‘ಮಧುರ ಕಾವ್ಯ’ ಆಯುರ್ವೇದ ಪಂಡಿತರ ನಡುವೆ ನಡೆಯುವ ಸಂಘರ್ಷಣೆಯ ಕಥೆಯಾಗಿದ್ದು, ಜೀವ ನೀಡುತ್ತಿರುವ ಆಯುರ್ವೇದ ಪಂಡಿತರೂ ಯಾರ ಜೀವವನನ್ನು ತೆಗೆಯಬಾರದು ಎಂಬ ನೀತಿಯನ್ನು ಸಾರುವ ಸಂದೇಶವನ್ನು ನೀಡುತ್ತದೆ ಎಂದು ನಿರ್ದೇಶಕ ಮಧುಸೂದನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರಭಾವವುಳ್ಳ ಅಲೋಪತಿ ಆಸ್ಪತ್ರೆಗಳು ಹಾಗೂ ಸಾವಿರಾರು ವರ್ಷಗಳಿಂದ ಮನೆಮದ್ದು ನೀಡುತ್ತಾ ಬಂದಿರುವ ಆಯುರ್ವೇದ ಪಂಡಿತರು, ತಮ್ಮ ಸಂಸ್ಕೃತಿಯೆಂದು ನಂಬಿ ಬದುಕುತ್ತಿರುವಾಗ ಅವರ ಮೇಲೆ ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಅನ್ಯಾಯಗಳನ್ನು ಹಾಗು ಕೊಲೆ ಪ್ರಯತ್ನಗಳು ನಡೆಸಿದಾಗ ಆಯುರ್ವೇದ ಪಂಡಿತರು ತಮ್ಮ ನೀತಿಯನ್ನು ಉಳಿಸಿಕೊಂಡು ಅವರೊಂದಿಗೆ ಹೇಗೆ ಹೋರಾಡುತ್ತಾರೆ ಎಂಬ ಕಥಾಹಂದರವನ್ನು ಹೊಂದಿದೆ. ಈ ಚಿತ್ರವು ಜು.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು.
ಚಿತ್ರ ತಾರಾಗಣದಲ್ಲಿ ಮಂಡ್ಯದ ತಗ್ಗಹಳ್ಳಿ ಯಶೋದ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದು, ಚಿತ್ರ ತಾರಾಗಣದಲ್ಲಿ ಮಧುಸೂದನ್, ರಾಜು ಕುಮಾರ್ ನಾವಿಕ್, ಅಣ್ಣಪ್ಪಸ್ವಾಮಿ, ನಾಚಪ್ಪ, ಜಗನ್ನಾಥಶೆಟ್ಟಿ, ಶ್ರೀನಿವಾಸ್ ಮತ್ತಿತರರು ಅಭಿನಯಿಸಿದ್ದಾರೆ ಎಂದರು.
ಚಿತ್ರಕ್ಕೆ ಉದಯ ಭಾಸ್ಕರ್ ಛಾಯಾಗ್ರಹಣವಿದ್ದು, ಸತೀಶ್ ಮೌರ್ಯ ಸಂಗೀತವಿದೆ. ಸೇತು ಸೌಂಡ್ ಎಫೆಕ್ಟ್, ಕುಮಾರ್ ಡಿ.ಟಿ.ಎಸ್, ಜನನ್ನಾಥಶೆಟ್ಟಿ ಕಲರಿಂಗ್, ಶ್ರೀನಿವಾಸ್ ಡಬ್ಬಿಂಗ್ ಚಿತ್ರಕ್ಕಿದೆ, ಹಾಡುಗಳನ್ನು ಗಾಯಕರಾದ ರಾಜೇಶ್ ಕೃಷ್ಣ, ಮಧುಬಾಲಕೃಷ್ಣ ಹಾಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಚಿತ್ರತಂಡ ಸತೀಶ್ ಮೌರ್ಯ, ತಗ್ಗಹಳ್ಳಿ ಯಶೋದ, ಶ್ರೀನಿವಾಸ್ ಮತ್ತಿತರರಿದ್ದರು.




