Sunday, November 22, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಹಾಡಹಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಕೊಲೆ

ಹಣಕಾಸು ವಿಚಾರದ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆಗ್ಯೆದಿರುವ ಘಟನೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮೀಪದ ಲಕ್ಷ್ಮೇಗೌಡನದೊಡ್ಡಿಯಲ್ಲಿ ನಡೆದಿದೆ.

ಹಣಕಾಸು ವಿಚಾರವಾಗಿ ಮೂವರ ಗುಂಪು ಗ್ರಾಮದ ಎಲ್.ಕೃಷ್ಣೇಗೌಡ (47) ಎಂಬಾತನನ್ನು ಕೊಲೆಗೈದು ಪರಾರಿಯಾಗಿದೆ.

ಮದನಹಟ್ಟಿ ದೇವಾಲಯದ ಬಳಿ ಕೃಷ್ಣೇಗೌಡರ ಮೇಲೆ ಮಾರಕಾಸ್ರದಿಂದ ದಾಳಿ ಮಾಡಿ ದುಷ್ಕೃತ್ಯ ಎಸಗಿದ್ದು ಬೆಳ್ಳಂಬೆಳಗ್ಗೆ ಹರಿದ ನೆತ್ತರಿಗೆ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಮಂಗಳವಾರ ಮುಂಜಾನೆ ಎಂದಿನಂತೆ ಡೈರಿಗೆ ತೆರಳಿ ಹಾಲು ಹಾಕಿ ಮನೆಗೆ ಬರುತ್ತಿದ್ದ ಕೃಷ್ಣೇಗೌಡ ತೋಟದ ಬಳಿ ಎಮ್ಮೆ ಕರು ಕಟ್ಟುತ್ತಿದ್ದಾಗ ಪ್ಲಾಟಿನಂ ಬೈಕಿನಲ್ಲಿ ಬಂದ ಮೂವರು ಏಕಾಏಕಿ ಮುಗಿಬಿದ್ದು ಹೊಟ್ಟೆಗೆ ಇರಿದಿದ್ದಾರೆ, ರಕ್ತಸ್ರಾವದಿಂದ ಕೆಳಕ್ಕೆ ಬಿದ್ದ ಕೃಷ್ಣೇಗೌಡನ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಹಣಕಾಸು ವಿಚಾರವಾಗಿ ದುಷ್ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಕೆ ಎಂ ದೊಡ್ಡಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶ್ವಾನದಳ  ಮತ್ತು ಬೆರಳಚ್ಚು ತಜ್ಞರ ಜೊತೆ ಪ್ರಾಥಮಿಕ ತನಿಖೆ ನಡೆಸಿ ಮೃತ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಹತ್ಯೆಯಾದ  ಕೃಷ್ಣೆಗೌಡರಿಗೆ ಇಬ್ಬರು ಮಕ್ಕಳು, ಪತ್ನಿ ಹಾಗೂ ತಾಯಿ ಇದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ