಃಖವಿದೆಯೋ ಅದಕ್ಕಿಂತ ಡಬಲ್ ನಮಗೂ ಬೇಜಾರಿದೆ. ತನಿಖೆ ನಡೆಯುತ್ತಿದ್ದು, ನಾವು ಸಹ ಏನು ಹೆಚ್ಚಾಗಿ ಮಾತನಾಡಲು ಸಾಧ್ಯವಿಲ್ಲ. ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ನನ್ನ ತಂದೆ ಹೇಳುತ್ತಿದ್ದರು. ಎಲ್ಲರಿಗೂ ಸಹ ಒಳ್ಳೆಯದಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!