Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಬಂದ್ ಗೆ ಮದ್ದೂರು ವರ್ತಕರ ಸಂಘದ ಬೆಂಬಲ

ವರದಿ: ನ.ಲಿ.ಕೃಷ್ಣ

ಕಾವೇರಿ ನೀರು ನಿರ್ವಹಣಾ ಪ್ರಾದಿಕಾರ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಬೇಕೆಂಬ ನಿರ್ದೆಶನದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೊರ್ಟ್ ನಿರಾಕರಿಸಿ ಕಾವೇರಿ ಪ್ರಾಧಿಕಾರ ನೀಡಿದ್ದ ಆದೇಶ ಊರ್ಜಿತ ಗೊಳಿಸಿದ ಕ್ರಮ ಕರ್ನಾಟಕದ ಪಾಲಿಗೆ ಮರಣಶಾಸನವಾಗಿದ್ದು, ಇದನ್ನೂ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೀಡಿರುವ ಸೆ.23ರ ಮಂಡ್ಯ ಬಂದ್ ಗೆ ಮದ್ದೂರು ತಾಲ್ಲೂಕಿನ ವರ್ತಕರು ಬೆಂಬಲ ಸೂಚಿಸಿದ್ದಾರೆ.

ಶೇ.23ರಂದು ಮದ್ದೂರು ತಾಲ್ಲೂಕು ಬಂದ್ ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ,
ಬಂದ್ ಕುರಿತು ಪೂರ್ವ ಸಿದ್ದತೆ ಸಭೆಯು ಮದ್ದೂರಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಸಭೆಯಲ್ಲಿ ವರ್ತಕರ ಸಂಘದ ವೀರಭದ್ರಸ್ವಾಮಿ ಮಾದನಾಯಕನಹಳ್ಳಿ, ಲಿಂಗೇಗೌಡ, ಜಾಮಿಯಾ ಮಸೀದಿ ಕಮಿಟಿ ಸಮಿತಿ ಅಧ್ಯಕ್ಷ ಆದಿಲ್ ಆಲಿಖಾನ್, ಬಾರ್ ಮಾಲೀಕರ ಸಂಘದ ಅಧ್ಯಕ್ಷ ಶಿವಪ್ಪ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶಶಿಗೌಡ, ಹೋಟೇಲ್ ಮಾಲೀಕರರಾದ ನಿವೃತ್ತ ಯೋಧ ಸತೀಶ್, ಸಿಪಾಯಿ ಶ್ರೀನಿವಾಸ್, ಸಿ ಟಿ ಶಂಕರ್, ತೊರೆಶೆಟ್ಟಹಳ್ಳಿ ನಾಗರಾಜ್, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ, ಒಕ್ಕಲಿಗರ ಸಂಘ, ಸವಿತಾ ಸಮಾಜ, ಜೈನ ಸಮಾಜ, ಪ್ರಾವಿಷನ್ ಸ್ಟೋರ್ ಸಂಘ, ಗ್ರಾ ಪಂ ಸದಸ್ಯರ ಸಂಘ, ವಕೀಲರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಮದ್ದೂರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ.

ಅಂದು ಬೆಳಿಗ್ಗೆ ಏಳೂವರೆಗೆ ಮದ್ದೂರು ಪ್ರವಾಸಿ ಮಂದಿರದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ,
ಸಭೆಯಲ್ಲಿ ವಳಗೆರೆಹಳ್ಳಿ ಶಂಕರೇಗೌಡ, ಗೊರವನಹಳ್ಳಿ ಪ್ರಸನ್ನ, ಮಹೇಶ್, ಹುಲಿಗೆರೆ ಪುರ ರವಿಗೌಡ, ಶಂಕರಪುರ ಅವಿನಾಶ್, ಗೋಪಿ, ಬೆಳತೂರು ರಮೇಶ್ ಅಜ್ಜಹಳ್ಳಿ, ಹಾಗಲಹಳ್ಳಿ ರಮೇಶ್ ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!