Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಲಾಟರಿ ಮೂಲಕ ಒಲಿದ ಗ್ರಾ.ಪಂ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ

ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷರಾಗಿ ಡಿ.ಕುಬೇರ ಹಾಗೂ ಉಪಾಧ್ಯಕ್ಷರಾಗಿ ಟಿ.ಎನ್ ರುಕ್ಮಿಣಿ ಲಾಟರಿ ಮೂಲಕ ಗೆಲುವು ಸಾಧಿಸಿದ್ದಾರೆ.

ಹಿಂದಿನ ಅಧ್ಯಕ್ಷರಾಗಿದ್ದ ಶಶಿಕಲಾ ಹಾಗೂ ಮಾಜಿ ಉಪಾಧ್ಯಕ್ಷರಾಗಿದ್ದ ಸುನಿಲ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಡಿ. ಕುಬೇರ ಹಾಗೂ ಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದರು, ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಎನ್.ರುಕ್ಮಿಣಿ ಹಾಗೂ ಕೃಷ್ಣವೇಣಿ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಎರಡು ಬಣಗಳಿಂದ ಭಾರಿ ಪೈಪೋಟಿ ಏರ್ಪಟ್ಟು ಎರಡು ಬಣಗಳು ತಲಾ 8 ಸದಸ್ಯರ ಸಮಬಲ ಸಾಧಿಸಿದರು, ಬಳಿಕ ಚುನಾವಣಾಧಿಕಾರಿ ಗುರುಪ್ರಸಾದ್ ಅವರು ಲಾಟರಿ ಮೊರೆ ಹೋದರು. ಲಾಟರಿ ಎತ್ತುವ ಮೂಲಕ ನಡೆದ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಡಿ. ಕುಬೇರ, ಉಪಾಧ್ಯಕ್ಷರಾಗಿ ಟಿ. ಎನ್ ರುಕ್ಮಿಣಿ ಜಯಗಳಿಸಿದರು.

ನೂತನ ಅಧ್ಯಕ್ಷ ಡಿ. ಕುಬೇರ ಮಾತನಾಡಿ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಗೆ ನನ್ನ ಅವಧಿಯಲ್ಲಿ ಯಾವುದೇ ಲೋಪವಾಗದೆ ಸರ್ವ ಸದಸ್ಯರ ಸಹಕಾರದಿಂದ ಉತ್ತಮ ಆಡಳಿತ ನಡೆಸುತ್ತೇವೆ. ಮೊದಲು ಸಾಮಾಜಿಕ ನ್ಯಾಯದಡಿ ಬಡವರಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗುವುದು. ಎಲ್ಲಾ ಗ್ರಾಮಗಳಿಗೂ ಸಮರ್ಪಕವಾಗಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಓ ದಿನೇಶ್,ಗ್ರಾ.ಪಂ.ಸದಸ್ಯರಾದ ಕೆ.ಕೆಂಪರಾಜು, ಶಶಿಕಲಾ,ಮಂಜುಳ, ಜಯರಾಮಯ್ಯ, ಶಿವರಾಮು, ರೈತ ಮುಖಂಡ ನಾಗೇಂದ್ರ, ದೇವಾಂಬ, ಮಂಜೇಗೌಡ, ಗೀತಾ, ಕುಮಾರ್, ಸುನಿಲ್, ಶಿವಕುಮಾರ್,ವಾಸುಬಿಲ್ ಕಲೆಕ್ಟರ್ ಸೋಮಶೇಖರ್, ಪ್ರಕಾಶ್,ಸೇರಿದಂತೆ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ