Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಷ ದಸರಾ ಮುಗಿಯುವವರೆಗೆ ಪ್ರತಾಪ್ ಸಿಂಹ ಬಂಧಿಸಲು ಆಗ್ರಹ

ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ. ಹಾಗಾಗಿ ಮಹಿಷ ದಸರಾ ಮುಗಿಯುವವರೆಗೆ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಎಂದು ಮಾಜಿ ಮೇಯರ್ ಪುರುಷೋತ್ತಮ ಆಗ್ರಹಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ನಮ್ಮ ಸಮಿತಿ ವತಿಯಿಂದ ಅವರನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇವೆ. ಇವರು ಸಂಘರ್ಷಕ್ಕೂ ಸಿದ್ದ ಎಂಬ ಪದ ಬಳಸಿದ್ದಾರೆ. ಅವರನ್ನು ಯಾರು ಸಂಘರ್ಷಕ್ಕೆ ಕರೆದಿದ್ದಾರೆ, ಅವರೊಟ್ಟಿಗೆ ಸಂಘರ್ಷ ಮಾಡಲಿ. ಅವರ ಹೇಳಿಕೆ ನೋಡುತ್ತ ಕುಳಿತಿರುವ ಪೊಲೀಸರು ಮತ್ತು ಜಿಲ್ಲಾಡಳಿತ ಈಗಾಗಲೇ ಅವರನ್ನು ಬಂಧಿಸಬೇಕಿತ್ತು” ಎಂದು ಕಿಡಿಕಾರಿದ್ದಾರೆ.

”ಸಂಸದ ಪ್ರತಾಪ್ ಸಿಂಹ ತಮ್ಮ ರಾಜಕೀಯಕ್ಕಾಗಿ ಚಾಮುಂಡಿ ಚಲೋ ಕರೆ ನೀಡಿದ್ದಾರೆ. ನಾವು ಚಾಮುಂಡಿ ವಿರೋಧಿಗಳಲ್ಲ. ಪ್ರತಾಪಸಿಂಹ ಅವರಂತಹ ಸಂಸದರನ್ನು ನಾನು ಕಂಡಿಲ್ಲ. ವೈಯಕ್ತಿಕ ದ್ವೇಷಕ್ಕಿಳಿಯುವುದು ನಮ್ಮ ಮನಸ್ಥಿತಿಯಲ್ಲ. ಹೀಗಾಗಿ ನಾವು ಯಾವ ಸಂಘರ್ಷಕ್ಕೂ ಇಳಿಯದೇ ಕಾರ್ಯಕ್ರಮ ಮಾಡುತ್ತೇವೆ” ಎಂದು ಹೇಳಿದ್ದಾರೆ.

”ನಾವು ಬೇರೊಬ್ಬರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುವುದಿಲ್ಲ. ಅವರ ಪಾಡಿಗೆ ಅವರು ಪ್ರತಿಭಟನೆ ಮಾಡಿದರೆ ಮಾಡಿಕೊಳ್ಳಲಿ, ನಾವು ನಮ್ಮ ಪಾಡಿಗೆ ಕಾರ್ಯಕ್ರಮ ಮಾಡುತ್ತೇವೆ” ಎಂದು ತಿಳಿಸಿದರು.

ಈ ವೇಳೆ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ”ಮಹಿಷ ದಸರಾವನ್ನು ಬಿ.ಟಿ.ಲಲಿತಾ ನಾಯಕ್ ಉದ್ಘಾಟನೆ ಮಾಡುತ್ತಾರೆ. ಬೆಳಗ್ಗೆ 8.30ಕ್ಕೆ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು. ಅಂದು ಅಶೋಕಪುರಂ ಉದ್ಯಾನವನದಿಂದ ಬೈಕ್​ ​ರ‍್ಯಾಲಿ ಹೊರಡಲಿದೆ. ಬೆಳಗ್ಗೆ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ವಾಪಸಾಗುತ್ತೇವೆ. ಅಂದು ಬೆಳಗ್ಗೆ 11 ಗಂಟೆಗೆ ಟೌನ್​ಹಾಲ್​ನಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!