Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಅದಕ್ಷ ಡಿ.ರಮೇಶ್ ಕೆಳಗಿಳಿಸಿ: ಎಂ.ಜೆ.ಚಿಕ್ಕಣ್ಣ

ಕಳೆದ 25 ವರ್ಷಗಳಿಂದ ಜೆಡಿಎಸ್ ಜಿಲ್ಲಾಧ್ಯಕ್ಷನಾಗಿರುವ ಡಿ.ರಮೇಶ್ ಪಕ್ಷ ಸಂಘಟನೆಯಲ್ಲಿ ತೊಡಗದೆ ಮನೆ,ಜಮೀನು ಖರೀದಿ ಮಾಡಿಕೊಂಡು ನಿಷ್ಕ್ರಿಯರಾಗಿದ್ದು,ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಕ್ರಿಯಾಶೀಲರನ್ನು ಆಯ್ಕೆ ಮಾಡುವಂತೆ ನಗರಸಭೆ ಮಾಜಿ ಸದಸ್ಯ ಎಂ.ಜೆ.ಚಿಕ್ಕಣ್ಣ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಅಂತ ಹೇಳಿಕೊಳ್ಳುವ ಡಿ. ರಮೇಶ್ ಒಬ್ಬ ಕಾರ್ಯಕರ್ತನಿಗೆ ಜೀವಮಾನದಲ್ಲಿ ಒಂದು ಕಾಫಿ ಸಹ ಕುಡಿಸಿಲ್ಲ.ಕುಮಾರಸ್ವಾಮಿ ಹೆಸರೇಳಿಕೊಂಡು ಮನೆ, ಜಮೀನು ಖರೀದಿಸಿರುವ ಈತನಿಗೆ ಇನ್ನೂ ಅಧಿಕಾರ ದಾಹ ಹಿಂಗಿಲ್ಲ. ಸುಮಾರು 25 ವರ್ಷಗಳಿಂದ ನಿಮ್ಮ ಮತ್ತು ನಿಮ್ಮ ತಂದೆ ದೇವೇಗೌಡರ ಹೆಸರೇಳಿ ಹಣ ಮಾಡಿಕೊಂಡಿದ್ದಾನೆ. ಆತನಿಗೆ ವೈಯಕ್ತಿಕವಾಗಿ ಗೌರವ ಇಲ್ಲ. ಅವನಿಗೆ ಜನ ಗೌರವ ಕೊಡೋದು ದೇವೇಗೌಡ್ರು ಕುಮಾರಸ್ವಾಮಿ ಹತ್ರ ಚೆನ್ನಾಗಿದ್ದಾನೆ ಅಂತ. ಅಷ್ಟೇ ಆದರೆ ಈ ಪಕ್ಷಕ್ಕೆ ಆತನ ಕೊಡುಗೆ ಏನು? ನಾಲ್ಕು ಜನ ಕಾರ್ಯಕರ್ತರನ್ನು ಸೃಷ್ಟಿ ಮಾಡಲಿಲ್ಲ ಹಾಗೂ ಕಾರ್ಯಕರ್ತರಿಗೆ ತೊಂದರೆ ಆದಾಗ ಪೊಲೀಸ್ ಸ್ಟೇಶನ್, ಆಸ್ಪತ್ರೆ,ತಾಲ್ಲೂಕು ಕಚೇರಿ ಇನ್ನಿತರ ಸರ್ಕಾರಿ ಕಚೇರಿಗೆ ಬಂದು ಕಾರ್ಯಕರ್ತರು ಅಥವಾ ಸಾರ್ವಜನಿಕರಿಗೆ ಕೆಲಸ ಮಾಡಿರುವ ಒಂದು ಉದಾಹರಣೆ ತೋರಿಸಲಿ ಎಂದು ಸವಾಲು ಹಾಕಿದರು.

ಮಂಡ್ಯದಲ್ಲಿ ಕಾರ್ಯಕರ್ತರು ಡಿ. ರಮೇಶ್ ಅವರನ್ನು ನೋಡಿ ಬರ್ತಿಲ್ಲಾ,ಕುಮಾರಣ್ಣ ದೇವೇಗೌಡರ ಪಕ್ಷ ಅಂತ ಬರ್ತಾರೆ.ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬಂದಾಗಲೆಲ್ಲ ಡಿ.ರಮೇಶ್ ಮನೆಗೆ ಹೋಗುವುದು ಎಷ್ಟು ಸರಿ? ಎಷ್ಟೋ ಜಮೀನು ಮಾಡಿದ್ದಾನೆ.ಕೇಳಿದರೆ ನಿಮ್ಮದು ಅಂತ ಹೇಳ್ತಿದ್ದಾನೆ.ಇದು ನಿಷ್ಠಾವಂತ ಕಾರ್ಯಕರ್ತರಲ್ಲಿ‌ ಅನುಮಾನ ಮೂಡಿಸಿದೆ. ರಮೇಶ್ ಅವರ ಮುಖ ಕಂಡ್ರೆ ಆಗಲ್ಲ.ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾನೆ.ನಿಜವಾದ ಕಾರ್ಯಕರ್ತರು ಅವರ ಮನೆಗೆ ಬರುವುದಿಲ್ಲ ನೀವು ಮತ್ತು ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಬಂದಾಗ ಒಬ್ಬೊಬ್ಬ ಕಾರ್ಯಕರ್ತರ ಮನೆಗೆ ಹೋದರೆ ನಿಮ್ಮ ಮತ್ತು ನಿಮ್ಮ ಮಗನ ಹೆಸರನ್ನು ಜಿಲ್ಲೆಯ ಜನರು ಇನ್ನು 50 ವರ್ಷ 60 ವರ್ಷವಾದರೂ ಮರೆಯುವುದಿಲ್ಲ ಎಂದರು.

ಅದಕ್ಷ ರಮೇಶ್

ಲೋಕಸಭಾ ಚುನಾವಣೆ ನಡೆಯುವುದರೊಳಗೆ ಜಿಲ್ಲಾಧ್ಯಕ್ಷ ಸ್ಥಾನದಿಂದ ಡಿ.ರಮೇಶ್ ಅವರನ್ನು ವಿಮುಕ್ತಿಗೊಳಿಸದಿದ್ದರೆ,ಅವರು ಭಾಗವಹಿಸುವ ಕಡೆ ಕಾರ್ಯಕರ್ತರ ಜೊತೆಗೂಡಿ ಧಿಕ್ಕಾರ ಕೂಗುತ್ತೇವೆ. ವೇದಿಕೆ ಹತ್ತಲು ಬಿಡುವುದಿಲ್ಲ ಎಂದು ಕಿಡಿಕಾರಿದರು.

ರಮೇಶ್ ಅವರನ್ನು ಕೆಳಗಿಳಿಸಿ ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಬೇಕು. ಇವರನ್ನು ನಂಬಿದವರು ಈ ದಿನ ಬೀದಿಪಾಲಾಗಿದ್ದಾರೆ. ನಿಮಗೆ ಗೊತ್ತಿರಬಹುದು ನೀವು ಬಂದಾಗಲೆಲ್ಲ ಈತನ ಬಗ್ಗೆ ಗಲಾಟೆ ಮಾಡಕ್ಕೆ ಕಾರ್ಯಕರ್ತರು ಸಿದ್ಧರಾಗ್ತಾರೆ. ಆದರೆ ನಿಮ್ಮ ಮುಖ ನೋಡಿ ಹಾಗೆ ಸುಮ್ಮನಾಗುತ್ತಾರೆ.ನೀವು ಇಲ್ಲದಿದ್ದರೆ ಕಾರ್ಯಕರ್ತರೇ ಇವನನ್ನು ಚನ್ನಪಟ್ಟಣಕ್ಕೆ ಕಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಡಿ.ರಮೇಶ್, ಕೀಲಾರ ರಾಧಾಕೃಷ್ಣ ಎಂಬುವವರಿಂದ ಹಣ ಪಡೆದಿರುವುದು ಸತ್ಯ. ಒಂದು ಕ್ಲಬ್ಬಿಗೆ ಸದಸ್ಯ ನಾಗಿರುವುದು ಸತ್ಯ. ಮಂಡ್ಯದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ಮು ಯಾವುದೇ ಕಾರ್ಯಕ್ರಮಕ್ಕೆ ಕರೆಯಲ್ಲ.ನಗರದಲ್ಲಿ ಪಕ್ಷದ ಕಚೇರಿ ಮಾಡಿಲ್ಲ.ಪತ್ರಿಕಾ ಗೋಷ್ಠಿ ಮಾಡಿದಾಗ ಅದಕ್ಕೆ ಬಡ ಕಾರ್ಯಕರ್ತನ ಕಡೆಯಿಂದಲೇ ದುಡ್ಡು ಕೊಡಿಸುವ ಇಂತಹ ಅಧ್ಯಕ್ಷ ನಮಗೆ ಬೇಡ.ನಮಗೆ ಕ್ರಿಯಾಶೀಲ ಅಧ್ಯಕ್ಷ ಕೊಡಿ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದ ಬಿ.ಆರ್. ರಾಮಚಂದ್ರು ಅವರಿಂದ ಎಷ್ಟು ಹಣ ಪಡೆದಿದ್ದಾರೆಂದು ಕಾರ್ಯಕರ್ತರಿಗೆ ಗೊತ್ತಿದೆ‌.ಕಳೆದ 25 ವರ್ಷಗಳಿಂದ ಅಧ್ಯಕ್ಷರಾಗಿರುವ ಇವರನ್ನು ಕೆಳಗಿಳಿಸಲು ಜಿಲ್ಲೆಯ ಯಾವ ನಾಯಕರೂ ಮುಂದಾಗಿಲ್ಲ ಎಂದರೆ ಅವರಿಗೆ ಯಾವ ಭಯ ಕಾಡುತ್ತಿದೆಯೋ ಗೊತ್ತಿಲ್ಲ. ನಮ್ಮ ಬಗ್ಗೆ ಡಿ.ರಮೇಶ್ ದೇವೇಗೌಡರು ಹಾಗೂ ಕುಮಾರಸ್ವಾಮಿಗೆ ಚಾಡಿ ಹೇಳುತ್ತಾರೆಂಬ ಭಯವಿರಬೇಕು ಎಂದರು.

ಯುವ ಮುಖಂಡ ಗೋಪಾಲಪುರ ಶ್ರೀನಿವಾಸ್ ಮಾತನಾಡಿ, ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು,ಪಕ್ಷ ಸಂಘಟನೆಯಲ್ಲಿ ತೊಡಗದ ನಿಷ್ಕ್ರಿಯ ಅಧ್ಯಕ್ಷ ಡಿ.ರಮೇಶ್ ಅವರನ್ನು ಕೆಳಗಿಳಿಸಿ ಕ್ರಿಯಾಶೀಲ ವ್ಯಕ್ತಿಯನ್ನು ಅಧ್ಯಕ್ಷರಾಗಿ ಆರಿಸುವಂತೆ ಆಗ್ರಹಿಸಿದ್ದೇನೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು.ಆದರೆ ಅವರ ರಾಜೀನಾಮೆ ಕೇಳದ ಜೆಡಿಎಸ್ ವರಿಷ್ಠರು ಸಮ್ಮನಿರುವುದು ನಮ್ಮಂತಹ ಲಕ್ಷಾಂತರ ಕಾರ್ಯಕರ್ತರಿಗೆ ನೋವು ತಂದಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!