Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ಧೂರು | ಜಲಾವೃತಗೊಂಡ ಪ್ರವಾಸಿಮಂದಿರ ಆವರಣ

ವರದಿ:ನ.ಲಿ.ಕೃಷ್ಣ, ಸಾಮಾಜಿಕ ಕಾರ್ಯಕರ್ತರು, ಕೃಷಿಕರು

ಯೋಜಿತವಲ್ಲದ ನಿರ್ಮಾಣ ಹಾಗು ನಿರ್ವಹಣೆ ಕೊರತೆಯಿಂದ ಮದ್ದೂರು ಪ್ರವಾಸಿಮಂದಿರ ಪ್ರವೇಶ ದ್ವಾರವು ಸೇರಿದಂತೆ ಜಲಾವೃತಗೊಂಡಿದೆ.

ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿಯೆ ಇರುವ ಪ್ರವಾಸಿ ಮಂದಿರದ ಈ ಸ್ಥಿತಿ ನಮ್ಮ ಅಭಿಯಂತರ ಕುಶಲತೆಯನ್ನ ಅಣಕಿಸುವಂತಿದೆ.

ಬೆಂಗಳೂರು-ಮೈಸೂರು ಮಧ್ಯದಲ್ಲಿ ಇರುವ ಮದ್ದೂರಿನ ಪ್ರವಾಸಿಮಂದಿರಕ್ಕೆ ಈ ರಸ್ತೆಯಲ್ಲಿ ಸಂಚಾರಿಸುವ ಎಲ್ಲಾ ಗಣ್ಯಾತಿಗಣ್ಯರು ಭೇಟಿ ನೀಡಿ ವಿರಮಿಸಿ ಹೋಗುವುದು ವಾಡಿಕೆ.

ಇಂದು ಗಣ್ಯರು ಭೇಟಿ ನೀಡಿದರೆ ಮದ್ದೂರಿನ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯಲು ಈ ಜಲರಾಶಿ ಕಾದಿರುವಂತಿದೆ.

ಪ್ರವಾಸಿ ಮಂದಿರದ ಆವರಣದಿಂದಿಡಿದು, ಸರ್ಕಾರಿ ಆಸ್ಪತ್ರೆವರೆಗೆ ಪೇಟೆ ಬೀದಿಯಲ್ಲೂ ನೀರು ನಿಂತಿದ್ದು ಪಾದಚಾರಿಗಳು ಸಂಚರಿಸುವಾಗ ವಾಹನಗಳು ಮೈಮೇಲೆ ನೀರೆಬ್ಬಿಸಬಹುದೆಂಬ ಭೀತಿಯಲ್ಲೆ ಸಂಚರಿಸುವ ಸ್ಥಿತಿ ಇದೆ.

ಕೆಎಸ್ಆರಟಿಸಿ ಬಸ್ ನಿಲ್ದಾಣದಲ್ಲಂತು ಯುಜಿಡಿ ನೀರಿನಿಂದ ಸರ್ವಿಸ್ ರಸ್ತೆ ಆವರಿಸಿ ಪ್ರಯಾಣಿಕರ ಕಷ್ಠ ಕೇಳುವವರೆ ಇಲ್ಲದಂತಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!