Thursday, November 19, 2026

ಪ್ರಾಯೋಗಿಕ ಆವೃತ್ತಿ

ಕರಾಟೆಯು ಸೃಜನಾತ್ಮಕ ಮನೋಭಾವ ವೃದ್ದಿಸುತ್ತದೆ – ಲೋಕೇಶ್‌ ಮೊದಲಿಯಾರ್

ವಿದ್ಯಾರ್ಥಿಗಳಲ್ಲಿ ಕರಾಟೆಯು ಕೌಶಲಜ್ಞಾನ ಮತ್ತು ಸೃಜನಾತ್ಮಕ ಮನೋಭಾವ ವೃದ್ದಿಸುತ್ತದೆ ಎಂದು ಕರಾಟೆ ತರಬೇತುದಾರ ಲೋಕೇಶ್‌ಮೊದಲಿಯಾರ್ ಹೇಳಿದರು.

ಮಂಡ್ಯನಗರದ ಬಾಲಭವನದಲ್ಲಿ ಗೋಜು ರಿಯೋ ಕರಾಟೆ ಡೋ ಟ್ರೈನಿಂಗ್ ಸ್ಕೂಲ್ ಇಂಡಿಯಾ ಹಾಗೂ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಮಂಡ್ಯ ವತಿಯಿಂದ ಆಯೋಜಿಸಿದ್ದ ಕರಾಟೆ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಶಿಕ್ಷಣ ಜ್ಞಾನವನ್ನು ಹೆಚ್ಚಿಸುತ್ತದೆ, ಕರಾಟೆ ಮತ್ತು ಸೃಜನಾತ್ಮಕ ಕಲೆಗಳು ಕೌಶಲಜ್ಞಾನ ವೃದ್ದಿಸಿ, ಭವಿಷ್ಯವನ್ನು ಉಜ್ಞಲಗೊಳಿಸಿಕೊಳ್ಳಲು ಪೂರಕವಾಗಿ ನೆರವಾಗುತ್ತವೆ, ಕಲಿಕೆಗೆ ಏಕಾಗ್ರತೆ, ಆಸಕ್ತಿ, ಶ್ರದ್ಧೆ ಮುಖ್ಯವಾಗಿದೆ, ಸಮಯವೇ ವಿದ್ಯಾರ್ಥಿಗೆ ಎಲ್ಲವನ್ನೂ ಕಲಿಸುತ್ತದೆ ಎಂದು ನುಡಿದರು.

ಮುಕ್ತ ಕರಾಟೆ ಸ್ಪರ್ಧೆಯನ್ನು “ಗೋಜು ರಿಯೋ ಕರಾಟೆ ಡೋ ಟ್ರೆöÊನಿಂಗ್ ಸ್ಕೂಲ್ ಇಂಡಿಯಾ” ಹಾಗೂ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಮಂಡ್ಯ ಇವರ ವತಿಯಿಂದ ಆಯೋಜಿಸಲಾಗಿತ್ತು. ಸ್ಪರ್ಧೆ ಯಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಕರಾಟೆ ವಿದ್ಯಾರ್ಥಿಗಳು ಆಗಮಿಸಿದ್ದರು. 4 ವರ್ಷ ವಯೋಮಾನದಿಂದ ಸುಮಾರು 30 ವರ್ಷದೊಳಗಿನ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ತಮ್ಮ ತೂಕ ಹಾಗೂ ವಯೋಮಾನದ ಆಧಾರದ ಮೇಲೆ ಕಟಾ ಹಾಗೂ ಕುಮುತೆ ವಿಭಾಗಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿ ಕೀರ್ತಿ ಪಡೆದಿದ್ದರು ಎಂದು ತಿಳಿಸಿದರು.

ಜಾಹೀರಾತು

ಸ್ಪರ್ಧೆಯಲ್ಲಿ ತುಮಕೂರು, ಬೆಂಗಳೂರು, ರಾಮನಗರ, ಚನ್ನಪಟ್ಟಣ, ಚಿಕ್ಕಮಂಗಳೂರು, ಕುಶಾಲನಗರ, ಮಂಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಬಳ್ಳಾಪುರ ಇತರೆ ಜಿಲ್ಲೆಯ 650 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದು ಸಾವಿರ ನೂರಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಹಾಗೇ ತುಮಕೂರಿನ 180 ಕರಾಟೆ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಅತಿ ಹೆಚ್ಚು ಪ್ರಶಸ್ತಿ ಪಡೆದು ಮೊದಲನೇ ಟೀಮ್ ಚಾಂಪಿಯನ್ ಶಿಪ್ ಪಡೆಯುವಲ್ಲಿ ಯಶಸ್ವಿಯಾದರು ಹಾಗೇ ದ್ವಿತೀಯ ಸ್ಥಾನ ಅತಿಥೇಯ ತಂಡವಾದ ಮಂಡ್ಯದ ವಿಷ್ಣು ಲಯನ್ ಮಾರ್ಷಲ್ ಆರ್ಟ್ಸ್ ಪಡೆದುಕೊಂಡಿತು ಹಾಗೂ ತೃತೀಯ ಸ್ಥಾನವನ್ನು ಮೈಸೂರು ಜಿಲ್ಲೆಯ ಕರಾಟೆ ಪಟುಗಳು ಪಡೆದು ಉತ್ತಮ ಪ್ರದರ್ಶನ ಪ್ರದರ್ಶಿಸಿದ್ದರು ಎಂದು ಮಾಹಿತಿ ನೀಡಿದರು.

ಕರಾಟೆ ಸ್ಪರ್ಧೆಯನ್ನು ನಿಯಮಾನುಸಾರ ಸುಮಾರು 50 ತೀರ್ಪುಗಾರರ ತಂಡ ನಿರ್ವಹಿಸಿತ್ತು. ತೀರ್ಪುಗಾರರಾಗಿ ವೆಂಕಟೇಶ್, ಶರತ್, ಸೋಮಶೇಖರ್, ದರ್ಶನ್, ಯಶಸ್, ಪುವಿಲ್, ಹಂಸ, ವಿಷ್ಣು, ವರುಣ್ ಇತರರು ಭಾಗವಹಿಸಿದ್ದರು. ಮುಖ್ಯ ತೀರ್ಪುಗಾರರಾಗಿ ಲೋಕೇಶ್ ಮೊದಲಿಯಾರ್‌ರವರು ಇದ್ದರು.

ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳ ಫೈಟಿಂಗ್ ನೋಡುಗರನ್ನು ಆಕರ್ಷಿಸುವಂತಿತ್ತು. ಮಕ್ಕಳ ಹಿತದೃಷ್ಟಿಯಿಂದ ವೈದ್ಯಕೀಯ ಸೌಲಭ್ಯ, ಊಟದ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಸಂಸ್ಥೆಯ ವತಿಯಿಂದ ನೀಡಲಾಗಿತ್ತು. ಸ್ಪರ್ಧೆಯು ಟೀಮ್ ಚಾಂಪಿಯನ್ ಶಿಪ್ ನೀಡುವುದರೊಂದಿಗೆ ಕೊನೆಗೊಂಡಿತು. ಎಲ್ಲಾ ತಂಡಗಳು ಉತ್ಸಾಹದಿಂದ ಈ ಒಂದು ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿಯನ್ನು ಮೆರೆದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕರಾಟೆ ತರಬೇತಿ ನೀಡುವ ಕಿರಿಯ ಕರಾಟೆ ಪಟುಗಳು, ವಿದ್ಯಾರ್ಥಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ