Thursday, November 19, 2026

ಪ್ರಾಯೋಗಿಕ ಆವೃತ್ತಿ

ಯುವಜನರಲ್ಲಿ ಸ್ಪೂರ್ತಿ ತುಂಬಲು ಗ್ರಾಮೀಣ ಕ್ರೀಡೆ ಸಹಕಾರಿ : ನ.ಲಿ.ಕೃಷ್ಣ

ಯುವಜನರಲ್ಲಿ ಕ್ರೀಡೆ ಕಡೆಗಿನ ಒಲವು, ಕೃಷಿ ಪರ ನಿಲುವು ಹಾಗೂ ದೈಹಿಕ ದೃಢತೆಗೆ ಗ್ರಾಮೀಣ ಕ್ರೀಡೆ ಸಹಕಾರಿಯಾಗಲಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನ.ಲಿ.ಕೃಷ್ಣ ಅಭಿಪ್ರಾಯಪಟ್ಟರು.

ಮದ್ದೂರು ಪಟ್ಟಣದ ಮಳವಳ್ಳಿ ಮುಖ್ಯರಸ್ತೆ ಸಮೀಪದ ಕೆಸರುಗದ್ದೆಯಲ್ಲಿ ಗೊರವನಹಳ್ಳಿ ವಿನಾಯಕ ಬಳಗ ಏರ್ಪಡಿಸಿದ್ದ ಕೆಸರುಗದ್ದೆ ಓಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಆಧುನಿಕತೆ ಸೊಂಕು ಎಲ್ಲೆಡೆ ಆವರಿಸಿದ್ದು ಗ್ರಾಮೀಣ ಆಟೋಟಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಗೊರವನಹಳ್ಳಿಯ ವಿನಾಯಕ ಬಳಗದವರು ಕೆಸರುಗದ್ದೆ ಓಟದ ಸ್ಪರ್ಧೆ ಏರ್ಪಡಿಸುವ ಮೂಲಕ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹಿಸುವ ಜೊತೆಗೆ ಯುವಜನರು ಕ್ರೀಡೆ ಹಾಗು ಕೃಷಿ ಕಡೆಗೆ ಗಮನಸೆಳೆಯುವ ಕಾರ್ಯಕ್ಕೆ‌ ಮುಂದಾಗಿರುವುದು ಮಾದರಿ ಹಾಗೂ ಅನುಕರಣೀಯ ಎಂದರು.

ಎರಡು ಹಂತದ ಸ್ಪರ್ಧೆಯಲ್ಲಿ ವಿಜೇತರು
ವಿಕಾಸ್ ಅನೆದೊಡ್ಡಿ, ಟೊನಿ ಗೊರವನಹಳ್ಳಿ (ಪ್ರಥಮ ಬಹುಮಾನ)

ವಿಷ್ಣು ವಳಗೆರೆಹಳ್ಳಿ, ಶಿವು ಗೊರವನಹಳ್ಳಿ (ದ್ವಿತೀಯ ಬಹುಮಾನ)

ಕ್ರೀಡಾಕೂಟ ಗೌರಿ ಗಣೇಶ ಹಬ್ಬಕ್ಕೆ ಮೆರಗು ತರುವ ಜೊತೆಗೆ ಹೆದ್ದಾರಿಯಲ್ಲಿ ಸಂಚರಿಸುವ ಸಹಸ್ರಾರು ಪ್ರಯಾಣಿಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ, ಇದು ಜನರ ನಾಡಿಮಿಡಿತದ ಸಂಕೇತವಾಗಿದೆ ಎಂದರು.

ಸ್ಪರ್ಧೆಯಲ್ಲಿ ವಿಜೇತರಾದವರು ಹಾಗೂ ಸ್ಪರ್ಧೆ ಇಳಿದವರೆಲ್ಲರ ಕ್ರೀಡಾಸ್ಪೂರ್ತಿ ಇತರರೆಲ್ಲರಿಗೂ ಪ್ರೇರಣೆ ಎಂದು ಪ್ರೋತ್ಸಾಹ ನುಡಿಗಳನ್ನಾಡಿದರು.

ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೊರವನಹಳ್ಳಿ ರಾಘವ ಮಾತನಾಡಿ ಜೀವನ ಯಾಂತ್ರಿಕ ಆಗುತ್ತಿರುವ ಹೊತ್ತಿನಲ್ಲಿ ಗ್ರಾಮೀಣಾ ಕ್ರೀಡೆ ಜೀವಪರತೆಯನ್ನು ಬಿತ್ತುವಲ್ಲಿ ಸಹಕಾರಿಯಾಗಲಿದೆ. ಕೆಸರು ಗದ್ದೆಯ ಓಟ ಜನರ ಜೀವನದ ಏಳು ಬೀಳಿನ ಸಂಕೇತವನ್ನು ಮತ್ತು ದೃಢತೆ ಹಾಗೂ ಗುರಿಮುಟ್ಟುವಲ್ಲಿನ ಬದ್ದತೆಯನ್ನು ಧ್ವನಿಸಲಿದೆ ಎಂದರು.

ತೀರ್ಪುಗಾರರಾಗಿ ಮಹೇಶ್ ಅವಿನಾಶ್ ಸುನೀಲ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಕ್ಷಿತ್, ಗಿರೀಶ್, ದರ್ಶನ್, ರಾಕೇಶ್, ಮಧು, ರಾಮು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ