Sunday, November 22, 2026

ಪ್ರಾಯೋಗಿಕ ಆವೃತ್ತಿ

ಜೀವ ಉಳಿಸುವ ರಕ್ತದಾನಿಗಳ ಸೇವೆ ನಿರಂತರವಾಗಿರಲಿ

ಜೀವ ಉಳಿಸುವ ಕಾರ್ಯದಲ್ಲಿ ನಿರತರಾಗಿರುವ ರಕ್ತದಾನಿಗಳ ತ್ಯಾಗ ಶ್ಲಾಘನೀಯ, ರಕ್ತ ನೀಡಿ ಜೀವ ಉಳಿಸುವ ಕಾರ್ಯ ನಿರಂತರವಾಗಿರಲಿ ಎಂದು ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ತಿಳಿಸಿದರು.

ಮಂಡ್ಯ ನಗರದ ಹೊಸಹಳ್ಳಿಯಲ್ಲಿ ಬಿ.ಆರ್.ಆರ್.ಬಾಯ್ಸ್ ಹೊಸಹಳ್ಳಿ, ನೆಲದನಿ ಬಳಗ ಮಂಗಲ, ಮಿಮ್ಸ್ ರಕ್ತನಿಧಿಕೇಂದ್ರ ಆಯೋಜಿಸಿದ್ದ ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್ ಜನ್ಮದಿನ ಪ್ರಯುಕ್ತ ರಕ್ತದಾನ ಕಾರ್ಯಕ್ರಮಕ್ಕೆ ಗಣ್ಯರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿದೆ. ಬಡವರಿಗೆ ಮತ್ತು ಅಗತ್ಯಯುಳ್ಳವರಿಗೆ ತುರ್ತಾಗಿ ರಕ್ತ ಸೌಲಭ್ಯಗಳು ಕಾದ ಸಂದರ್ಭದಲ್ಲಿ ರಕ್ತದಾನ ಶಿಬಿರಗಳಿಂದ ಸಂಗ್ರಹಿಸಿದ ರಕ್ತದಿಂದ ವ್ಯಕ್ತಿಯ ಜೀವನ ನೀಗಿಸಬಹುದು. ರಕ್ತದಾನಿಗಳ ತ್ಯಾಗ ಮರೆಯಲಾಗದು, ಇನ್ನೊಂದು ಜೀವ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದು ದೊಡ್ಡತನ ಎಂದು ಹೇಳಿದರು.

ನೆಲದನಿ ಬಳಗ ಅಧ್ಯಕ್ಷ ಲಂಕೇಶ್‌ ಮಂಗಲ ಮಾತನಾಡಿ, ದೇಶ ಕಂಡಂತಹ ಯುವ ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್ ಅವರ 115ನೇ ಜನ್ಮದಿನ ಆಚರಿಸಲಾಗುತ್ತಿದೆ. ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆಯಲಾಗುತ್ತಿದೆ. ಮಾನವೀಯತೆಯಿಂದ ಯುವಜನತೆ ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಶ್ರೀ ಶಂಭು ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಶ್, ನೆಲದನಿ ಬಳಗದ ಕಾರ್ಯದರ್ಶಿ ಸಂತೆಕಸಲಗೆರೆ ಯೋಗೇಶ್, ಬಿ.ಆರ್.ಆರ್.ಬಾಯ್ಸ್ ಹೊಸಹಳ್ಳಿಯ ಅವಿನಾಶ್, ಸುಮಂತ್, ಆನಂದ್, ಗೌತಮ, ರವಿ,ಹೇಮಂತ್, ಅನಿಲ್, ರಕ್ತನಿಧಿ ಕೇಂದ್ರದ ಮಹಮದ್ ರಫಿ, ಮಹದೇವ್, ಜ್ಞಾನರಾಜ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ