Friday, November 20, 2026

ಪ್ರಾಯೋಗಿಕ ಆವೃತ್ತಿ

ಯುವಜನತೆಯು ಜ್ಞಾನ ಕೌಶಲ್ಯ ಬೆಳೆಸಿಕೊಳ್ಳಿ – ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ನಿರುದ್ಯೋಗಿ ಸಮಸ್ಯೆಯನ್ನು ಹೋಗಲಾಡಿಸಲು ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಿದ್ದು ಯುವಜನತೆಯ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನುಆಯೋಜಿಸಲಾಗಿದೆ, ಯುವ ಜನತೆಯು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯದ  ಆವರಣದಲ್ಲಿ ಶನಿವಾರ ನಡೆದ  “ಜಿಲ್ಲಾ ಮಟ್ಟದ ಉದ್ಯೋಗ ಮೇಳ-2026”  ಉದ್ಘಾಟಿಸಿ ಮಾತನಾಡಿದ ಅವರು ಉದ್ಯೋಗ ಮೇಳ ಸರ್ಕಾರದ ಒಂದು ಕಾರ್ಯಕ್ರಮವಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ವರ್ಷದಲ್ಲಿ ಒಂದು ಬಾರಿ ಉದ್ಯೋಗ ಮೇಳ ಮಾಡಲು ಸಚಿವಾಲಯ ಹಾಗೂ ಜಿಲ್ಲಾಡಳಿತ ಮಾಡಲು ಆದೇಶ ನೀಡಿದೆ ಎಂದರು.

150 ಕಂಪನಿ ಉದ್ಯೋಗ ಮೇಳದಲ್ಲಿ ಭಾಗಿ

ಶಾಸಕ ಪಿ . ರವಿಕುಮಾರ್ ಗಣಿಗ ಮಾತನಾಡಿ ಸುಮಾರು 150 ಕಂಪನಿ ಉದ್ಯೋಗ ಮೇಳದಲ್ಲಿ ಭಾಗಿಯಾಗಿದೆ. ಮಂಡ್ಯದಲ್ಲಿ ಉದ್ಯೋಗ ಅವಕಾಶ ಕಡಿಮೆ. ನಿರುದ್ಯೋಗವನ್ನು ಹೋಗಲಾಡಿಸಲು ನಮ್ಮ ಸರ್ಕಾರ ಮುಂದಾಗಿದ್ದು ಮಂಡ್ಯದಲ್ಲಿ ಅಮೇರಿಕಾದ ಕಂಪನಿಯೊಂದು ಆರಂಭವಾಗಿ ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾಗಿದೆ ಎಂದರು. ಜಿಲ್ಲೆಯಲ್ಲಿ 6 ತಿಂಗಳಿನಲ್ಲಿ 20 ಸಾವಿರ ಉದ್ಯೋಗ ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಇಂದು ಉದ್ಯೋಗ ಮೇಳದಲ್ಲಿ 150 ಕಂಪನಿಗಳು ಭಾಗವಹಿಸಿದೆ. ಆನ್ಲೈನ್ ಮೂಲಕ 6,000 ಉದ್ಯೋಗ ಆಕಾಂಕ್ಷಿಗಳು ನೊಂದಣಿ ಯಾಗಿರುವುದು ಖುಷಿ ವಿಚಾರ.  ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಜಿಲ್ಲೆಯಲ್ಲಿ ವರ್ಷಕ್ಕೆ ಎರಡು ಬಾರಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮುಂದಿನ ದಿನದಲ್ಲಿ ಆಧುನಿಕ ತಂತ್ರಜ್ಞಾನ (AI) ಮೂಲಕ ಯುವಜನತೆಗೆ ಉದ್ಯೋಗ ಅವಕಾಶಗಳ ಪ್ರಮಾಣ ಕಡಿಮೆಯಾಗಲಿದೆ. ಆದ್ದರಿಂದ ಆತಂಕ ಪಡುವ ಸನ್ನಿವೇಶವಿಲ್ಲ. ತಮ್ಮ ಕೌಶಲ್ಯದ ಮೂಲಕ ಸ್ವಯಂ ಉದ್ಯೋಗ ಪಡೆಯಬಹುದು ಇದರಿಂದ ಆರ್ಥಿಕ ಸಬಲತೆಯ ಜೊತೆಗೆ ಇತರರಿಗೂ ಉದ್ಯೋಗ ನೀಡಬಹುದು ಎಂದು ಯುವಜನತೆಗೆ ಸಲಹೆ ನೀಡಿದರು.

 212 ಅಭ್ಯರ್ಧಿಗಳು ಸ್ಥಳದಲ್ಲಿಯೇ ಆಯ್ಕೆ

3000ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಕೌಂಟರ್ ನಲ್ಲಿ ನೋಂದಾಯಿಸಿದ್ದಾರೆ.
124 ಕಂಪನಿಗಳು ಭಾಗಿಯಾಗಿರುತ್ತಾರೆ

ಸ್ಥಳದಲ್ಲಿಯೇ ಆಯ್ಕೆಯಾದ ಅಭ್ಯರ್ಥಿಗಳು: 212 (120 ಮಹಿಳೆಯರು & 92 ಪುರುಷರು)

ಶಾರ್ಟ್ ಲಿಸ್ಟ್ ಆಗಿರುವ ಅಭ್ಯರ್ಥಿಗಳು: 929 (486 ಮಹಿಳೆಯರು & 443 ಪುರುಷರು)

ಉದ್ಯೋಗ ಪಡೆದ ವಿಶೇಷ ಚೇತನರು: 61

ಶಾರ್ಟ್ ಲಿಸ್ಟ್ ಆಗಿರುವ ವಿಶೇಷ ಚೇತನರು: 18

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವನ್ನು ಎದುರಿಸುವ ಮಟ್ಟಿಗೆ ತಾಂತ್ರಿಕ ವಾಗಿ ಜ್ಞಾನ ಪಡೆದು ಮುಂದುವರೆಯಬೇಕು. ಮತ್ತು ಜಿಲ್ಲೆಯಲ್ಲಿ ಯುವ ಜನತೆ ಗೋಸ್ಕರ ಯುವ ಉತ್ಸವವನ್ನು ಶೀಘ್ರದಲ್ಲಿ ಮಾಡುತ್ತೆವೆ ಎಂದು ತಿಳಿಸಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಎ. ಬಿ. ರಮೇಶ್ ಬಂಡಿ ಸಿದ್ದೇಗೌಡ ರವರು ಮಾತನಾಡಿ ಜಿಲ್ಲೆಯಲ್ಲಿ ಕೈಗಾರಿಕೆ ಪ್ರದೇಶಗಳು ಕಡಿಮೆ ಇರುವುದರಿಂದ ಸಣ್ಣ ಪುಟ್ಟ ವ್ಯತ್ಯಾಸವಿದ್ದರೂ ಸಹ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ನೀಡಲು ವ್ಯವಸ್ಥಾಪಕರು ಅವಕಾಶಮಾಡಿಕೊಡಬೇಕು. ಎಲ್ಲರಿಗೂ ಉದ್ಯೋಗ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮಾತನಾಡಿ ಕೃಷಿ, ಕೈಗಾರಿಕೆ, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನ ಕ್ಕೆ ಕಾಲಕಾಲಕ್ಕೆ ಹೊಂದಾಣಿಕೆಯಾಗುತ್ತಿದೆ ಹಾಗೂ ಬದಲಾವಣೆಯಗುತ್ತಿದೆ. ರಾಜ್ಯ ಸರ್ಕಾರ ಪದವಿದರರಿಗೆ ಹಾಗೂ ಡಿಪ್ಲೋಮೋ ದವರಿಗೆ ಯುವ ನಿಧಿ ಯೋಜನೆಯಲ್ಲಿ ನಿರುದ್ಯೋಗ ಪದವೀಧರರಿಗೆ ಯೋಜನೆಯ ಮೂಲಕ ಇದುವರೆಗೂ ರಾಜ್ಯದಲ್ಲಿ 3,08,672 ವಿದ್ಯಾರ್ಥಿಗಳಿಗೆ 912 ಕೋಟಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ 7,222 ನಿರುದ್ಯೋಗಿ ಪದವಿದರರಿಗೆ ಯೋಜನೆಯ ಮೂಲಕ 21 ವರೆ ಕೋಟಿ ಹಣವನ್ನು ಅವರ ಖಾತೆಗೆ ನೀಡುವ ಕೆಲಸ ಆಗಿದೆ. ಯುವಜನತೆ ತಮ್ಮ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡು ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ. ಸಿಇಓ ಡಾ. ಕೆ.ಆರ್.ನಂದಿನಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಈಗಾಗಲೇ ಆನ್ ಲೈನ್ ಮೂಲಕ ನೋಂದಣಿ ಮಾಡಲಾಗಿದೆ. 150ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸಿದ್ದು. ಎಸ್ ಎಸ್ ಎಲ್ ಸಿ ಯಿಂದ ಸ್ನಾತಕೋತ್ತರ ಪದವೀಧರು 6000 ಅಭ್ಯರ್ಥಿಗಳು ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದಾರೆ.. ಹೊರ ಜಿಲ್ಲೆಯಲ್ಲಿಂದಲೂ ಕೂಡ ಭಾಗಿಯಾಗಿರುವುದು ವಿಶೇಷ. ವಿಶೇಷ ಚೇತನರಿಗೆ ಕೌಶಲ್ಯ ಉದ್ಯೋಗವನ್ನು ನೀಡಲಾಗುವುದು. ಇಷ್ಟೇ ಅಲ್ಲದೇ ಉದ್ಯೋಗ ದೊರೆಯದ ಅಭ್ಯರ್ಥಿ ಗಳಿಗೆ ಸ್ವ ಉದ್ಯೋಗ ಮಾಡುವ ಸಲುವಾಗಿ ಮಾಹಿತಿಯನ್ನು ಸಹ ನೀಡಲಾಗುತ್ತಿದೆ ಎಂದರು.

ಸಂದರ್ಭದಲ್ಲಿ ಗಣ್ಯರು ವಿವಿಧ ಹುದ್ದೆಗೆ ನೇಮಕಾತಿ ಪಡೆದ ವಿಶೇಷ ಚೇತನರಿಗೆ ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.

ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾಧಿಕಾರಿ ಡಾ.ಕುಮಾರ, ಪೊಲೀಸ್ ಅಧೀಕ್ಷಕ ವಿ ಜೆ ಶೋಭಾರಾಣಿ, ಮಂಡ್ಯ ವಿಶ್ವವಿದ್ಯಾಲಯ ಕುಲಪತಿಗಳಾದ ಎಂ.ಪಿ.ಕೃಷ್ಣ ಕುಮಾರ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಸ್ ಸುಂದರ್ ರಾಜ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ