ಲಯನ್ಸ್ ಸಂಸ್ಥೆಗಳ ಸಮಾಜಸೇವಾ ಕಾರ್ಯದ ಬಗ್ಗೆ ಹೆಮ್ಮೆ ಇದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯನಗರದ ಎ ಅಂಡ್ ಎ ಸಭಾಂಗಣದಲ್ಲಿ ಭಾನುವಾರ ಸಂಜೆ, ವಾಕ್ ಮತ್ತು ಶ್ರವಣ ಸಂಸ್ಥೆ ಸಹಯೋಗದಲ್ಲಿ ನಡೆದ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಜಿಲ್ಲೆಯವರಿಗೆ ಸ್ಥಾನ ನೀಡಿದೆ. ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಲಯನ್ಸ್ ನಂತಹ ಸಂಸ್ಥೆಗಳು ಮುಖ್ಯವಾಗುತ್ತವೆ. ಇಂತಹ ಸಂಸ್ಥೆಗಳು ಸಾರ್ವಜನಿಕ ಸೇವೆ ಮಾಡುವುದರಿಂದ ಸರ್ಕಾರಕ್ಕೂ ಪೂರಕವಾಗುತ್ತದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲೂ ಕೂಡ ಲಯನ್ಸ್ ಸಂಸ್ಥೆ ತನ್ನದೇ ಆದ ಕೊಡುಗೆ ನೀಡಿದೆ. ಇಂತಹ ಅನೇಕ ಕಾರ್ಯವನ್ನು ಸಂಸ್ಥೆ ಮಾಡಲಿ ಎಂದು ಹಾರೈಸುವೆ ಎಂದರು.
ಕಾರ್ಯಕ್ರಮದಲ್ಲಿ ಧನಲಕ್ಷ್ಮಿ ಚಲುವರಾಯಸ್ವಾಮಿ, ಜಿಲ್ಲಾ ರಾಜ್ಯಪಾಲ ಡಾ ಎನ್ ಕೃಷ್ಣೆಗೌಡ, ಲಯನ್ಸ್ ಬಿಷ್ಣು ಭಜೂರಿಯ, ಲಯನ್ಸ್ ಎನ್ ಸುಬ್ರಹ್ಮಣ್ಯ, ಲಯನ್ ಕೆ ದೇವೇಗೌಡ, ಲಯನ್ ಜಿ .ಎ.ರಮೇಶ್, ಲಯನ್ ಕೆ ಎಲ್ ರಾಜಶೇಖರ್, ಲಯನ್ಸ್ ಆನಂದ್. ಲಯನ್ಸ್ ಟಿ ನಾರಾಯಣಸ್ವಾಮಿ, ವಿ ಹರ್ಷ, ಹನುಮಂತಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.




