Thursday, November 19, 2026

ಪ್ರಾಯೋಗಿಕ ಆವೃತ್ತಿ

ಪುಟ್ಟ ಮಗುವಿನ ಮೇಲೆ ಆಟೋ ಡ್ರೈವರ್ ನ ಪೈಶಾಚಿಕ ಕೃತ್ಯ

ಮಂಡ್ಯ ನಗರದಲ್ಲಿ ಮೂರೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಆಟೋ ಡ್ರೈವರ್ ಒಬ್ಬ ಲೈಂಗಿಕ ಕಿರುಕುಳ ನೀಡುವ ಮೂಲಕ ಪೈಶಾಚಿಕ ಕೃತ್ಯ ನಡೆಸಿದ್ದಾನೆ.

ಮಂಡ್ಯ ನಗರದ ಬಡಾವಣೆಯೊಂದರ ಪೋಷಕರ ಮೂರೂವರೆ ವರ್ಷದ ಹೆಣ್ಣು ಮಗುವನ್ನು ಆಟೋದಲ್ಲಿ ಪ್ರತಿದಿನ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕಾಮಾಂಧ ಆಟೋ ಡ್ರೈವರ್ ಕಳೆದ ಜುಲೈ 17 ರಂದು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವ ವೇಳೆ ಪುಟ್ಟ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಆಟೋದಲ್ಲಿ ಇದ್ದ ಎಲ್ಲಾ ಮಕ್ಕಳನ್ನು ಮನೆಗೆ ಬಿಟ್ಟ ಚಾಲಕ ಬಳಿಕ ಒಂದು‌ ಹೆಣ್ಣು ಮಗುವಿನ ಜೊತೆ ಪೈಶಾಚಿಕ ಕೃತ್ಯ ಎಸಗಿದ್ದಾನೆ.

ಜಾಹೀರಾತು

ಮಗುವಿನ ಖಾಸಗಿ ಅಂಗಾಂಗಕ್ಕೆ ಗಾಯ ಮಾಡಿದ ಚಾಲಕನ ಕಿರುಕುಳ ತಾಳಲಾರದೆ ಮಗು ಜೋರಾಗಿ ಕಿರುಚಿಕೊಂಡಾಗ ಕಾಮಾಂಧ ಚಾಲಕ ಬಳಿಕ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆ.

ಮನೆಗೆ ಹೋದ ಮಗು ಪೋಷಕರಿಗೆ ಆಟೋ ಡ್ರೈವರ್‌ನ ಕೀಚಕ‌ತನ ಬಗ್ಗೆ ಅಳುತ್ತಾ ಹೇಳಿದೆ.ಕೂಡಲೇ ಮಗುವಿನ ಪೋಷಕರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ.

ಪೋಲಿಸರು ಕಾಮ ಪಿಶಾಚಿ ಆಟೋ ಡ್ರೈವರ್‌ನನ್ನು ಬಂಧಿಸಿ,ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ