Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಸತ್ತಿನಲ್ಲಿ ಮುಸ್ಲಿಂ ವಿರೋಧಿ ನಿಂದನೆ| ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ ಎಂದ ಮಹುವಾ ಮೊಯಿತ್ರಾ

ಬಹುಜನ ಸಮಾಜ ಪಕ್ಷದ ಮುಸ್ಲಿಂ ಸಂಸದರ ವಿರುದ್ಧ ಬಿಜೆಪಿ ಸಂಸದ ಸಂಸತ್ತಿನಲ್ಲಿಯೇ ಕೋಮು ದೂಷಣೆ ಮಾಡಿದ ನಂತರ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಈ ವಿಚಾರವಾಗಿ ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿದ ಮೊಯಿತ್ರಾ, ”ಬಿಜೆಪಿ ಇಂತಹ ದ್ವೇಷದ ವಾತಾವರಣ ಸೃಷ್ಟಿಸಿದೆ. ಅವರು ಬಹಿರಂಗವಾಗಿ ಇಂತಹ ವಿಷಯಗಳನ್ನು ಹೇಳುವುದನ್ನು ಸಾಮಾನ್ಯಗೊಳಿಸಿದ್ದಾರೆ” ಎಂದು ಹರಿಹಾಯ್ದರು.

ಈ ದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ವಿರುದ್ಧ ದ್ವೇಷದ ಭಾಷಣ ಮಾಡುತ್ತಿರುವುದನ್ನು ನೋಡಿ ನನಗೆ ಅಸಹ್ಯವೆನಿಸುತ್ತದೆ. ಆದರೆ ಈಗ ”ಬಿಜೆಪಿಯ ನಿಜವಾದ ಬಣ್ಣ ಬಯಲಾಗಿರುವುದು ಸಂತೋಷವಾಗಿದೆ” ಎಂದು ಹೇಳಿದರು.

ದಕ್ಷಿಣ ದೆಹಲಿಯ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರಿಗೆ ಅವಹೇಳನಕಾರಿ ಪದಗಳನ್ನು ಬಳಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದ ನಂತರ ವಿವಾದ ಭುಗಿಲೆದ್ದಿದೆ.

ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಲಿ ಪತ್ರ ಬರೆದಿದ್ದಾರೆ. ಕ್ರಮ ತೆಗೆದುಕೊಳ್ಳದಿದ್ದರೆ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?

”ಅವರು ನನ್ನ ವಿರುದ್ಧ ಅತ್ಯಂತ ಅಸಹ್ಯಕರ, ನಿಂದನೀಯ ಆಕ್ರಮಣ ಮಾಡಿದ್ದಾರೆ … ಅವರು ನನ್ನ ವಿರುದ್ಧ ಬಳಸಿದ ಪದಗಳಲ್ಲಿ ‘ಭದ್ವಾ’ (ಪಿಂಪ್), ‘ಕಟ್ವಾ’ (ಸುನ್ನತಿ ಮಾಡಿಸಿಕೊಂಡವರು), ‘ಮುಲ್ಲಾ ಉಗ್ರವಾದಿ’ ಮತ್ತು ‘ಮುಲ್ಲಾ ಆಟಂಕ್ವಾಡಿ. ‘(ಮುಸ್ಲಿಂ ಭಯೋತ್ಪಾದಕ) ಇತ್ಯಾದಿ… ಇದು ಅತ್ಯಂತ ದುರದೃಷ್ಟಕರ ಮತ್ತು ಸ್ಪೀಕರ್ ಆಗಿ ನಿಮ್ಮ ನೇತೃತ್ವದ ಹೊಸ ಸಂಸತ್ತಿನ ಕಟ್ಟಡದಲ್ಲಿ ಇದು ನಡೆದಿದೆ. ಈ ಮಹಾನ್ ರಾಷ್ಟ್ರದ ಅಲ್ಪಸಂಖ್ಯಾತ ಸದಸ್ಯ ಮತ್ತು ಚುನಾಯಿತ ಸಂಸದನಾಗಿ ನನಗೆ ನಿಜವಾಗಿಯೂ ಹೃದಯ ವಿದ್ರಾವಕ ಎನಿಸಿದೆ” ಎಂದು ಬರೆದಿದ್ದಾರೆ.

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, ”ಬಿಧುರಿಯನ್ನು ಉದಾಹರಣೆಯಾಗಿ ಮಾಡಬೇಕು. ಸಮಸ್ಯೆ ಬಿಧುರಿಯೊಬ್ಬರದ್ದಲ್ಲ, ಸಮಸ್ಯೆ ಏನೆಂದರೆ, ಬಿಜೆಪಿಯವರು ಇಂತಹ ಮಾತುಗಳನ್ನು ಬಹಿರಂಗವಾಗಿ ಹೇಳುವುದನ್ನು ಸಾಮಾನ್ಯಗೊಳಿಸಿದ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ. ಜನರು ಬಿಜೆಪಿಯ ನಿಜವಾದ ಬಣ್ಣವನ್ನು ನೋಡಿದ್ದಾರೆ” ಎಂದರು.

”ಒಂದು ಘಟನೆ ಬಗ್ಗೆ ನನಗೆ ಅಸಹ್ಯ ಹುಟ್ಟಿದೆ. ಆದರೆ ಒಂದು ರೀತಿಯಲ್ಲಿ ನನಗೆ ಸಂತೋಷವಾಗಿದೆ ಏಕೆಂದರೆ ಜನರು ಬಿಜೆಪಿಯ ನಿಜವಾದ ಬಣ್ಣವನ್ನು ನೋಡುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.

“ವಿಶ್ವದ ಅತ್ಯುನ್ನತ,  ಶ್ರೇಷ್ಠ ಪ್ರಜಾಪ್ರಭುತ್ವ ದೇಶದಲ್ಲಿ ಚುನಾಯಿತ ಪ್ರತಿನಿಧಿಯಾಗಿರುವ ಸಂಸದರ ಮುಖಕ್ಕೆ “ಈಸ್ ಮುಲ್ಲೆ ಕೊ ನಿಕಾಲ್ ಕೊ (ಈ ಮುಸಲ್ಮಾನನನ್ನು ಒದೆಯಿರಿ) ಎಂದು ನೀವು ಹೇಳಿದಂತಿದೆ ನಿಮ್ ಮಾತುಗಳು…” ಎಂದು ಮೋಯಿತ್ರಾ ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!