Thursday, November 19, 2026

ಪ್ರಾಯೋಗಿಕ ಆವೃತ್ತಿ

‘ಮಾದರಿ ಮಂಡ್ಯ’ದ ಕನಸ ಹೊತ್ತು ಮನೆ ಮನೆಗೆ ಮಧುಚಂದನ್ ಪಾದಯಾತ್ರೆ

‘ಮಾದರಿ ಮಂಡ್ಯ’ದ ಕನಸು ಹೊತ್ತು ಪ್ರತಿ ಮನೆಮನೆಯನ್ನು ತಲುಪುವ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಮಧುಚಂದನ್ ಅವರ ಪಾದಯಾತ್ರೆಗೆ ಸೋಮವಾರಕ್ಕೆ ಎಂಟು ದಿನಗಳಾಗಿದೆ.

ಮಂಡ್ಯ ನಗರ ವ್ಯಾಪ್ತಿಯಲ್ಲಿ ಬರುವ ಆರು ವಾರ್ಡ್ ಗಳ ಪ್ರತಿ ಮನೆಮನೆಯನ್ನು ಯಶಸ್ವಿಯಾಗಿ ತಲುಪಿ ತಾವು ಮಂಡ್ಯದ ಅಭಿವೃದ್ಧಿಗಾಗಿ ಕಟ್ಟಿಕೊಂಡಿರುವ ಕನಸುಗಳನ್ನು ಪ್ರತಿಯೊಬ್ಬ ನಾಗರಿಕರಿಗೂ ತಿಳಿಸುತ್ತಾ ಬರುತ್ತಿದ್ದಾರೆ. ಪಾದಯಾತ್ರೆಯೂ ಹೋದ ಕಡೆಯಲ್ಲೆಲ್ಲ ಅಲ್ಲಿಯ ಸ್ಥಳೀಯರ ಹಾಗೂ ಕೀರೆಮಡಿ ಮಹಿಳಾ ಸಂಘದ ಮಹಿಳೆಯರು ವಿವಿಧ ಆರತಿಗಳ ಮೂಲಕ ಸ್ವಾಗತ ಮಾಡುವುದಲ್ಲದೆ ಪ್ರತಿ ಮನೆಮನೆ ಗಳಿಗೂ ಮಹಿಳೆಯರೇ ಬಂದು ಪ್ರಚಾರ ಮಾಡುತ್ತಿರುವುದು ಗಮನಾರ್ಹವಾಗಿದೆ.

ಪಾದಯಾತ್ರೆಯು ಇಲ್ಲಿಯವರೆಗೂ ದೇವೇಗೌಡನ ದೊಡ್ಡಿ, ಚಿಕ್ಕೆಗೌಡನ ದೊಡ್ಡಿ, ಸ್ವರ್ಣಸಂದ್ರ, ಗೂಬೆ ಹಳ್ಳ , ಅರಕೇಶ್ವರ ನಗರ, ಇಂದಿರಾ ಕಾಲೋನಿ, ಬಸವನಗುಡಿ, ಮರಿಗೌಡ ಬಡಾವಣೆಗಳಲ್ಲಿ ಯಶಸ್ವಿಯಾಗಿ ಮುಗಿದಿದ್ದು ಇಂದು ತಾವರಗೆರೆ ಮತ್ತು ಉದಯಗಿರಿಯಲ್ಲಿ ತಮ್ಮ ಪ್ರಚಾರವನ್ನು ಮುಂದುವರಿಸಿದ್ದಾರೆ.

ಪ್ರತಿ ವಾರ್ಡ್ಗಳ ಸಮಸ್ಯೆಯನ್ನು ಆಲಿಸಿ ಅದನ್ನು ಪಟ್ಟಿ ಮಾಡಿಕೊಂಡು ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಲಾಗಿದ್ದು ಇದಕ್ಕೆ ಪೂರಕವಾಗಿ ನಗರದ ಎಸ್ ಟಿ ಜಯರಾಮ ಬಡಾವಣೆಯಲ್ಲಿ ಒಳ ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದ ಪರಿಣಾಮ ನಮ್ಮ ಸ್ವಂತ ಹಣದಿಂದ ಸರಿ ಮಾಡುತ್ತಿರುವುದು ಹಾಗೂ ಕೆಇಬಿ ಅಧಿಕಾರಿಗಳನ್ನು ಕರೆಸಿ ಹಾಳಾಗಿದ್ದ ಬೀದಿ ದೀಪದ ವ್ಯವಸ್ಥೆಯನ್ನು ಸರಿಪಡಿಸುವುದು ಉತ್ತಮ ನಿದರ್ಶನಗಳಾಗಿವೆ. ಎಂಟು ದಿನಗಳ ಈ ಪಾದಯಾತ್ರೆಯು ಬರೋಬರಿ 100 ಕಿ.ಮಿ. ಗಡಿ ದಾಟಿದ್ದು ಏಳು ವಾರ್ಡಗಳ ವ್ಯಾಪ್ತಿಯನ್ನು ಮುಗಿಸಿದೆ.

ಪಾದಯಾತ್ರೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅರಕೆರೆ ಪ್ರಸನ್ನ ಗೌಡ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಖಜಾಂಚಿಗಳಾದ ತಗ್ಗಳ್ಳಿ ಪ್ರಸನ್ನ, ಹಾಲಳ್ಳಿ ಮಹೇಶ್, ಪಿಡಿ ರಮೇಶ್, ಹುಲಿವಾನ ಜಗದೀಶ್ ,ಸಂತೋಷ್, ಪಲ್ಲವಿ, ಲೀಲಾಕುಮಾರಿ, ಶಶಿಕಲಾ, ನೇಹಾ ಹಾಗೂ ಇನ್ನಿತರರು ಮತಚಂದನ್ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ