Friday, November 20, 2026

ಪ್ರಾಯೋಗಿಕ ಆವೃತ್ತಿ

ಟೆಂಡರ್ ಅಕ್ರಮ ಆರೋಪ| ನಾಳೆ ಮಿಮ್ಸ್ ಗೆ ಲೋಕಾಯುಕ್ತ ತನಿಖಾಧಿಕಾರಿಗಳ ತಂಡ

ಮಂಡ್ಯ ಮಿಮ್ಸ್ ಗೆ ಸಿ ಮತ್ತು ಡಿ ದರ್ಜೆ ಹೊರಗುತ್ತಿಗೆ ನೌಕರರನ್ನು ಪೂರೈಸುವ ಸಂಬಂಧ ಟೆಂಡರ್ ಪಡೆದ ಎಜೆನ್ಸಿಯು ನಕಲಿ ದಾಖಲೆಗಳನ್ನು ಬಳಸಿದೆ ಎಂಬ ಅರೋಪಕ್ಕೆ  ಸಂಬಂಧಿಸಿದಂತೆ ಆ.23ರಿಂದ 25ರವರೆಗೆ (ಮೂರು ದಿನಗಳ ಕಾಲ) ಲೋಕಾಯುಕ್ತದ ತನಿಖಾಧಿಕಾರಿಗಳ ತಂಡವು ಮಂಡ್ಯ ಜಿಲ್ಲಾಸ್ಪತ್ರೆ(ಮಿಮ್ಸ್) ಗೆ ಭೇಟಿ ನೀಡಿ ಮೂಲ ದಾಖಲೆಗಳ ಪರಿಶೀಲನೆ ನಡೆಸಲಿದೆ.

2022ರ ಸಾಲಿನಲ್ಲಿ ಮಂಡ್ಯ ಮಿಮ್ಸ್ ನ ಸಿ ಮತ್ತು ಡಿ ದರ್ಜೆಯ ಹುದ್ದೆಗಳ 136 ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಪೂರೈಸಲು ಟೆಂಡರ್ ನಡೆಸಲಾಗಿತ್ತು. ₹2.94 ಕೋಟಿ ಮೌಲ್ಯದ ಈ ಟೆಂಡರ್ ನಲ್ಲಿ ನಕಲಿ ದಾಖಲೆ ಬಳಸಿ, ಆರ್ ಅಂಡ್ ಆರ್ ಎನ್ನುವ ಏಜೆನ್ಸಿ ಗೆ ಟೆಂಡರ್ ನೀಡಲಾಗಿದೆಯೆಂದು ಕರುನಾಡು ಸೇವಕರು ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಲೋಕಾಯುಕ್ತದಲ್ಲಿ ಅಂದಿನ ಮಿಮ್ಸ್ ನಿರ್ದೇಶಕ ಡಾ.ಹರೀಶ್ ಹಾಗೂ ಆಡಳಿತಾಧಿಕಾರಿ ವೆಂಕಟಲಕ್ಷೀ ಹಾಗೂ ಏಜೆನ್ಸಿ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದರು.

ನಂತರದಲ್ಲಿ ಲೋಕಾಯುಕ್ತದಲ್ಲಿನ ದೂರು ಹಿಂಪಡೆಯುವಂತೆ ಆರ್ ಅಂಡ್ ಆರ್ ಏಜೆನ್ಸಿ ರೌಡಿಗಳ ಮೂಲಕ ಬೆದರಿಕೆಯೊಡ್ಡಿದ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ತನಿಖಾಧಿಕಾರಿ ಲೋಕೇಶ್ ನೇತೃತ್ವದಲ್ಲಿ ಟೆಂಡರ್ ಗೆ ಸಂಬಂಧಿಸಿದ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಆರೋಪಿತ ಮಿಮ್ಸ್ ಅಧಿಕಾರಿಗಳು ಹಾಗೂ ದೂರುದಾರರು ಸ್ಥಳದಲ್ಲಿ ಹಾಜರಿದ್ದು, ದೂರಿಗೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆಗಳಿದ್ದರೆ ಒದಗಿಸುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ