Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ತರಬೇತಿ ಕೇಂದ್ರಕ್ಕೆ ಕೊಠಡಿ ಮೀಸಲು : ಪಿಕಾರ್ಡ್ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯಾ – ಶಾಸಕ ಉದಯ್

ತರಬೇತಿ ಕೇಂದ್ರದ ಲಭ್ಯತೆ ಇಲ್ಲದೆ ತಾಲ್ಲೂಕು ಕೇಂದ್ರ ಮದ್ದೂರಿನಲ್ಲಿದ್ದ ಕೊರತೆ ನೀಗಿಸುವಲ್ಲಿ ಚಿಂತನೆ ನಡೆಸಿ ತಮ್ಮ ಬ್ಯಾಂಕ್ ಕಟ್ಟಡವನ್ನು ತರಬೇತಿ ಹಾಗು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿರುಸುವಲ್ಲಿ ಕಾಳಜಿ ತೋರಿರುವುದು ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಶಾಸಕ ಉದಯ್ ಅವರು ಪ್ರಶಂಸಿದರು.

ಪಟ್ಟಣದ ಪಿಕಾರ್ಡ್ ಬ್ಯಾಂಕ್ ನ ಕುವೆಂಪು ಸಭಾಂಗಣ ದ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು
ಜನರನ್ನು ಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ತರಬೇತಿ ಗಳು ಅತ್ಯವಶ್ಯಕವಾಗಿದೆ ಎಂದರು. ಈ ಕುವೆಂಪು ಸಭಾಂಗಣವು ಹೆಚ್ಚೆಚ್ಚು ಬಳಕೆ ಮಾಡುವ ಮೂಲಕ ಸಂಘ ಸಂಸ್ಥೆಗಳು ಮಾಹಿತಿ ಹಂಚಿಕೆಗೆ ಮುಂದಾಗಬೇಕು‌ ಎಂದರು.

ಪಂಚಾಯುತ್ ರಾಜ್ ವ್ಯವಸ್ಥೆ ಕುರಿತು ವಿಷಯ ಮಂಡಿಸಿದ ಕೆ. ರವಿಕುಮಾರ್ ಗ್ರಾಮಸ್ವರಾಜ್ಯದ ಆಶಯ ಗ್ರಾಮೀಣಾಭಿವೃದ್ಧಿಯೇ ಆಗಿದ್ದು, ಸಹಕಾರಿ ತತ್ವವು ಇದರಲ್ಲಿ ಅಡಗಿದೆ.  ಈ ನಿಟ್ಟಿನಲ್ಲಿ ಪಿ ಕಾರ್ಡ್ ಬ್ಯಾಂಕ್ ನ ಆಡಳಿತ ಮಂಡಳಿ ತನ್ನ ಬ್ಯಾಂಕ್ ಕಟ್ಟಡವನ್ನು ತರಬೇತಿಗೆ ಮೀಸಲಿರಿಸಿರುವುದು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ. ಜಿಲ್ಲಾ ಕೇಂದ್ರಗಳಲ್ಲಿ ಹಲವು ಸಭಾಂಗಣಗಳು ಕಲಾ ಮಂದಿರಗಳು ಸಾರ್ವಜನಿಕ ಬಳಕೆಗೆ ಮುಕ್ತವಾಗಿರುವುದರಿಂದ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಮೃದ್ದವಾಗಿವೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತರಬೇತಿಗಳು ತರಗತಿಗಳು ಲಭ್ಯ ಇವೆ
ಆದರೆ ತಾಲೂಕು ಕೇಂದ್ರವಾದ ಮದ್ದೂರಿನಲ್ಲಿ ಇಂತಹ ಸಭಾಂಗಣದ ಲಭ್ಯತೆ ಇಲ್ಲದ ಕಾರಣದಿಂದ ಸಾಂಸ್ಕೃತಿಕ ಚಟುವಟಿಕೆಗೆಳು ಸಾಹಿತ್ಯದ ಚಟುವಟಿಕೆಗಳಿಗೆ ಸೂಕ್ತ ವ್ಯವಸ್ಥೆ ಸೊರಗಿವೆ ಎಂದು ವಿಷಾದಿಸಿದರು

ಈ ನಿಟ್ಟಿನಲ್ಲಿ ತಾಂತ್ರಿಕ ಹಾಗೂ ಮೂಲಭೂತ ಸೌಕರ್ಯಗಳುಳ್ಳ ಸಭಾಂಗಣವನ್ನು ತಾಲೂಕಿನ ಜನತೆಗೆ ನೀಡುವಲ್ಲಿ ಪೀ ಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿ ಆರಂಭಿಕ ಪ್ರಯತ್ನ ಮಾಡಿದೆ. ತಾಲೂಕು ಆಡಳಿತ ಹಾಗೂ ಶಾಸಕರು ಇಂತಹ ಸೌಕರ್ಯಗಳ ವಿಸ್ತಾರಕ್ಕೆ ಶ್ರಮಿಸಬೇಕೆಂದರು.

ಅರುಣ್ ಕುಮಾರಿಯವರು ಮಾತನಾಡಿ ಜನರ ಜೀವನದಲ್ಲಿ ಶಿಸ್ತು ಎಷ್ಠು ಮುಖ್ಯವೋ ತಮ್ಮ ಆರ್ಥಿಕ ವ್ಯವಹರಣೆಯಲ್ಲಿ ಆರ್ಥಿಕ ಶಿಸ್ತು ಕೂಡ ಅಷ್ಠೇ ಮುಖ್ಯ ಎಂದರು.

ಮುಂದುವರಿದು ಮಾತನಾಡಿದ ಅವರು ತಮ್ಮ ತಮ್ಮ ಸಿಬಿಲ್ ಸ್ಕೋರ್ ಶುದ್ದವಾಗಿರಿಸಿಕ್ಕೊಂಡು ನಿರಂತರತೆ ಹಾ‍ಗೂ ಬದ್ದತೆಯನ್ನು ಕಾಯ್ದಕ್ಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಂಪೇಗೌಡರವರು ಕುವೆಂಪು‌ವಸಭಾಂಗಣ ಮಾಡುವಲ್ಲಿ ಆಡಳಿತ ಮಂಡಳಿ ನೀಡಿದ ಸಹಕಾರ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸವಿತಾ, ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಈರೇಗೌಡ, ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ, ಮುತ್ತುರಾಜು, ನೀರ್ದೆಶಕರಾದ ಸಿದ್ದೇಗೌಡ ಕುದರಗುಂಡಿ ಕೃಷ್ಣೇಗೌಡ ಕೊಪ್ಪ ದಾಸನಾಯಕ ತರಿಕೆರೆ, ಮಾರಸಿಂಗನಹಳ್ಳಿ ಗೌರಮ್ಮ ಮಾಜಿ ನಿರ್ದೇಶಕ ಸಿದ್ಸಲಿಂಗಸ್ವಾಮಿ, ಮಡೇನಹಳ್ಳಿ  ಹಾಗೂ ಮುಖಂಡರುಗಳಾದ ಬಿ. ವಿ. ಶಂಕರೇಗೌಡ, ಪ್ರಣಾಮ್, ಸತೀಶ್, ವಕೀಲರಾದ ಬೊಮ್ಮೆಗೌಡ, ಮೆಣಸಗೆರೆ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ಉಮಾಶಂಕರ್ ಎಸ್, ಬಿ. ಮಹಾದೇವ್  ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ