Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಾ.9ಕ್ಕೆ ‘ನುಡಿ ಕರ್ನಾಟಕ.ಕಾಂ’ ಕಚೇರಿ ಉದ್ಘಾಟನೆ

ಮಂಡ್ಯ ಜಿಲ್ಲೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿಕೊಂಡು ಕಾರ್ಯಾರಂಭ ಮಾಡಿರುವ ನುಡಿ ಕರ್ನಾಟಕ.ಕಾಂ (ಹಳ್ಳಿಯಿಂದ ದಿಲ್ಲಿಯವರೆಗೆ) ವೆಬ್ಸೈಟ್ ಅತ್ಯಲ್ಪ ಅವಧಿಯಲ್ಲಿಯೇ 7 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಓದುಗರ ಗಮನ ಸೆಳೆದಿರುವುದು ಬಹಳ ಸಂತೋಷದ ಸಂಗತಿ. ಸುದ್ದಿಯಲ್ಲಿ ವಿಭಿನ್ನತೆ, ವೈವಿಧ್ಯತೆಯನ್ನು ನೀಡುವ ನುಡಿ ಕರ್ನಾಟಕ.ಕಾಮ್ ಜನರ ಮಾಧ್ಯಮವಾಗಿದೆ. ಕರ್ನಾಟಕ.ಕಾಂ ಮಾಧ್ಯಮ ಮತ್ತಷ್ಟು ದೊಡ್ಡ ಮಟ್ಟದಲ್ಲಿ ವಿಸ್ತಾರಗೊಳ್ಳಲು ಸಹೃದಯ ಓದುಗರಾದ ತಾವೆಲ್ಲರೂ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬುದು ನಮ್ಮ ಮನವಿ.

ಮಂಡ್ಯ ಜಿಲ್ಲೆಯನ್ನು ಪ್ರಧಾನವಾಗಿರಿಸಿಕೊಂಡು ಕಾರ್ಯಾರಂಭ ಮಾಡಿರುವ ನುಡಿ ಕರ್ನಾಟಕ.ಕಾಂ ವೆಬ್ ಸೈಟ್ ನ ನೂತನ ಕಚೇರಿಯ ಉದ್ಘಾಟನೆ ಇದೇ ಮಾ.9 ರಂದು ಹಲವು ಗಣ್ಯರ ಹಾಗೂ ಓದುಗರ ಸಮ್ಮುಖದಲ್ಲಿ ನಡೆಯಲಿದೆ. ಈ ಉದ್ಘಾಟನಾ ಸಮಾರಂಭಕ್ಕೆ ಸಹೃದಯ ಓದುಗರಾದ ತಾವೆಲ್ಲರೂ ಆಗಮಿಸಿ, ಹರಸಿ, ಹಾರೈಸಬೇಕೆಂದು ವಿನಂತಿಸುತ್ತೇವೆ.

ಮಂಡ್ಯ ನೆಲೆದ ಹೊಸ ಮಾಧ್ಯಮ ‘ನುಡಿ ಕರ್ನಾಟಕ.ಕಾಂ’ ನ ಕಚೇರಿ ಉದ್ಘಾಟನಾ ಕಾರ್ಯಕ್ರಮವು ಮಂಡ್ಯ ನಗರದ ಅಶೋಕನಗರದ 4ನೇ ತಿರುವಿನ ಪೌರವಾಣಿ ಪ್ರಸನ್ನ ಅವರ ಕಟ್ಟಡದಲ್ಲಿ ಮಾ.9ರಂದು ಬೆಳಿಗ್ಗೆ 10.30 ಗಂಟೆಗೆ ನೆರವೇರಲಿದೆ.

ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಕಚೇರಿ ಉದ್ಘಾಟನೆ ಮಾಡಲಿದ್ದು, ಶಾಸಕ ಸಿ.ಎಸ್.ಪುಟ್ಟರಾಜು ವೆಬ್ಸೈಟ್ ಗೆ ಚಾಲನೆ ನೀಡಲಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸ್ಟುಡಿಯೋಗೆ ಚಾಲನೆ ನೀಡುವರು. ಶಾಸಕ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಈ ದಿನ.ಕಾಂ ನ ಮುಖ್ಯಸ್ಥ ಡಾ.ಹೆಚ್.ವಿ.ವಾಸು ಮುಖ್ಯ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮದ್ ಜಪ್ರುಲ್ಲಾಖಾನ್, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸಿ.ಪಿ.ಉಮೇಶ್, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಪಿ.ರವಿಕುಮಾರ್ ಗಣಿಗ ಹಾಗೂ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಭಾಗವಹಿಸಲಿದ್ದಾರೆ.

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಮ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ರೈತ ನಾಯಕ ಮಧುಚಂದನ್, ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಮದ್ದೂರಿನ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಶಿವನಂಜಯ್ಯ, ಮುಖಂಡರಾದ ಸಿ.ತ್ಯಾಗರಾಜು, ಎಸ್.ಸಚ್ಚಿದಾನಂದ, ಡಾ.ಹೆಚ್. ಕೃಷ್ಣ, ರವಿ ಬೋಜೇಗೌಡ, ಅಮರಾವತಿ ಚಂದ್ರಶೇಖರ್, ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಸಿದ್ದಾರೂಢ ಸತೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಗ್ರಾ.ಪಂ.ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ, ಪ್ರಗತಿಪರ ವಕೀಲ ಆರ್.ಜಗನ್ನಾಥ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮಹಿಳಾ ಮುನ್ನಡೆಯ ಪೂರ್ಣೆಮ, ನೆಲದನಿ ಬಳಗದ ಲಂಕೇಶ್, ಕನ್ನಡ ಸೇನೆಯ ಅಧ್ಯಕ್ಷ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!