ಸರ್ಕಾರಿ ಆಸ್ಪತ್ರೆಗಳಲ್ಲಿ ರೊಗಿಗಳಿಗೆ ಸೇವೆಗಳು ಗರಿಷ್ಠ ಪ್ರಮಾಣದಲ್ಲಿ ಸಿಗುವಂತೆ ಶ್ರಮಿಸುತ್ತಾ ರೋಗಿಗಳ ನೆರವಿಗೆ ನಿಲ್ಲಲು ” ಮದ್ದಿನ ಮನೆ ನೆರವಿಗರ ಕೂಟ ” ಹೆಸರಿನ ಸೇವಾ ತಂಡ ಮದ್ದೂರಿನಲ್ಲಿ ಅಸ್ಥಿತ್ವಕ್ಕೆ ಬಂದಿದೆ.
ಈ ತಂಡದಲ್ಲಿ ವಿವಿಧ ಸ್ಥರದಲ್ಲಿ ಕಾರ್ಯನಿರ್ವಹಿಸುವ ಜನರು ತಮ್ಮ ಬಿಡುವಿನ ಸಮಯದಲ್ಲಿ ರೋಗಿಗಳಿಗೆ ನೆರವು ಬೇಕಿದ್ದಲ್ಲಿ ತಾವಿರುವ ಕಡೆಯಿಂದಲೆ ನೆರವಾಗುವ ಮತ್ತು ಅಗತ್ಯ ಬಿದ್ದಲ್ಲಿ ಸ್ಥಳಕ್ಕೆ ಆಗಮಿಸಿ ರೋಗಿಯ ನೆರವಿಗೆ ನಿಂತು ಸರ್ಕಾರಿ ಆಸ್ಪತ್ರೆಯ ಸೇವೆಗಳು ಗರಿಷ್ಢ ಪ್ರಮಾಣದಲ್ಲಿ ರೋಗಿಗೆ ಸಿಗಲು ಅನುವಾಗುವಂತೆ ವೈದ್ಯರ ಜೊತೆ ಸಂವಹನ ನಡೆಸುವ ಜೊತೆಗೆ ರೋಗಿಯ ಸೇವೆಗೂ ಶ್ರಮಿಸುವ ಆಶಯ ಹೊಂದಿದೆ.
ಈ ತಂಡ ಸೇವಾ ಪರತೆಯನ್ನು ಅದ್ಯತೆಯಾಗಿಸಿಕೊಂಡು ತಮ್ಮ ಬಿಡುವಿನ ಸಮಯದಲ್ಲಿ ಅಗತ್ಯ ಇರುವ ರೋಗಿಗಳಿಗೆ ನೆರವಾಗುವ ಉದ್ದೇಶ ಹೊಂದಿದ್ದು ಇದಕ್ಕಾಗಿ ತಾಲ್ಲೂಕು ಹಾಗು ಜಿಲ್ಲಾ ಹಂತದ ವೈದ್ಯಾಧಿಕಾರಿಗಳ ಜೊತೆ ಸಂಪರ್ಕ-ಸಂವಹನ ನಡೆಸಿ ತಮ್ಮ ಕಾರ್ಯಚಟುವಟಿಕೆಯನ್ನು ಜನಸ್ನೇಹಿಯಾಗಿಸಲಿದೆ.
ಆಸ್ಪತ್ರೆಯ ಸಹಾಯಕನಿಂದ ರಾಜ್ಯಮಟ್ಟದ ಅಧಿಕಾರಿವರೆಗೆ ಸೌಹರ್ದಯುತವಾಗಿ ವ್ಯವಹರಿಸಿ ಬಡಜನರ ರೋಗಿಗಳ ನೆರವಿಗೆ ನಿಲ್ಲುವ ಸಂಕಲ್ಪ ಮದ್ದಿನಮನೆ ನೆರವಿಗರ ಕೂಟದ್ದಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಗಳು ಗರಿಷ್ಢ ಪ್ರಮಾಣದಲ್ಲಿ ರೋಗಿಗಳಿಗೆ ಸಿಗಬೇಕು ಮತ್ತು ರೋಗಿ ಹಾಗು ವೈದ್ಯರು ಮತ್ತು ಸಿಬ್ಬಂದಿಗಳ ನಡುವೆ ಉತ್ತಮ ಭಾಂದವ್ಯ ರೂಪುಗೊಳ್ಳಬೇಕು ಎಂದು ಈ ಸೇವಾತಂಡ ರಚನೆಯಾಗಿದ್ದು, ಈ ಸಂಬಂಧ ಮೊದಲ ಸಭೆ ನಡೆಸಿ ಸೇವಾತಂಡದ ಕಾರ್ಯಸೂಚಿ ಸಿದ್ದಪಡಿಸಿಕ್ಕೊಂಡಿದ್ದು ಅದರಂತೆ ಕಾರ್ಯ ನಿರ್ವಹಿಸಲು ನಿರ್ಧರಿಸಿದೆ. ಈ ತಂಡದಲ್ಲಿ ಇಲ್ಲಿ ತನಕ ಎಂಬತ್ತು ಜನರು ಸ್ವ ಪ್ರೇರಣೆಯಿಂದ ಸೇರ್ಪಡೆಯಾಗಿದ್ದಾರೆ.
- ಮದ್ದಿನಮನೆ ನೆರವಿಗರ ಕೂಟ ಸದಸ್ಯರು ನಿರ್ವಹಿಸಬಹುದಾದ ಕ್ರಮಗಳು:
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು.
ಸ್ಥಳೀಯ ವೈದ್ಯರ ಜೊತೆ ಸಂಪರ್ಕ-ಸಂವಹನ ನಡೆಸುವುದು.
ರೋಗಿಗಳು ತಮ್ಮ ಹಂತದಲ್ಲಿ ಬಗೆಹರಿಸಿಕ್ಕೊಳ್ಳಲಾಗದ ಸಮಸ್ಯೆಗಳಿಗೆ ಸೇವಾ ತಂಡ
ನೆರವು ಸಹಕಾರ ನೀಡಲು ಮುಂದಾಗುವುದು.
ಸೌಕರ್ಯಗಳ ಕೊರತೆ, ಸೇವಾ ಕೊರತೆ, ಸಿಬ್ಬಂದಿ ಅಲಭ್ಯತೆ, ವೈದ್ಯರ ಅಲಭ್ಯತೆ ವೇಳೆ
ಗರಿಷ್ಠ ಸೇವೆಗಳು ರೋಗಿಗೆ ದೊರಕಿಸುವಲ್ಲಿ ಪ್ರಯತ್ನಿಸುವುದು.
ಸೌಕರ್ಯಗಳ ಲಭ್ಯತೆಯ ಅರಿವು, ಸಿಬ್ಬಂದಿ ವೈದ್ಯರ ಲಭ್ಯತೆ, ಅಪ್ ಡೇಟ್ ನ್ನು
ಸೇವಾತಂಡಕ್ಕೆ ಲಭ್ಯವಾಗಿಸಿಕ್ಕೊಂಡು ನಿಖರ ಮಾಹಿತಿ ಒದಗಿಸುವುದು. - ಮದ್ದಿನಮನೆ ನೆರವಿಗರ ಕೂಟ ಸದಸ್ಯರು ಈ ಕೆಳಕಂಡವುಗಳಲ್ಲಿ ಕಾರ್ಯನಿರ್ವಹಿಸಬಹುದಾದ ಅವಕಾಶಗಳು:
ದೂರು ಮತ್ತು ಸಲಹಾ ಪೆಟ್ಟಿಗೆ ಇಟ್ಟು ನಿಯಮಿತವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ನೊಡಿಕೊಳ್ಳುವುದು.
ಕರ್ತವ್ಯ ನಿರತ ರಾತ್ರಿ-ಹಗಲು ಪಾಳಿಯ ವೈದ್ಯರು ಮತ್ತು ಸಿಬ್ಬಂದಿ ವಿವರ ಎದ್ದು ಕಾಣುವ ಸ್ಥಳದಲ್ಲಿ ಪ್ರಕಟವಾಗಬೇಕು.
ಅವರ ಪೊನ್ ನಂ ಪ್ರಕಟಿಸುವಂತೆ ನೋಡಿಕೊಳ್ಳಬೇಕು.
ಔಷಧಿ-ಮಾತ್ರೆಗಳ ಲಭ್ಯತೆ ವಿವರಗಳನ್ನು ಪ್ರಕಟಿಸಿರುವುದನ್ನು ಆಗಾಗ್ಗೆ ನೋಡಿಕೊಳ್ಳಬೇಕು, ಇದರ ಬಗೆಗೆ ರೋಗಿಗಳಿಗೆ ಮಾಹಿತಿ ನೀಡಬೇಕು.
ಸೇವಾ ವಿವರಗಳನ್ನು ಮತ್ತು ಶುಲ್ಕದ ವಿವರಗಳನ್ನು ಪ್ರಕಟಿಸಿರುವುದರ ಬಗೆಗೆ ಗಮನಹರಿಸಬೇಕು.
ಯಾವುದೇ ಸೇವೆಯ ಅಲಭ್ಯತೆಯ ವಿವರಗಳನ್ನು ಪ್ರಕಟಿಸಬೇಕು. - ಮದ್ದಿನಮನೆ ನೆರವಿಗರ ಕೂಟದ ಸಭೆಗಳು:
ಕುಂದು ಕೊರತೆ ಸಭೆ ನಿಯಮಿತವಾಗಿ ನಡೆಯಬೇಕು
ಆರೋಗ್ಯ ರಕ್ಷಾ ಸಮಿತಿ ಸಭೆ ನಿಯಮಿತಗೊಳ್ಳಬೇಕು - ಮದ್ದಿನಮನೆ ನೆರವಿಗರ ಕೂಟದಿಂದ ನಡೆಯಬಾರದ ಚಟುವಟಿಕೆಗಳು :
ಸೇವಾ ತಂಡದವರು ನೇರ ಸಂಘರ್ಷಕ್ಕೆ ಇಳಿಯಬಾರದು.
ರೋಗಿಗಳು ಮತ್ತವರ ಕಡೆಯವರಿಗೆ ಸಂಘರ್ಷಕ್ಕೆ ಪ್ರೇರೆಪಿಸಬಾರದು.
ಸೇವಾತಂಡದ ಕಾರ್ಯಕರ್ತರು ಜನ ಸಾಮಾನ್ಯರಿಗಿಂತ ಭಿನ್ನವಲ್ಲ ಎಂದರಿತು ಸೇವೆ ದೊರಕಿಸುವಲ್ಲಿ ಪಕ್ಷಪಾತ ಮಾಡಬಾರದು.
ಮೂಲಭೂತಸೌಕರ್ಯಗಳ ಬಗೆಗೆ ಮತ್ತು ನೀರು ವಿದ್ಯುತ್ ಶೌಚಾಲಯದ ವ್ಯವಸ್ಥಿತಯ ಬಗೆಗೆ ಆಗಾಗ್ಗೆ ಗಮನ ಹರಿಸುವುದು.
ಈ ತಂಡ ಹೀಗಾಗಲೆ ವಾಟ್ಸಪ್ ಗ್ರೂಪ್ ರಚಿಸಿದ್ದು ಸೇವಾಸಕ್ತರು ಈ ಗ್ರೂಪಿನ ಲಿಂಕ್ ಬಳಸಿ ಸೇವಾತಂಡ ಸೇರಬಹುದಾಗಿದೆ.
ಮದ್ದೂರು ಸರಕಾರಿ ಆಸ್ಪತ್ರೆಯ ಸ್ವಯಂ ಸೇವಾ ತಂಡದ WhatsApp ನ ಗ್ರೂಪ್ ಸೇರಲು ಈ ಕೊಂಡಿಯನ್ನು ಅನುಸರಿಸಿ.
ಮದ್ದಿನಮನೆ ನೆರವಿಗರ ಕೂಟ : https://chat.whatsapp.com/Gn3PupirB4g5RZVJDDzHHF
ಸಭೆಯಲ್ಲಿ ನ.ಲಿ.ಕೃಷ್ಣ, ಕೆ. ರವಿಕುಮಾರ್ ಕ್ಯಾತಘಟ್ಟ ಎಮ್. ಇ.ಕೃಷ್ಣ, ಮಾದರಹಳ್ಳಿ ರವಿ, ಹುಲಿಗೆರೆಪುರ ಸಂಪತ್ ಮದ್ದೂರು ರಮೇಶ್, ಹಾಗಲಹಳ್ಳಿ ಚನ್ನಸಂದ್ರ ಲಕ್ಷಣ್ ಶಿವಕುಮಾರ್, ಶ್ರೀಕಾಶ್ರೀನಿವಾಸ್ ,ಅರ್ಜುನ್ ಚಾಮನಹಳ್ಳಿ ಮ.ನ.ಪ್ರಸನ್ನಕುಮಾರ್, ಜಗದೀಶ್ ಮದ್ದೂರು ಹಾಜರಿದ್ದರು.




